ನಾನು ನಿನ್ನನ್ನು ಹೇಗೆ ಪ್ರೀತಿಸಲಿ?

ಅನುವಾದ : ಭಾವನ_ಟಿ.
ಮೂಲ : ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್

ನಾನು ನಿನ್ನನ್ನು ಹೇಗೆ ಪ್ರೀತಿಸಲಿ? ನನಗೆ ಮಾರ್ಗಗಳನ್ನು ಎಣಿಕೆ ಮಾಡಲು ಬಿಡು.

ನಾನು ನಿನ್ನನ್ನು ಆಳಕ್ಕೆ ಹಾಗೂ ವಿಸ್ತಾರವಾಗಿ ಹಾಗೂ ಉನ್ನತಮಟ್ಟದಲ್ಲಿ ಪ್ರೀತಿಸುತ್ತೇನೆ.
ನನ್ನ ಆತ್ಮ ತಲುಪಬಹುದು, ನೀನು ಕಾಣದೇ ದೂರಾಗುವ ಅನುಭವವಾದಾಗ
ಅಸ್ತಿತ್ವದ ಅಂತ್ಯಕ್ಕಾಗಿ ಮತ್ತು ಪರಮಶ್ರೇಷ್ಠ ಅನುಗ್ರಹಕ್ಕಾಗಿ.

ನಾನು ನಿನ್ನನ್ನು ದಿನಚರಿಯಂತೆ ದೈನಂದಿನ ಮಟ್ಟದಲ್ಲಿ ಪ್ರೀತಿಸುತ್ತೇನೆ,
ಮನಃಶಾಂತಿಯ ಅತ್ಯಂತ ಅಗತ್ಯತೆಗಳಾಗಿರುವ, ಸೂರ್ಯ ಮತ್ತು ಮೇಣದಬತ್ತಿಯ ಬೆಳಕಿನ ಮೂಲಗಳಂತೆ.

ಬಲಕ್ಕಾಗಿ ಶ್ರಮಿಸುವ ಪುರುಷರಂತೆ, ನಾನು ನಿನ್ನನ್ನು ಮುಕ್ತವಾಗಿ ಪ್ರೀತಿಸುತ್ತೇನೆ.
ಅವರು ಹೊಗಳಿಕೆಯಿಂದ ತಿರುಗುವಂತೆ, ನಾನು ನಿನ್ನನ್ನು ಸ್ವಚ್ಛಂದವಾಗಿ ಪ್ರೀತಿಸುತ್ತೇನೆ.

ಇದನ್ನೂ ಓದಿ:ಮಣಿಪುರ ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣ : ಪ್ರತಿರೋಧವಾಗಿ ಹೊರ ಹೊಮ್ಮಿದ ಕವಿತೆಗಳು

ಆ ಎಲ್ಲಾ ಭಾವೋದ್ರೇಕ ಸಂಗತಿಗಳ ಪ್ರಸ್ತುತತೆಯೊಂದಿಗೆ ನಾನು ನಿನ್ನನ್ನು ಪ್ರೀತಿಸುತ್ತೇನೆ
ನನ್ನ ಹಳೆಯ ದುಃಖ ಹಾಗೂ ಬಾಲ್ಯದ ನಂಬಿಕೆಗಳೊಂದಿಗೆ.

ನನ್ನ ಕಳೆದುಹೋದ ಸಂತರೊಂದಿಗಿನ
ಕಳೆದುಹೋದಂತೆ ಕಂಡ ಪ್ರೀತಿಯಂತೆ ನಾನು ನಿನ್ನನ್ನು ಪ್ರೀತಿಸುತ್ತೇನೆ.
ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಉಸಿರಿನೊಂದಿಗೆ,
ನನ್ನ ಬದುಕಿನುದ್ದದ ಮಂದಹಾಸ, ಕಣ್ಣೀರ ಹನಿಗಳೊಂದಿಗೆ ;
ಮತ್ತು ಆ ದೈವ ಬಯಸಿದರೆ,
ನಾನು ಪ್ರೀತಿ ಮಾಡುತ್ತೇನೆ, ಆದರೆ ನಾನು ನನ್ನ ಸಾವಿನ ನಂತರವೂ ನಿನ್ನನ್ನು ಪ್ರೀತಿಸುತ್ತೇನೆ.

 

Donate Janashakthi Media

Leave a Reply

Your email address will not be published. Required fields are marked *