ವಸತಿ ನಿಲಯ ವಿದ್ಯಾರ್ಥಿನಿಯರಿಗೆ ಮೂಲಭೂತ ಸೌಕರ್ಯಗಳಿಂದ ವಂಚನೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಬಿಸಿಎಮ್ ಇಲಾಖೆಯ ಅನ್ಯಾಯ ಖಂಡನೀಯಎಸ್ಎಫ್ಐ

ರಾಣೇಬೆನ್ನೂರ: ನಗರದ ಕಮಾಲ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ ಊಟದ ವ್ಯವಸ್ಥೆ ಸರಿಪಡಿಸಿ, ಗುಣಮಟ್ಟದ ಆಹಾರ ನೀಡುವಂತೆ ಒತ್ತಾಯಿಸಿ ಹಾಗೂ ಸರಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿನಿಯರನ್ನು ವಂಚಿಸುತ್ತಿರುವುದನ್ನು ವಿರೋಧಿಸಿ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ವಸತಿ ನಿಲಯದ ಮುಂದೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಣೇಬೆನ್ನೂರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಮಾನ್ಯ ಗ್ರೇಡ್-2 ತಾಲ್ಲೂಕು ವಿಸ್ತಾರಣಾಧಿಕಾರಿ ಪ್ರಸಾದ್ ಆಲದಕಟ್ಟಿ ರವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಅಗತ್ಯ ಮೂಲಭೂತ ಸೌಕರ್ಯಗಳಿಂದ ವಂಚನೆ ಮಾಡುತ್ತಿರುವುದು ಸರಿಯಲ್ಲ ಖಂಡನೀಯ ವಿಚಾರವಾಗಿದೆ. 250 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಆಶ್ರಯವಾಗಿರುವ ಈ ವಸತಿ ನಿಲಯದಲ್ಲಿ ಸರ್ಕಾರ ನೀಡುವ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಮೇನ್ ಚಾರ್ಟ್ ಪ್ರಕಾರವಾಗಿ ಊಟ, ಉಪಚಾರ, ಸೌಲಭ್ಯಗಳು ಸಿಗುತ್ತಿಲ್ಲವೆಂದು ವಿದ್ಯಾರ್ಥಿಗಳು ಎಸ್ಎಫ್ಐ ಕಾರ್ಯಕರ್ತರ ಮುಂದೆ ತಮ್ಮ ಅಳಲು ತೊಡಿಕೊಂಡರು.

ಸರಿಯಾದ ಸಮಯಕ್ಕೆ ಸರಿಯಾದ ಊಟದ ವ್ಯವಸ್ಥೆ ಮಾಡುತ್ತಿಲ್ಲ ಗುಣಮಟ್ಟದ ಆಹಾರ ನೀಡುವಂತೆ ಅನೇಕ ಬಾರಿ ಹೇಳಿದ್ದರೂ ಹಾಗೂ ಕಳೆದ ಕೆಲವು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆ ಎದುರಾಗಿದೆ. ಸರ್ಕಾರದ ಆಯುಕ್ತರ ಆದೇಶದ ಪ್ರಕಾರ ನೀಡಬೇಕಾದ ಊಟದ ಮೆನ್ ಬದಲಾವಣೆ ಮಾಡಿ ತಮಗೆ ಬೇಕಾಗಿರುವ ತರಹ ವಿದ್ಯಾರ್ಥಿಗಳ ಊಟಕ್ಕೆ ಕತ್ತರಿ ಹಾಕಿರುವವರು ಯಾರು?

ಇದನ್ನೂ ಓದಿ: ಬೆಳವಣಿಗೆಯ ಎರಡು ಪರ್ಯಾಯ ನಮೂನೆಗಳು

ಉತ್ತಮ ಗುಣಮಟ್ಟದ ಆಹಾರ ನಿಡುತ್ತಿಲ್ಲ, ತರಕಾರಿ ಸಾಂಬಾರ, ಪಲ್ಯೆಗಳಲ್ಲಿ ತರಕಾರಿ ಹಾಕುವುದಿಲ್ಲ, ಬರಿ ಬೇಳೆ ಸಾರು ಮಾಡುತ್ತಾರೆ, ಮಂಡಕ್ಕಿ ಸೇರಿದಂತೆ ವಿವಿಧ ತಿಂಡಿ ತಿನಿಸುಗಳಲ್ಲಿ ಅಡುಗೆ ಎಣ್ಣೆ ಬಳಸುವುದಿಲ್ಲ, ಒಟ್ಟಾರೆ ರುಚಿಕರ ಆಹಾರ ನೀಡುವುದಿಲ್ಲ. ಪ್ರತಿ ಬುಧವಾರ ನೀಡಬೇಕಾದ ಚಿಕನ್‌ ಕೂಡ ಕತ್ತರಿ ಹಾಕಿ ಕೇವಲ ತಿಂಗಳಿಗೆ ಎರಡು ಬಾರಿ ನೀಡುತ್ತಿದ್ದಾರೆ. 200 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೇವಲ 4 ಕೆಜಿ ಚಿಕನ್ ನೀಡುತ್ತಾರೆ. ಮೊಟ್ಟೆ, ಬಾಳೆಹಣ್ಣಗಳನ್ನು ಸರಿಯಾಗಿ ನೀಡುವುದಿಲ್ಲ. ಒಟ್ಟಾರೆ ಹಾಜರಾತಿ ತಕ್ಕಂತೆ ಆಹಾರ ನೀಡುವುದಿಲ್ಲ.

ನೂರಾರು ವಿದ್ಯಾರ್ಥಿಗಳಿಗೆ ತಕ್ಕಂತೆ ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ ಮೂರು ರೂಮ್ ಗಳಿಗೆ ಬೀಗ ಹಾಕಿದ್ದಾರೆ. ಗ್ರಂಥಾಲಯಗಳಲ್ಲಿ ಬಿಇಎಡ್  ಸೇರಿದಂತೆ ಅನೇಕ ವಿದ್ಯಾರ್ಥಿಗಳಿಗೆ ವಿಷಯವಾರು ಪುಸ್ತಕಗಳು ದೊರೆಯುತ್ತಿಲ್ಲ. ಬೇಸಿಗೆ ಕಾಲ ವಿಪರೀತ ಬಿಸಿಲಿನ ತಾಪವಿರುವ ಸಂದರ್ಭದಲ್ಲೂ ರೂಮ್ ಗಳಿಗೆ ಸರಿಯಾಗಿ ಫ್ಯಾನ್ ಗಳನ್ನು ಆಳವಡಿಸಿಲ್ಲ. ಇಡೀ ವಸತಿ ನಿಲಯದ ಮೂಲಭೂತ ಸೌಕರ್ಯಗಳಿಂದ ವಂಚನೆ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಗಂಭೀರವಾಗಿ ಆರೋಪಿಸಿದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಈ ಕೂಡಲೆ ಹಾಸ್ಟೆಲ್ ನಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕು, ವಿದ್ಯಾರ್ಥಿನಿಯರನ್ನು ತಮ್ಮ ಮಕ್ಕಳ ರೀತಿಯಲ್ಲಿ ಪೋಷಿಸಿಬೇಕು. ‘‘ವಸತಿ ನಿಲಯದಲ್ಲಿನ ಕೆಲ ಸಮಸ್ಯೆಗಳ ಜೊತೆಗೆ ಸೂಕ್ತ ಆಹಾರದ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ತೊಂದರೆಯಾಗಿದೆ. ಈ ಕೂಡಲೇ ಊಟದ ವ್ಯವಸ್ಥೆ ಸರಿಪಡಿಸಿ, ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಸರಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿನಿಯರನ್ನು ವಂಚಿಸುತ್ತಿರುವ ವಿದ್ಯಾರ್ಥಿ ವಿರೋಧಿ ನೀತಿ ಸರಿಯಲ್ಲ.

ಜಿಲ್ಲೆಯ ಎಲ್ಲಾ ವಸತಿ ನಿಲಯಗಳಲ್ಲಿ ಆಹಾರದ ಮೆನ್ ಚಾರ್ಟ್ ಬದಲಾವಣೆ ಮಾಡಿ ಬಾರಿ ದೊಡ್ಡ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಪ್ರತಿ ವಸತಿ ನಿಲಯಗಳಲ್ಲೂ ಆಯುಕ್ತರ ಆದೇಶದ ಪ್ರಕಾರ ಊಟದ ಮೆನ್ ಅಳವಡಿಸಬೇಕು. ಉಲ್ಲಂಘನೆ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತಕ್ಕಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮುಂದಿನ ದಿನ ದೂರ ನೀಡಲಾಗುವುದು ಎಂದು ಗಂಭೀರವಾಗಿ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಅಧ್ಯಕ್ಷ ಗೌತಮ್ ಸಾವಕ್ಕನವರ ಮಾತನಾಡಿ, ವಿದ್ಯಾರ್ಥಿನಿಯರಿಗೆ ಸರಿಯಾದ ಸರಕಾರಿ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿರುವುದು ಖಂಡನೀಯ.  ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಗ್ರಂಥಾಲಯದಲ್ಲಿ ಯಾವುದೇ ಪುಸ್ತಕ ನೀಡುತ್ತಿಲ್ಲ, ಊಟದ ವ್ಯವಸ್ಥೆಯಲ್ಲಿ ತಾರತಮ್ಯ ಬಿಟ್ಟು ಅನಿಯಮಿತ ಹಾಗೂ ಉತ್ತಮ ಗುಣಮಟ್ಟದ ಆಹಾರ ಸೇರಿದಂತೆ ವಿದ್ಯಾರ್ಥಿನಿಯರ ನ್ಯಾಯಯುತ ಎಲ್ಲಾ ಬೇಡಿಕೆಗಳನ್ನು ಒಂದು ವಾರದ ಒಳಗೆ ಈಡೇರಿಸಲು ಅಧಿಕಾರಿಗಳು ಮುಂದಾಗಬೇಕು ಒಂದು ವೇಳೆ ನಿರ್ಲಕ್ಷಿಸಿದರೆ ಹಾಸ್ಟೆಲ್ ಎದುರು ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಉಪಾಧ್ಯಕ್ಷ ಬಸವರಾಜ ಕೊಣಸಾಲಿ, ಮಹೇಶ್ ಮರೋಳ, ಗುಡ್ಡಪ್ಪ ಮಡಿವಾಳರ, ನೀಲಮ್ಮ ಕಡಕೋಳ, ಸುಮತಿ ಕರೆಯಣ್ಣನವರ, ರಾಧಿಕಾ ಹೊನ್ನಪ್ಪನವರ, ನಾಗರತ್ನ ಸಿ ಎಸ್, ಕಾವ್ಯ ರಾಠೋಡ್, ಭಾಗೀರಥ ಯಳಮೇಲೆ, ಪ್ರಿಯಾ ಎಚ್, ಮೇಘಾ ವೈ, ಭವ್ಯ, ಚೈತ್ರ ಬಿ ಕೆ, ಸಂಗೀತಾ, ರಕ್ಷಿತಾ ಆರ್, ಸುಪ್ರಿತಾ ಎಸ್, ಮಾಲಾ ಎನ್ ಕೆ, ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಇದನ್ನೂ ನೋಡಿ: Karnataka Legislative Assembly Live Day 14 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ ದಿನ 14

Donate Janashakthi Media

Leave a Reply

Your email address will not be published. Required fields are marked *