ಹೊಸಪೇಟೆ: ಪ್ಯಾಲೆಸ್ಟೈನ್ ಪರ ವಾಟ್ಸಪ್‌ ಸ್ಟೇಟಸ್‌ ಹಾಕಿದ್ದ ಯುವಕನ ಬಂಧನ

ವಿಜಯನಗರ : ಪ್ಯಾಲೆಸ್ಟೈನ್ ಪರವಾಗಿ ವಾಟ್ಸಪ್‌ನಲ್ಲಿ ಸ್ಟೇಟಸ್ ಹಾಕಿದ್ದ ವಿಜಯನಗರದ ಹೊಸಪೇಟೆ ಮುಸ್ಲಿಂ ಯುವಕನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ. 

ಹೊಸಪೇಟೆಯ ಸಿದ್ದಲಿಂಗಪ್ಪ ಚೌಕಿ ನಿವಾಸಿ ಹಾಗೂ ಅಲ್ಪಸಂಖ್ಯಾತ ಇಲಾಖೆ ಕಚೇರಿಯ ಅಟೆಂಡರ್ ಆಲಂ ಭಾಷಾ ( 20 ) ಬಂಧಿತ ಯುವಕ ಎಂದು ತಿಳಿದು ಬಂದಿದೆ. ತನ್ನ ವಾಟ್ಸಪ್‌ನಲ್ಲಿ ಪ್ಯಾಲೆಸ್ಟೈನ್ ಪರವಾಗಿ ಸ್ಟೇಟಸ್‌ ಹಾಕಿಕೊಂಡಿದ್ದ ಹಾಗೂ ಮೊಬೈಲ್‌ನಲ್ಲಿಪ್ಯಾಲೆಸ್ಟೈನ್‌ ದೇಶದ ಜನರಿಗೆ ಬೆಂಬಲ ನೀಡುವಂತಹ ವೀಡಿಯೋ ಇಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ದೇವನಹಳ್ಳಿ: ಮರ್ಯಾದೆಗೇಡು ಹತ್ಯೆ | ಮಗಳನ್ನು ಕೊಂದ ತಂದೆ

ʼಆರೋಪಿಯ ವಿರುದ್ಧ ಸ್ವಯಂ ಪ್ರೇರಣೆಯಿಂದ ಸಿಆರ್‌ಪಿಸಿ 108–151 ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತಹಶೀಲ್ದಾರ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್‌ ಗೆ ಬೆಂಬಲ ಸೂಚಿಸಿರುವಾಗ, ಫೆಲೆಸ್ತೀನ್‌ ಪರವಾಗಿ ಪೋಸ್ಟ್‌ ಹಾಕುವುದು ರಾಜದ್ರೋಹದ ಕೃತ್ಯʼʼ ಎಂದು ಹೊಸಪೇಟೆ ಪಟ್ಟಣ ಪೊಲೀಸ್‌ ಠಾಣೆಯ ಪಿಎಸ್‌ ಐ‌ ಪ್ರತಿಕ್ರಿಯಿಸಿದ್ದಾರೆ.

ತಹಶೀಲ್ದಾರ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಯುವಕ ಆಲಂ ವಿಜಯನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮೀತಿ ಅಧ್ಯಕ್ಷನ ಸಂಬಂಧಿ ಎಂದು ತಿಳಿದುಬಂದಿದೆ.

ಪೊಲೀಸರ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಯುದ್ದದಿಂದ ನಲುಗಿದ ದೇಶದಪರವಾಗಿ ಅನುಕಂಪ ತೋರಿಸುವುದು. ಯುದ್ದದಿಂದ ಅನಾಹುತಗಳು ಸಂಭವಿಸುತ್ತವೆ ಎಂದು ಹೇಳುವುದು ರಾಜದ್ರೋಹದ ನಡೆ ಹೇಗೆ ಆಗುತ್ತಿದೆ. ಆ ವ್ಯಕ್ತಿ ಮುಸ್ಲಿಂ ಎನ್ನುವ ಕಾರಣಕ್ಕಾಗಿಯೇ ಉದ್ದೇಶಪೂರ್ವಕವಾಗಿ ದೂರು ದಾಕಲಿಸಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ವಿಡಿಯೋ ನೋಡಿ: ಕೇಂದ್ರೀಯ ವಿ.ವಿ. ‘ಸತ್ಯನಾರಾಯಣ’ನ ಗುಡಿಯಲ್ಲ – ಹೋರಾಟಗಾರರ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *