ರಾಯಚೂರು: ಬಿಸಿಲ ನಾಡು ರಾಯಚೂರಿನಲ್ಲಿ ಹೋಳಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪರಸ್ಪರ ಬಣ್ಣ ಎರಚಿಕೊಂಡು ಜನ ಸಂಭ್ರಮ ಪಡುತ್ತಿದ್ದಾರೆ. ಬಿರುಬೇಸಿಗೆಯಲ್ಲಿ ಹೋಳಿ ಹಬ್ಬ ಜನರಿಗೆ ತಂಪನೆರೆಯುತ್ತಿದೆ. ವಯಸ್ಸಿನ ಭೇದ ಮರೆತು ಮಹಿಳೆಯರು ,ವೃದ್ದರು, ಮಕ್ಕಳು ಹೋಳಿಯಲ್ಲಿ ಮಿಂದೇಳುತ್ತಿದ್ದಾರೆ.
ಇದನ್ನು ಓದಿ :-ನಟಿ ರಾನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣ: ಕರ್ನಾಟಕದಲ್ಲಿ ED ದಾಳಿ
ಸಂಗೀತಕ್ಕೆ ನೃತ್ಯ ಮಾಡುವ ಮೂಲಕ ಹೋಳಿ ಆಚರಣೆ ಮಾಡಲಾಗುತ್ತಿದೆ. ಕಾಮಣ್ಣನ ದಹನ ಬಳಿಕ ಬೆಳಿಗ್ಗೆಯಿಂದಲೇ ಹೋಳಿ ಆಚರಣೆ ಜೋರಾಗಿದೆ.ರಾಯಚೂರು ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಆಚರಣೆ ಜೋರಾಗಿ ನಡೆದಿದೆ. ಬೆಳಿಗ್ಗೆಯಿಂದ ರಂಗಪಂಚಮಿ ಸಂಭ್ರಮ ಅದ್ದೂರಿಯಾಗಿ ನಡೆದಿದೆ.ಬಿಸಿಲನಾಡಿನ ಬೇಸಿಗೆಯ ಬಿಸಿಲ ಬೇಗೆಯನ್ನ ಹೋಳಿ ಹಬ್ಬ ತಣಿಸುವಂತೆ ಮಾಡಿದೆ.
ಇದನ್ನೂ ಓದಿ : ರಾಜ್ಯ ಬಜೆಟ್ 2025 | ಸಾರಿಗೆ ವಲಯಕ್ಕೆ ಸಿಕ್ಕಿದ್ದೆಷ್ಟು – ಕೈ ಬಿಟ್ಟಿದ್ದೆಷ್ಟು