ಹಳಸಲು ಹಿಂದುತ್ವ ಮಿಥ್ಯೆಗಳ ಹೊಸ ಮೋದಿ ಆವೃತ್ತಿ

ರಾಮಮಂದಿರದ ಉದ್ಘಾಟನೆಯಲ್ಲಿ ಭಾಗವಹಿಸದ ‘ಶ್ರೀರಾಮ-ವಿರೋಧಿಗಳು’ ಎನ್ನುವುದರಿಂದ ಆರಂಭಿಸಿ ‘ಮಛ್ಲಿ-ಮೊಗಲ್- ಮುಸ್ಲಿಮ್’ ನಂತರ, ಈಗ ಪ್ರತಿದಿನ ಎಂಬಂತೆ ಚುನಾವಣಾ ನೀತಿ ಸಂಹಿತೆಯನ್ನೂ ಲೆಕ್ಕಿಸದೆ ವಿವಾದಾಸ್ಪದ ಹೇಳಿಕೆಗಳನ್ನು ಸ್ವತಃ ಪ್ರಧಾನ ಮಂತ್ರಿಗಳು ಕೊಡುತ್ತಿದ್ದಾರೆ. ಹಲವು ವೀಕ್ಷಕರು ಗಮನಿಸಿದಂತೆ, ಮೊದಲ ಹಂತದ ಮತದಾನದ ನಂತರ ಇದು ಕಾಣ-ಕೇಳಬರುತ್ತಿದೆ. ‘ಮೋದಿ ಗ್ಯಾರಂಟಿ’ಗಳು ಮತ್ತು ‘ಅಬ್‍ಕೀ ಬಾರ್‍ 400 ಪಾರ್’ ಘೋಷಣೆಗಳು ಹಿನ್ನೆಲೆಗೆ ಸರಿದಂತೆ ಕಾಣುತ್ತದೆ. ಹಿಂದುತ್ವ 

ವ್ಯಂಗ್ಯಚಿತ್ರ ಕೃಪೆ:

ಪಿ.ಮಹಮ್ಮದ್,

ವಾರ್ತಾಭಾರತಿ

ರಾಜಸ್ಥಾನ-ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ‘ಇಂಡಿಯಾ’ ಮೈತ್ರಿ ಕೂಟವನ್ನು ಟೀಕಿಸಲು ‘ದೊಡ್ಡ ಸಂಖ್ಯೆಗಳಲ್ಲಿ ಮಕ್ಕಳನ್ನು ಹೊಂದಿರುವ’ ಸಮುದಾಯವನ್ನು ಗುರಿ ಮಾಡಿದ್ದಾರೆ. ಅವರ ಗುರಿ ಮುಸ್ಲಿಂ ಸಮುದಾಯ ಎಂಬ ಬಗ್ಗೆ ಸಂದೇಹವೂ ಇರದಂತಹ ಮಾತುಗಳನ್ನೂ ಆಡಿದ್ದಾರೆ. ಯುಪಿಎ -1 ರ ಪ್ರಧಾನಮಂತ್ರಿ ಡಾ.ಮನಮೋಹನ ಸಿಂಗ್‍ರವರೇ ದೇಶದ ಸಂಪತ್ತಿನ ಮೇಲೆ ಮುಸ್ಲಿಮರದ್ದೇ ಮೊದಲ ಹಕ್ಕು ಎಂದು ಹೇಳಿರುವದಾಗಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ! ಹಿಂದುತ್ವ 

ಮುಸ್ಲಿಂ ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರುವ ಮೂಲಕ ಭಾರತದಲ್ಲಿ ಮುಸ್ಲಿಮರು ಬಹುಸಂಖ್ಯಾತ ಸಮುದಾಯವಾಗುವ ಹುನ್ನಾರ ನಡೆದಿದೆ ಎಂಬುದು ಹಿಂದುತ್ವ ಮಂದಿ ಲಾಗಾಯ್ತಿನಿಂದ ಹುಟ್ಟಿಸಿರುವ ‘ಇಸ್ಲಾಂ ಭೀತಿ’ಯ ಮಿಥ್ಯೆಯ ಪ್ರಮುಖ ಅಂಶ. ಅದು ಶುದ್ಧಸುಳ್ಳು ಎಂದು ಬಹಳ ಹಿಂದೆಯೇ ಸಾಬೀತಾಗಿದೆ. 2011ರ ಜನಗಣತಿ ಇದನ್ನು ಸ್ಪಷ್ಟವಾಗಿ ತೋರಿಸಿತು. ಆದರೂ ಹೊಸ-ಹೊಸ ರೂಪಗಳಲ್ಲಿ ಅದರ ಪುನರಾವರ್ತನೆ ನಡೆದಿದೆ. 2021ರ ಜನಗಣತಿಯನ್ನು ಕೋವಿಡ್ ಹೆಸರಲ್ಲಿ ಅನಿರ್ದಿಷ್ಟ ಕಾಲದ ವರೆಗೂ ಮುಂದೂಡಿರುವುದು ಇಂತಹ ಹಲವು ಅಂಕಿ-ಅಂಶಗಳು ಬೆಳಕಿಗೆ ಬರದಿರಲಿ ಎಂದು ಹಲವು ಅಧ್ಯಯನಕಾರರು ಈಗ ಹೇಳುತ್ತಿದ್ದಾರೆ.

ಈಗಾಗಲೇ ‘ಜನಶಕ್ತಿ ಮೀಡಿಯಾ’ದಲ್ಲಿ ಪ್ರಕಟವಾಗಿರುವ  ವಿಶ್ಲೇಷಣೆಯಲ್ಲಿ (ಪ್ರಧಾನಿ ಮೋದಿ ಬಾನ್‍ ಸ್ವಾರಾ ಭಾಷಣ factcheck, ಎಪ್ರಿಲ್‍ 25) ತೋರಿಸಿರುವಂತೆ ತೀರಾ ಇತ್ತೀಚಿನ( 2019-21) ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ’ (ಎನ್‌ಎಫ್‌ಹೆಚ್‌ಎಸ್-5) ಇದು ಶುದ್ಧ ಮಿಥ್ಯೆ ಎಂಬುದನ್ನು ಇನ್ನೊಮ್ಮೆ ಸ್ಪಷ್ಟಗೊಳಿಸಿದೆ.

ಒಟ್ಟು ಫಲವತ್ತೆಯ ದರ’ (ಟಿಎಫ್‌ಆರ್), ಅಂದರೆ ಒಬ್ಬ ಮಹಿಳೆ ತನ್ನ ಜೀವಮಾನದಲ್ಲಿ ಹೆರುವ ಮಕ್ಕಳ ಸರಾಸರಿ, ದೇಶದ ಎಲ್ಲ ಸಮುದಾಯಗಳಲ್ಲೂ ಇಳಿಯುತ್ತ ಬಂದಿದೆ. 1998-99ರಲ್ಲಿ ನಡೆಸಿದ ಸರ್ವೆಯ (ಎನ್‌ಎಫ್‌ಹೆಚ್‌ಎಸ್-2)ಪ್ರಕಾರ ಹಿಂದೂಗಳಲ್ಲಿ 2.78 ಆಗಿದ್ದರೆ, ಮುಸ್ಲಿಮರಲ್ಲಿ 3.59 . ಅಂದರೆ ವ್ಯತ್ಯಾಸ 0.81. 202-19-21ರ ಸರ್ವೆಯಲ್ಲಿ ಇದು 0.42ಕ್ಕೆ ಇಳಿದಿದೆ. ಅಂದರೆ ಹಿಂದೂಗಳಲ್ಲಿ 1.94, ಮುಸ್ಲಿಮರಲ್ಲಿ 2.36.ಹಿಂದುತ್ವ 

ನವಜಾತ ಶಿಶುಗಳ ಮರಣ ದರದಲ್ಲೂ, ಮತ್ತು 5 ವರ್ಷಗಳ ಕೆಳಗಿನ ಮಕ್ಕಳ ಮರಣದರದಲ್ಲೂ ಇಳಿಕೆಯಾಗಿದೆ, ಮತ್ತು ಇವೂ ಎಲ್ಲ ಸಮುದಾಯಗಳಲ್ಲೂ ಇಳಿಯುತ್ತ ಬಂದಿವೆ.

ನಗರಗಳಲ್ಲಿ ಶಿಶು ಮರಣ ದರ(NMR)  2019-21ರಲ್ಲಿ ಹಿಂದುಗಳಲ್ಲಿ 18.4 , ಮುಸ್ಲಿಮರಲ್ಲಿ 18.7.

ಗ್ರಾಮಾಂತರದಲ್ಲಿ ಇದು ಅನುಕ್ರಮವಾಗಿ 27.9 ಮತ್ತು 25.9

5ವರ್ಷಗಳ ಕೆಳಗಿನ ಮಕ್ಕಳ ಮರಣ ದರ ಮತ್ತು ಇಳಿಕೆ(U5MR)

ನಗರಗಳಲ್ಲಿ  ಹಿಂದುಗಳಲ್ಲಿ 31.7 ಮತ್ತು ಮುಸ್ಲಿಮರಲ್ಲಿ 32.8  ಮತ್ತು ಗ್ರಾಮಾಂತರದಲ್ಲಿ ಹಿಂದುಗಳಲ್ಲಿ 46.6,  ಮತ್ತು ಮುಸ್ಲಿಮರಲ್ಲಿ 42.9.

ವಾಸ್ತವವಾಗಿ ಜನನ-ದರಕ್ಕೂ ಮತಧರ್ಮಕ್ಕೂ ನೇರ ಸಂಬಂಧವಿಲ್ಲ, ನೇರ ಸಂಬಂಧವಿರುವುದು ಸಂಬಂಧಪಟ್ಟ ಸಮುದಾಯದ ಸಾಮಾಜಿಕ-ಆರ್ಥಿಕ ಸ್ಥಿತಿ-ಗತಿಯೊಂದಿಗೆ ಮಾತ್ರ ಎಂದು ಸಮಾಜಶಾಸ್ತ್ರಜ್ಷರು ಹೇಳುತ್ತಾರೆ,

2019-21ಎನ್‌ಎಫ್‌ಹೆಚ್‌ಎಸ್-5ಈ ಅಂಕಿ-ಅಂಶಗಳೂ ಇದನ್ನೇ ತೋರಿಸುತ್ತವೆ:

*ಒಟ್ಟು ಹಿಂದು ಕುಟುಂಬಗಳಲ್ಲಿ ಇದು 1.94 ಇದ್ದಾಗ, ಉತ್ತರ ಭಾರತದ ಐದು ರಾಜ್ಯಗಳಲ್ಲಿ ಹಿಂದುಗಳಲ್ಲಿ ಇದು ಈ ಸರಾಸರಿಗಿಂತ ಹೆಚ್ಚಿತ್ತು. ಉದಾ: ಬಿಹಾರದಲ್ಲಿ 2.88 ಮತ್ತು ಉತ್ತರಪ್ರದೇಶದಲ್ಲಿ 2.29.ಹಿಂದುತ್ವ 

* ದಕ್ಷಿಣ ಭಾರತದ ಐದೂ ರಾಜ್ಯಗಳಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸಂಬಂಧಪಟ್ಟಂತೆ, ಈ ದರಗಳು ಇದಕ್ಕಿಂತಲೂ ಕಡಿಮೆಯಿದ್ದವು ಉದಾ: ತಮಿಳುನಾಡಿನಲ್ಲಿ 1.93, ಆಂಧ್ರದಲ್ಲಿ 1.97. ಕರ್ನಾಟಕದಲ್ಲಿ 2.05.

 

ಇನ್ನು, “ನುಸುಳುಕೋರರು’ ಎಂಬ ಕೊಂಕು ನುಡಿಯ  ಬಗ್ಗೆ ಹೇಳುವುದಾದರೆ, ಬಗ್ಗೆ ಮಾಹಿತಿ ಕೇಳಿದಾಗಲೆಲ್ಲ ಮೋದಿ ಸರಕಾರದ ವಕ್ತಾರರು ಅಂತಹ ಮಾಹಿತಿಯೇನೂ ಸರಕಾರದ ಬಳಿ ಇಲ್ಲ ಎಂದು ಕಳೆದ ಒಂದು ದಶಕದಲ್ಲಿ 16 ಬಾರಿ ಹೇಳಿದ್ದಾರೆ ಎಂದು ಒಂದು ಲೆಕ್ಕ ಹೇಳುತ್ತದೆ ಎನ್ನುತ್ತಾರೆ ಪ್ರಖ್ಯಾತ ಪತ್ರಕರ್ತ ಶ್ರೀನಿವಾಸನ್ ಜೈನ್,

 

ಶಿಕ್ಷಣ ಮತ್ತು ಸಂಪತ್ತಿನ ವಿಷಯದಲ್ಲೂ  ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು ಮತ್ತು ಮುಸ್ಲಿಂ ಸಮುದಾಯಗಳು ಬಹಳ ಹಿಂದಿವೆ.

ಶಿಕ್ಷಣ: 2021ರ ಸರ್ವೆಯಲ್ಲೂ  ಹಿಂದು ಪುರುಷರಲ್ಲಿ  ಅನಕ್ಷರಸ್ಥರ ಪ್ರಮಾಣ 12.9 ಇದ್ದರೆ, ಮುಸ್ಲಿಂ ಪುರುಷರಲ್ಲಿ 17.9;

ಮಹಿಳೆಯರಲ್ಲಿ ಅನಕ್ಷರಸ್ಥರ ಪ್ರಮಾಣದಲ್ಲಿ ಈ ವ್ಯತ್ಯಾಸ ಇಷ್ಟೊಂದು ಇಲ್ಲದಿದ್ದರೂ-   ಹಿಂದುಗಳಲ್ಲಿ 28.5, ಮುಸ್ಲಿಮರಲ್ಲಿ 29.1ಹಿಂದುತ್ವ 

12ವರ್ಷಗಳಿಗಿಂತ ಹೆಚ್ಚು ಶಾಲಾ ಶಿಕ್ಷಣ ಪಡೆದವರ ಪಮಾಣ ಹಿಂದು ಪರುಷರಲ್ಲಿ 23.8 ಇದ್ದರೆ ಮುಸ್ಲಿಂ ಪುರುಷರಲ್ಲಿ  ಇದು 14.6

ಮಹಿಳೆಯರಲ್ಲಿ, ಇದು ಅನುಕ್ರಮವಾಗಿ 17.1 ಮತ್ತು 11.4.

ಸಂಪತ್ತಿನ ಪ್ರಮಾಣ:

ಸಮುದಾಯವಾರು ಸಂಪತ್ತಿನ ಪ್ರಮಾಣದ ಬಗ್ಗೆ ಹೆಚ್ಚೇನೂ ಅಂಕಿ-ಅಂಶಗಳಿಲ್ಲ. ಆದರೆ  2020ರಲ್ಲಿ ಪ್ರಕಟವಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ದಲಿತ್ ಸ್ಟಡೀಸ್ ಭಾರತದಲ್ಲಿ ಸಂಪತ್ತಿನ ಒಡೆತನದಲ್ಲಿ ಅಸಮಾನತೆಯ ಕುರಿತು ಪ್ರಕಟಿಸಿದ ವರದಿಯಲ್ಲಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಇವನ್ನು  ಆಧರಿಸಿದ ಒಂದು ಲೇಖನದಲ್ಲಿ (ಇಂಡಿಯನ್‌ ಎಕ್ಸ್ ಪ್ರೆಸ್,ಎಪ್ರಿಲ್ 24) ಕೊಟ್ಟಿರುವ ಅಂಕಿ-ಅಂಶಗಳು ಹೀಗಿವೆ(ಇವು ನ್ಯಾಷನಲ್ ಸ್ಯಾಂಪಲ್ ಸರ್ವೆ ನಡೆಸಿದ ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸರ್ವೆಯ ಮಾಹಿತಿಗಳನ್ನು ಆಧರಿಸಿವೆ):

ಈ ಸರ್ವೆಯ ಆಧಾರದಲ್ಲಿ ಒಟ್ಟು ಸಂಪತ್ತಿನ ಸಮುದಾಯವಾರು ಅಂಕಿ-ಅಂಶಗಳು ಹೀಗಿವೆ.

ಕುಟುಂಬಗಳ %          ಒಟ್ಟು ಸಂಪತ್ತು                      ಪಾಲು

(ಶತಕೋಟಿ ರೂ.ಗಳಲ್ಲಿ)

ಹಿಂದು ಮೇಲ್ಜಾತಿಗಳು                       22.2%                 146394                                        40.9%

ಹಿಂದು ಒಬಿಸಿ                                     35.8%                 110520                                        30.8%

ಪರಿಶಿಷ್ಟ ಜಾತಿಗಳು                            17.9%                  26134                                           7.3%

ಪರಿಶಿಷ್ಟ ಬುಡಕಟ್ಟುಗಳು                  9.1%                   13268                                            3.7%

ಮುಸ್ಲಿಮರು                                        12.1%                  28707                                            8.0%

ಇತರರು                                               2.9%                   33329                                            9.3%

 

ಸಮುದಾಯವಾರು ಸಂಪತ್ತಿನ ಹಂಚಿಕೆ:

ಚಿನ್ನ                            ಒಟ್ಟು ಸಂಪತ್ತು           ತಲಾಕುಟುಂಬ ಸಂಪತ್ತು

ಹಿಂದು ಮೇಲ್ಜಾತಿಗಳು                       31.3%                                   40.9%                             ರೂ.27.73ಲಕ್ಷ

ಹಿಂದು ಒಬಿಸಿ                                     39.1%                                   30.8%                              12.96ಲಕ್ಷ

ಪರಿಶಿಷ್ಟ ಜಾತಿ                                    9.9%                                     7.3%                                 6.12ಲಕ್ಷ

ಪ.ಬುಡಕಟ್ಟು                                    3.4%                                      3.7%                                 6.13ಲಕ್ಷ

ಮುಸ್ಲಿಂ                                               9.2%                                      8%                                    9.95ಲಕ್ಷ

ಈ ಸಮುದಾಯಗಳ ಒಳಗೇ ಇನ್ನಷ್ಟು ಅಸಮಾನತೆಗಳು ಇವೆ ಎಂಬುದು ಬೇರೆ ಸಂಗತಿ.

***

ಇದನ್ನು ಓದಿ : ಧಾರವಾಡ ಲೋಕಸಭಾ ಕ್ಷೇತ್ರ-2024

2006ರಲ್ಲಿ ಆಗಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೇಳಿದ್ದು ಇದನ್ನೇ, ಇದು 2020ರ ವೇಳೆಗೂ ಬಹಳವೇನೂ ಕಡಿಮೆಯಾಗಿಲ್ಲ ಎಂಬುದನ್ನು ಮೇಲಿನ ಅಂಕಿ-ಅಂಶಗಳು ತೋರಿಸುತ್ತವೆ’

ಪರಿಶಿಷ್ಟ ಜಾತಿಗಳು, ಬುಡಕಟ್ಟುಗಳು , ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳು ಅಭಿವೃದ್ಧಿಯ ಫಲಗಳಲ್ಲಿ ಸಮಪಾಲನ್ನು ಪಡೆಯಲು ಶಕ್ತರಾಗುವಂತೆ ನವೀನ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ,  ಅವರಿಗೆ ಸಂಪನ್ಮೂಲಗಳ ಮೇಲೆ ಮೊದಲ ದಾವೆ ಇರಬೇಕು ಎಂದು ಅವರು ಸರಿಯಾಗಿಯೇ ಹೇಳಿದ್ದರು.ಹಿಂದುತ್ವ 

ಅದು ಎಡಪಕ್ಷಗಳ ಬೆಂಬಲಿತ ಯುಪಿಎ-1 ಸರಕಾರ ಬಹಳಷ್ಟು ಚರ್ಚೆಗಳ ನಂತರ ಅಂಗೀಕರಿಸಿದ ‘ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಆಧಾರದಲ್ಲಿ ಅಡಳಿತ ನಡೆಸುತ್ತಿದ್ದ ಸಮಯ, ಗ್ರಾಮೀಣ ಉದ್ಯೋಗ ಖಾತರಿ, ಆಹಾರದ ಹಕ್ಕು, ಅರಣ್ಯ ಹಕ್ಕುಗಳ ಕಾಯ್ದೆ, ಮಾಹಿತಿ ಹಕ್ಕು ಮುಂತಾದ ಜನಪರ ಕ್ರಮಗಳು ಜಾರಿಗೆ ಬಂದ ಕಾಲ ಎಂಬುದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬೇಕು.

ಅಲ್ಲದೆ, ಆಗಷ್ಟೇ ನ್ಯಾಯಮೂರ್ತಿ ಸಾಚಾರ್‍ ಸಮಿತಿ ಸಲ್ಲಿಸಿದ್ದ ವರದಿ ಭಾರತದಲ್ಲಿ ಮುಸ್ಲಿಮರು ಶಿಕ್ಷಣ, ಆದಾಯ ಮತ್ತು ಉದ್ಯೋಗದಲ್ಲಿ  ಇತರ ಸಮುದಾಯಗಳಿಗಿಂತ ಹಿಂದೆ ಬಿದ್ದಿದ್ದಾರೆ ಎಂಬುದರ ಅಂಕಿ-ಅಂಶಗಳನ್ನು ಪ್ರಸ್ತುತ ಪಡಿಸಿ ಇವನ್ನು ಸರಿಪಡಿಸಲು ಕ್ರಮಗಳನ್ನೂ ಶಿಫಾರಸು ಮಾಡಿತ್ತು.ಹಿಂದುತ್ವ 

***

ನವ-ಉದಾರವಾದಿಗಳೆಳು ಮತ್ತು ಬಲಪಂಥೀಯರೆಲ್ಲರೂ ಪ್ರಬಲವಾಗಿ ವಿರೋಧಿಸುವ ‘ಸಂಪತ್ತಿನ ಮರುಹಂಚಿಕೆ’ ಮತ್ತು ಅತಿ ಶ್ರೀಮಂತರ  ಸಂಪತ್ತಿನ ಮೇಲೆ ತೆರಿಗೆ ಮತ್ತು ವಾರಸುದಾರಿಕೆ ತೆರಿಗೆಯ ಬಗ್ಗೆ ಬಿಜೆಪಿಯ ಎಂದಿನ ಕಡು-ವಿರೋಧಕ್ಕೆ ಕೂಡ , ಕೋಮುವಾದಿ ತಿರುವು ಕೊಡಲು ಪ್ರಧಾನ ಮಂತ್ರಿಗಳು ಹಿಂದೆ-ಮುಂದೆ ನೋಡಿಲ್ಲ. ಇವುಗಳ ಬಗ್ಗೆ ಕಾಂಗ್ರೆಸಿನ ‘ನ್ಯಾಯಪತ್ರ’ದಲ್ಲಿ  ಏನೇನೂ ಹೇಳಿಲ್ಲ ಎಂಬುದು ಗಮನಾರ್ಹ. ಕಾಂಗ್ರೆಸಿನ  ಪ್ರಣಾಳಿಕೆ ಜಾತಿ ಜನಗಣತಿಯ ಬಗ್ಗೆ ಹೇಳಿದೆಯಷ್ಟೇ. ಆದರೂ ಮತಗಳಿಕೆಯ ದೃಷ್ಟಿಯಿಂದ ಪ್ರಧಾನಿಗಳು ಇಲ್ಲಿ ಕಾಂಗ್ರೆಸಿನ ಪ್ರಣಾಳಿಕೆಯನ್ನು ಎಳೆದು ತರುತ್ತಿದ್ದಾರೆ.

ಹಿಂದುಗಳ ಚಿನ್ನ ಮತ್ತಿತರ ಸಂಪತ್ತನ್ನು,  ಮೀಸಲಾತಿಯನ್ನು ಕೂಡ ಕಿತ್ತುಕೊಂಡು ಅದನ್ನು ಮುಸ್ಲಿಮರಲ್ಲಿ ಹಂಚಲಾಗುತ್ತದೆ ಎಂಬ ಸುಳ್ಳುಗಳನ್ನು ಹರಡುತ್ತ ದೇಶದ ಒಂದು  ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಬಹುಸಂಖ್ಯಾತರಲ್ಲಿ ‘ಭೀತಿ’ ಸೃಷ್ಟಿಸಲೂ ದೇಶದ  ಪ್ರಧಾನ ಮಂತ್ರಿಗಳೇ ಹಿಂದೆ-ಮುಂದೆ ನೋಡಿಲ್ಲ.  ಅದಕ್ಕೆ ಕಾಂಗ್ರೆಸಿನ ಪ್ರಣಾಳಿಕೆಯನ್ನು ನೆವವಾಗಿ ಬಳಸುತ್ತಿದ್ದಾರೆ ಎಂಬುದು ಸ್ಪಷ್ಟ.ಹಿಂದುತ್ವ 

 

“ಜಾಗ್ರತೆ!ಕಾಂಗ್ರೆಸ್‍ ನಿಮ್ಮ ಮಂಗಳ

 ಸೂತ್ರವನ್ನು ಕಸಿದುಕೊಳ್ಳಲಿದೆ”

 

“ಅವರಿಗೆ ಸಾಧ್ಯವಿಲ್ಲ ಸಾರ್!

ನನ್ನ ಮಂಗಳಸೂತ್ರವನ್ನು ನೋಟುರದ್ದತಿಯಲ್ಲಿ

ಕಳಕೊಂಡಿದ್ದೇನೆ..”

“ನಾನು ಲಾಕ್‍ಡೌನಿನಿಲ್ಲಿ….”

“ನಾನು ಉದ್ಯೋಗನಷ್ಟದಲ್ಲಿ….”

“ ನಾನು ರೈತರ ಪ್ರತಿಭಟನೆಯಲ್ಲಿ….”

ವ್ಯಂಗ್ಯಚಿತ್ರ ಕೃಪೆ:

ಸತೀಶ ಆಚಾರ್ಯ

 

***

ಇಂತಹ ಸುಳ್ಳುಗಳನ್ನು ದೇಶದಲ್ಲೆಲ್ಲ ಹರಡುತ್ತ ಚುನಾವಣಾ ನೀತಿ ಸಂಹಿತೆಯ ಬಹಿರಂಗ ಉಲ್ಲಂಘನೆಯನ್ನು ದೇಶದ ಪ್ರಧಾನ ಮಂತ್ರಿಗಳೇ  ಮಾಡುತ್ತಿದ್ದಾರೆ ಎಂದು   ದೇಶಾದ್ಯಂತ ಆಕ್ರೋಶ ವ್ಯಕ್ತವಾದಾಗ ಕೊನೆಗೂ ಚುನಾವಣಾ ಆಯೋಗ ದಿವ್ಯಮೌನ ಮುರಿದು ಈ ಬಗ್ಗೆ ನೋಟೀಸು ಕಳಿಸಿದೆ.ಆದರೆ ಅವರಿಗೆ  ನೇರವಾಗಿ ಕಳಿಸುವ ಬದಲು ಅವರ ಪಕ್ಷದ ಅಧ್ಯಕ್ಷರಿಗೆ ಕಳಿಸಿದೆ. ಮತ್ತು ಇದಾದ ಮೇಲೂ ಪ್ರಧಾನ ಮಂತ್ರಿಗಳು ಇದನ್ನು ಮುಂದುವರೆಸುತ್ತಲೇ ಇದ್ದಾರೆ. ಅಲ್ಲದೆ ಬಿಜೆಪಿಯ ಇತರ ‘ಸ್ಟಾರ್‍’ ಪ್ರಚಾರಕರುಗಳು  ಇದನ್ನು ಅನುಸರಿಸಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಕಾರುವುದನ್ನು ಮುಂದುವರೆಸಿದ್ದಾರೆ, ಭಕ್ತರು ಮತ್ತು ‘ಗೋದಿ ಮೀಡಿಯ’ ಅವಕ್ಕೆ ಸಮರ್ಥನೆಗಳ ಹುಡುಕಾಟದಲ್ಲಿ, ಸೃಷ್ಟಿಯಲ್ಲಿ  ಮಗ್ನವಾಗಿದ್ದಾರೆ!

ಇದನ್ನು ನೋಡಿ : ಮಹಿಳಾ ಪ್ರಾತಿನಿಧ್ಯ : ತಾರತಮ್ಯದ ರಾಜಕಾರಣ -ಸಿ.ಜಿ.ಮಂಜುಳಾ

Donate Janashakthi Media

Leave a Reply

Your email address will not be published. Required fields are marked *