ಹಿಂದುತ್ವ ನಮ್ಮ ಅಜೆಂಡಾ, ಅದನ್ನ ಪ್ರಶ್ನಿಸುವ ಹಕ್ಕು ಯಾರಿಗಿಲ್ಲ : ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು : ಹಿಂದುತ್ವ ನಮ್ಮ ಅಜೆಂಡಾಗಳಲ್ಲಿ ಒಂದು, ಅದನ್ನ ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರಾವಳಿಯ 19 ಸೀಟ್ ಕೂಡ ಬಿಜೆಪಿ ಗೆಲ್ಲುತ್ತೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟೂ ಕ್ಷೇತ್ರ ನಾವು ಗೆಲ್ಲುತ್ತೇವೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹೇಳುವ ಕರಾವಳಿಯ ಗೆಲ್ಲುವ ಹತ್ತು ಕ್ಷೇತ್ರ ಯಾವುದು ನಮಗೆ ಗೊತ್ತಿಲ್ಲ. ಪಕ್ಷದ ವಿರುದ್ದ ಬಂಡಾಯ ಹೋದವರು ನಮ್ಮ ಜೊತೆ ಬರುತ್ತಾರೆ ಅನ್ನುವ ವಿಶ್ವಾಸ ಇದೆ. ಪುತ್ತೂರು ಸೇರಿದಂತೆ ಎಲ್ಲವನ್ನೂ ಬಿಜೆಪಿಯೇ ಗೆಲ್ಲಲಿದೆ. ಬಿಜೆಪಿ ಗೆಲ್ಲುತ್ತೆ ಅಂದಾಗ ಉಳಿದವರು ಸೋಲುತ್ತಾರೆ ಅಂತಾನೇ ಅರ್ಥ ಎಂದು ಹೇಳಿದರು.

ಇದನ್ನೂ ಓದಿ : ಗೋಡ್ಸೆ ಗಾಂಧಿಯನ್ನು ಕೊಂದಂತೆ ನಾನು ಅಂಬೇಡ್ಕರ್‌ರನ್ನು ಕೊಲ್ಲುತ್ತಿದ್ದೆ: ಹಿಂದುತ್ವ ನಾಯಕನ ವಿವಾದಾತ್ಮಕ ಹೇಳಿಕೆ

ಬಂಡಾಯ ಹೋದವರು ನಮ್ಮ ಜೊತೆ ಬರುವ ವಿಶ್ವಾಸ ಇದೆ. ರಾಜಕಾರಣದಲ್ಲಿ ಯಾರ ಯಾರ ಮೇಲೂ ಏನು ಬೇಕಾದರೂ ಮಾಡಬಹುದು. ಹಾಗಾಗಿ ಕೆಲವು ನಾಯಕರು ನ್ಯಾಯಾಲಯದ ತಡೆಯಾಜ್ಞೆ ತಂದಿದ್ದಾರೆ. ಅದು ಅವರವರ ಖಾಸಗಿ ಬದುಕು, ಹೀಗಾಗಿ ನಾವು ಏನೂ ಮಾಡಲು ಆಗಲ್ಲ ಎಂದು ಹೇಳಿದರು.

ಹಲವು ರಾಷ್ಟ್ರೀಯ ನಾಯಕರ ಪ್ರಚಾರ :
ದಕ್ಷಿಣ ಕನ್ನಡ ಜಿಲ್ಲೆಗೆ ಹಲವು ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರುತ್ತಾರೆ. ಮೇ.3ರಂದು ಮುಲ್ಕಿಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ. ಬಹುತೇಕ ಅವರ ಆಗಮನ ಖಚಿತವಾಗಿದೆ, ಅಂತಿಮ ಮಾಹಿತಿ ಬರಬೇಕು. ಮೇ 6ರಂದು ಜಿಲ್ಲೆಗೆ ಯೋಗಿ ಆದಿತ್ಯನಾಥ್​ ಬರುತ್ತಾರೆ. ಆದರೆ ಯೋಗಿಯವರ ಕಾರ್ಯಕ್ರಮದ ಜಾಗ ನಿಗದಿಯಾಗಿಲ್ಲ. ಉಡುಪಿ ಮತ್ತು‌ ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರೀಕರಿಸಿ ಸಮಾವೇಶಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

Donate Janashakthi Media

Leave a Reply

Your email address will not be published. Required fields are marked *