ಹಿಂದೂ: ಪರ್ಶಿಯನ್ ಪದ – ಮೊಗಲ್ “ರಾಷ್ಟ್ರೀಯ” ಪರಿಕಲ್ಪನೆ – ವೈದಿಕ ರಾಷ್ಟ್ರವಾದಿ ಅನನ್ಯತೆ

ಬಿ.ಪೀರ್ ಬಾಷ

ಹಿಂದೂ ಅನ್ನೋ‌ ಪದ ಮೂಲತಃ ಪರ್ಶಿಯಾದ್ದು ಎನ್ನುವುದು ಸತ್ಯ. ಇದು ಪ್ರದೇಶ ವಾಚಕವಾಗಿ (ಸಪ್ತ ಸಿಂಧೂ – ಏಳು ನದಿಗಳ ಅಚ್ಚುಕಟ್ಟು ಪ್ರದೇಶ) ಬಳಕೆಯಾಗಿದೆ. ನಂತರದಲ್ಲಿ ಮೊಗಲ್ ದೊರೆಗಳ ಕಾಲದಲ್ಲಿ ಉತ್ತರದಿಂದ ದಕ್ಷಿಣ ಭಾರತದ ಸಮಸ್ತ ಪ್ರದೇಶವನ್ನು “ಹಿಂದೂಸ್ಥಾನ್” ಎಂದು ಕರೆಯಲಾಯ್ತು. ಹೀಗೆ ವಿಶಾಲ ಭೂಭಾಗವನ್ನು ಪ್ರದೇಶ ಮತ್ತು ಸಂಸ್ಕೃತಿಯ ನೆಲೆಯಲ್ಲಿ “ಒಟ್ಟಾಗಿ” ಗುರುತಿಸಲಾಯ್ತು. ಈ ಅಖಂಡ ಭೂಪ್ರಜ್ಞೆ ಈ ಪದದ ಮೂಲಕ ಮೂಡಿಸಿದವರೂ ಮೊಗಲ್ ದೊರೆಗಳೆ.

ಹಾಗಾಗಿ; ಹಿಂದೂ ಎಂಬುದು ಪರ್ಶಿಯನ್ ಪದ. ಹಿಂದೂಸ್ಥಾನ್ ಎಂಬುದು ಮೊಗಲ್ ಪರಿಕಲ್ಪನೆ. ಮೊಗಲರು ಮೂಡಿಸಿದ ಅಖಂಡ ಪ್ರಜ್ಞೆಯ ನೆಲೆಯಲ್ಲಿ ಈ ಪದದ ಮೂಲಕ ಭಾರತೀಯ ಅನನ್ಯತೆಯಾಗಿ ಬಿಂಬಿಸಿದವರು 14ನೇ ಶತಮಾನದ ಆಂಗ್ಲೋ ಭಾರತೀಯ ಉನ್ನತ ಶಿಕ್ಷಣ ಪಡೆದ ಆಧುನೀಕರು. ಇದನ್ನು ಮುಸ್ಲಿಮೇತರ ಸಂಸ್ಕೃತಿಗಳ ವಿಶಾಲ ಆವರಣವಾಗಿ ಕಟ್ಟಿಕೊಂಡವರು 18 ನೇ ಶತಮಾನದ ವೈದಿಕ ರಾಷ್ಟ್ರವಾದಿಗಳು. ಈ ವೈದಿಕ ರಾಷ್ಟ್ರವಾದವನ್ನು “ಹಿಂದೂ ರಾಷ್ಟ್ರ” ವಾಗಿ ಸಿದ್ಧಾಂತ ರೂಪಿಸಿದವರು ವಿ.ಡಿ.ಸಾವರ್ಕರ್. ಈ ರಾಜಕೀಯ ಸಿದ್ಧಾಂತವನ್ನು “ಧರ್ಮ”ವೆಂದು ವ್ಯಾಖ್ಯಾನಿಸಿ ಜನಪ್ರಿಯಗೊಳಿಸಿದ್ದು ಹೆಡಗೆವಾರ್ ಮತ್ತು ಗೊಳವಲ್ಕರ್. ಈ  ಧರ್ಮ ಮತ್ತು ರಾಜಕೀಯ ಮಿಶ್ರಿತ ಕಾರ್ಯತಂತ್ರದ ಮೂಲಕ ವಿಶಾಲ ಸಂಘಟನೆಯನ್ನು ಕಟ್ಟಿದ್ದು ಆರ್.ಎಸ್.ಎಸ್. ಈ ಕಾರ್ಯತಂತ್ರದ ಆಧಾರದಲ್ಲಿ ರಾಜತಂತ್ರವನ್ನು ರೂಪಿಸಿ ನೇರ ರಾಜಕಾರಣ ಮಾಡಿದ್ದು ಬಿ.ಜೆ.ಪಿ. ವಾಜಪೇಯಿ ಮತ್ತು ಅದ್ವಾನಿಯವರ ಮೂಲಕ ಪ್ರಬಲವಾದ ಹಿಂದೂ ರಾಜಕಾರಣದ ಫಲಿತ ಮತ್ತು ಫಲದಾಯಿಗಳು ನರೇಂದ್ರ ಮೋದಿ ಮತ್ತು ಅಮಿತ್ ಶಾ.

ಆಶ್ಚರ್ಯ ವೇನು ಗೊತ್ತೇ? ಶಾ ಎಂಬುದೂ ಪರ್ಶಿಯಾ ಭಾಷಾ ಮೂಲದ ಉಚ್ಛಾರ. ಬಾದಶಹಾ ಎಂಬುದರ short form. ಇದು, ಪರ್ಶಿಯಾದ ಮೂಲ ಅಳಿಸಲಾಗದೇ ಬೆಳೆದು ಬಂದ “ಭಾರತೀಯ‌”ವಾದ ” ಹಿಂದೂ” ಪದ-ಅರ್ಥದ ವಿಕಾಸ.

Donate Janashakthi Media

Leave a Reply

Your email address will not be published. Required fields are marked *