ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್‌ಗಳನ್ನು ನಕಲಿಸುವುದು, ಹಂಚುವುದು ಅಪರಾಧ ಎಂದ ಹೈಕೋರ್ಟ್

ಬೆಂಗಳೂರು: ಲೈಂಗಿಕ ದೌರ್ಜನ್ಯದ ಪೆನ್‌ಡ್ರೈವ್‌ಗಳನ್ನು ಕಾಪಿ ಮಾಡುವುದು ಹಾಗೂ ಅದನ್ನು ಹಂಚುವುದು ಅತ್ಯಂತ ಅಪಾಯಕಾರಿ ಮತ್ತುಅಪರಾಧ ಎಂದು ರಾಜ್ಯ ಹೈಕೋರ್ಟ್‌ ಮೌಖಿಕವಾಗಿ ಅಭಿಪ್ರಾಯ ಪಟ್ಟಿರುವುದಾಗಿ ವರದಿಯಾಗಿದೆ.

ಹೀಗೆ ಮಾಡುವುದರಿಂದ ಗಂಡಸು ಏನನ್ನೂ ಕಳೆದುಕೊಳ್ಳವಾದರೂ ಇದರಲ್ಲಿ ಒಳಗಾಗುವ ಸ್ತ್ರೀ ಅವಮಾನ ಮುಜುಗರಕ್ಕೀಡಾಗುವಂತೆ ಮಾಡುತ್ತದೆ ಎಂದು ಪ್ರಜ್ವಲ್‌ ರೇವಣ್ಣ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಗುರಿ ಸಾಧಿಸದಿದ್ದರೆ ಶಿಸ್ತು ಕ್ರಮ: ವಾಣಿಜ್ಯ ತೆರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್‌ಗಳನ್ನು ನಕಲಿಸಿ ಹಂಚಿದ್ದ ಪ್ರಮುಖ ಆರೋಪಿ ಶರತ್ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ,  ಇಂತಹ ಕಟು  ಟೀಕೆಗಳನ್ನು ಮಾಡಿದ್ದಾರೆ.

ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎನ್ ಜಗದೀಶ್‌, ಶರತ್ ಪಾತ್ರವನ್ನು ಸೂಚಿಸುವ ತನಿಖಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದರು. ಶರತ್ ಇದ್ದ ಸ್ಥಳದಿಂದ ವಿಶೇಷ ತನಿಖಾ ತಂಡವು ಟ್ಯಾಬ್‌ಗಳು  ಮತ್ತು ಬಹಳಷ್ಟು ಸಿಡಿಗಳು,  ಡಿವಿಆರ್ ಅನ್ನು ವಶಪಡಿಸಿಕೊಂಡಿದ್ದು,  ಶರತ್‌ನನ್ನು  ಕಸ್ಟಡಿ ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದರು.

ಆರೋಪಿಗಳ ಪರ ವಕೀಲರು, ಶರತ್‌ನನ್ನು ವಿಚಾರಣೆಗೆ ತೆಗೆದುಕೊಳ್ಳಲು ಕೇವಲ ಮಾಹಿತಿ ಸಾಕಾಗುವುದಿಲ್ಲ ಎಂದು ಹೇಳಿದರು. ಸುಮಾರು 30 ದಿನಗಳಾದರೂ ಆರೋಪಿಗಳ ವಿರುದ್ಧ ಪ್ರಕರಣ ಮುಟ್ಟಿರಲಿಲ್ಲ. ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಕೋರಿ ಅವರು ಹೈಕೋರ್ಟ್‌ಗೆ ತೆರಳಿದ ನಂತರ, ತನಿಖಾ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ವಾದಿಸಿದರು.

ಇದನ್ನೂ ನೋಡಿ: ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದ 18 ಕ್ಷೇತ್ರಗಳಲ್ಲಿ 15ರಲ್ಲಿ ಎನ್‌ಡಿಎ ಗೆ ಸೋಲು

Donate Janashakthi Media

Leave a Reply

Your email address will not be published. Required fields are marked *