ಜಗತ್ತಿನಲ್ಲಿ ಅತಿ ಹೆಚ್ಚು ತೈಲ ಸಂಗ್ರಹ ವೆನಿಜೂಲದಲ್ಲಿದೆ. (ಈ ಕೆಳಗಿನ ಚಿತ್ರ ಗಮನಿಸಿ)
– ಟಿ. ಸುರೇಂದ್ರರಾವ್

ಎರಡು ದಶಕಗಳ ಹಿಂದೆ ವೆನಿಜೂಲದ ಎಲ್ಲಾ ತೈಲ ಕಂಪನಿಗಳು ಅಮೆರಿಕದ ಕಾರ್ಪೊರೇಟ್ ಗಳ ನಿಯಂತ್ರಣದಲ್ಲಿದ್ದವು. 2002 ರ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದ ಹ್ಯೂಗೋ ಚಾವೇಜ್ ನೇತೃತ್ವದ ಜನಪರ ಸರ್ಕಾರವು ತೈಲ ಕಂಪೆನಿಗಳನ್ನು ರಾಷ್ಟ್ರೀಕರಣ ಮಾಡಿ ತೈಲದಿಂದ ಬರುತ್ತಿದ್ದ ಭಾರಿ ಲಾಭವನ್ನು ವೆನಿಜೂಲದ ಸಾರ್ವಜನಿಕ ಜನರಿಗೆ ಶಿಕ್ಷಣ ಹಾಗೂ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡುತ್ತಿದೆ. ಈ ಕ್ರಮವು ಆಮೆರಿಕ ಮುಂತಾದ ಬಂಡವಾಳವಾದಿ ದೇಶಗಳ ಕಣ್ಣು ಕೆಂಪು ಮಾಡಿತ್ತು. ಚಾವೇಜ್ ಅವರ ಮರಣಾನಂತರ ಚುನಾವಣೆಯಲ್ಲಿ ಗೆದ್ದು ಬಂದ ನಿಕೊಲಾಸ್ ಮಡೊರೊ ಕೂಡ ಅದೇ ನೀತಿಯನ್ನು ಮುಂದುವರಿಸಿದರು.
ಇದನ್ನೂ ಓದಿ: ವೆನೆಜುವೆಲಾ ಅಧ್ಯಕ್ಷರ ಅಪಹರಣ-ಸಿಪಿಐ(ಎಂ) ಪ್ರತಿಭಟನೆ
ಅಮೆರಿಕ ಬೆಂಬಲ ಪಡೆದ ವೆನಿಜೂಲದ ವಿಪಕ್ಷಗಳು ಚುನಾವಣೆ ಗೆಲ್ಲಲು ಮಾಡಿದ ಎಲ್ಲಾ ತಂತ್ರಗಳು ವಿಫಲವಾಗಿ ಮತ್ತೆ ಮುಡೊರೋ ನೇತೃತ್ವದ ಪಕ್ಷವು ಅಧಿಕಾರಕ್ಕೆ ಬಂತು. ಆಗ ಅಮೆರಿಕ ಮುಂತಾದ ದೇಶಗಳ ಮುಖಂಡರು ಹೊಸ ಹೊಸ ಕಾರಣಗಳಿಂದ ಮಾದಕ ವಸ್ತು ಸಾಗಾಟ, ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಸಿ ಯುದ್ಧ ಸಾರುವ ಆರೋಪಗಳನ್ನು ವೆನಿಜೂಲದ ವಿರುದ್ಧ ಮಾಡಿ ತಂತ್ರ ರೂಪಿಸಿದವು. ಹೇಗಾದರೂ ಮಾಡಿ ವೆನಿಜೂಲದೇಶವನ್ನು ತಮ್ಮ ವಶ ಪಡೆಯಬೇಕೆನ್ನುವ ಹುನ್ನಾರದ ಭಾಗವಾಗಿ,ಈ ಹೊಸ ನಾಟಕ ಶುರುಮಾಡಿದೆ.
ಇದನ್ನೂ ನೋಡಿ: 2026 | ನಿರಾತಂಕ ಹಗಲು, ನಿರ್ಭಯದ ರಾತ್ರಿಗಳ ಖಾತ್ರಿಯಾಗಿರಲಿ Janashakthi Media
