ಚಿಕ್ಕಮಗಳೂರು| ಭಾರೀ ಮಳೆ: ಟೀ ಎಸ್ಟೇಟಿಗೆ ನುಗ್ಗಿದ ನೀರು

ಚಿಕ್ಕಮಗಳೂರು: ಮಲೆನಾಡಲ್ಲಿ ಭಾರೀ ಮಳೆ ಮುಂದುವರೆದ್ದಿದ್ದು, ಕಳಸ ತಾಲೂಕಿನ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಈ ಪರಿಣಾಮ ಕಳಸ ತಾಲೂಕಿನ ಕೆಳಗೂರು ಗ್ರಾಮದಲ್ಲಿ ಟೀ ಎಸ್ಟೇಟಿಗೆ ನೀರು ನುಗ್ಗಿದ ಘಟನೆ ಆಗಸ್ಟ್‌ 30ರಂದು ನಡೆದಿದೆ.

ಟೀ ಎಸ್ಟೇಟಿಗೆ ನೀರು ನುಗ್ಗಿದ್ದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಂಗಾಲಾಗಿದ್ದಾರೆ. ಬೆಳಗ್ಗೆಯಿಂದ ಒಂದೇ ಸಮ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಲೆನಾಡಿಗರ ಜನಜೀವನ ಹೈರಾಣಾಗಿದೆ.

ಇದನ್ನೂ ಓದಿ: ಬೆಂಗಳೂರು | ಸಂಸ್ಕೃತಿ ಕಮಾಡಿಟಿ ಆಗ್ತಿದೆ. ಡಾ. ಸಿದ್ದನಗೌಡ ಪಾಟೀಲ

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಾಫಿ ಬೆಳೆಗಾರರು ಕೂಡಾ ಕಂಗಾಲಾಗಿದ್ದಾರೆ. ಇಡೀ ವರ್ಷ ಮಳೆಯಾಗಿರುವುದರಿಂದ ಅರ್ಧಕರ್ಧ ಕಾಫಿ ಬೀಜಗಳು ನೆಲಕ್ಕುದುರುರಿವೆ ಎನ್ನಲಾಗಿದೆ.

ಇದನ್ನೂ ನೋಡಿ: ಅಲೆಮಾರಿ ಸಮುದಾಯದ ಹೋರಾಟ | ಓಟಿನ ಲೆಕ್ಕ ನಿಮ್ಮದಣ್ಣ – ಮೋಸ ಮಾಡಿದಿರಲ್ಲಣ್ಣ – ರಾಯಚೂರು ಪಲ್ಲವಿ Janashakthi Media

Donate Janashakthi Media

Leave a Reply

Your email address will not be published. Required fields are marked *