ಬೆಂಗಳೂರು: ಉತ್ತರ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಣಬಿಸಿಲು ತಾಂಡವಾಡುತ್ತಿದ್ದು, ಬಿಸಿಲಿನಿಂದಾಗಿ ಜನರು ಬೆಂದಿದ್ದರು. ಈ ಮಧ್ಯೆ, ಇಂದು ಸಂಜೆ ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದಿಢೀರ್ ಮಳೆಯಾಗಿದ್ದು, ತಂಪೆರೆದಿದೆ.
ಇದನ್ನು ಓದಿ:ಹಲ್ಲೆಯಿಂದ ನೊಂದಿದ್ದೇನೆ; ಸ್ವಂತ ಊರಿಗೆ ಹೊರಟ ಮೀನುಗಾರ ಮಹಿಳೆ
ಬೆಂಗಳೂರು ನಗರದಲ್ಲಿ ಮೇಖ್ರಿ ಸರ್ಕಲ್, ಸಂಜಯನಗರ, ಭೂಪಸಂದ್ರ, ಯಲಹಂಕ ಮತ್ತು ಹೆಬ್ಬಾಳ ಸುತ್ತಮುತ್ತ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ.
ಅರ್ಧ ಗಂಟೆ ಸುರಿದ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ವರ್ಷದ ಮೊದಲ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಕೋಲಾರ ನಗರ, ಶ್ರೀನಿವಾಸಪುರ, ಹಾಸನ ಜಿಲ್ಲೆಯ ಬೇಲೂರು ತಾಲೂಕುಗಳಲ್ಲಿ ಸಹ ಮಳೆಯಾಗಿದೆ.
ಇದನ್ನು ಓದಿ:ಕೊಯಂಬತ್ತೂರು| ಕಾಳಿಂಗ ಸರ್ಪ ಕಚ್ಚಿ 3 ದಿನಗಳ ನಂತರ ಉರಗ ತಜ್ಞ ಸಾವು
ಕಸ್ತೂರಿನಗರದಿಂದ ಎಂಎಂಟಿ ಜಂಕ್ಷನ್ (ಕೆಆರ್ ಪುರ) ಕಡೆಗೆ ಹೋಗುವ ಮಾರ್ಗದಲ್ಲಿ ಎಂಎಂಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿರುವುದರಿಂದ ವೈಟ್‌ಫೀಲ್ಡ್, ಮಹದೇವಪುರ ಮತ್ತು ಕೆಆರ್ ಪುರ ಕಡೆಗೆ ಹೋಗುವ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.