ಸ್ವೀಡನ್ : ಭಾರತದಲ್ಲಿನ ಕೊವಿಡ್-19 ಸಾಂಕ್ರಾಮಿಕದ 2ನೇ ತನ್ನ ಅಬ್ಬರ ಮುಂದುವರೆಸಿದ್ದು, ದೇಶಾದ್ಯಂತ ಆಕ್ಸಿಜನ್ ಕೊರತೆ ಮುಂದುವರೆದಿರುವಂತೆಯೇ ಇತ್ತ ಸ್ವೀಡನ್ ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ” ಭಾರತಕ್ಕೆ ಸಹಾಯ ಮಾಡೋಣ, ಭಾರತದ ಜೊತೆಗೆ ನಿಲ್ಲೋಣ” ಎಂದು ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿನ ವೈದ್ಯಕೀಯ ಆಕ್ಸಿಜನ್ ಕೊರತೆ ವಿಚಾರವಾಗಿ ಟ್ವೀಟ್ ಮಾಡಿರುವ ಗ್ರೇಟಾ, ‘ಭಾರತದ ಇತ್ತೀಚಿನ ಬೆಳವಣಿಗೆಗಳು ಹೃದಯ ವಿದ್ರಾವಕವಾಗಿದೆ. ಜಾಗತಿಕ ಸಮುದಾಯವು ಎಚ್ಚೆತ್ತುಕೊಂಡು ತಕ್ಷಣವೇ ಅಗತ್ಯವಾದ ಸಹಾಯವನ್ನು ನೀಡಬೇಕು’ ಎಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ನ್ನು 52 ಸಾವಿರ ಜನ ಟ್ವೀಟ್ ಲೈಕ್ ಮಾಡಿದ್ದು 17 ಸಾವಿರ ಜನ ರೀಟ್ವೀಟ್ ಮಾಡಿದ್ದಾರೆ.
ಭಾರತದಲ್ಲೀಗ ವಿಶ್ವದಲ್ಲಿ ಅತ್ಯಂತ ಹೆಚ್ಚು ದೈನಂದಿನ ಕೊರೋನ ಪ್ರಕರಣ ವರದಿಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 3.46 ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ. 2,624 ಜನರು ಸಾವನ್ನಪ್ಪಿದ್ದಾರೆ. ಹಾಗಾಗಿ ಭಾರತ ಈಗ ಸಂಕಷ್ಟದಲ್ಲಿದೆ. ಭಾರತದ ಜೊತೆ ಇತರೆ ರಾಷ್ಟ್ರಗಳು ಹೆಗಲು ನೀಡಬೇಕು ಎಂದು ಗ್ರೇಟಾ ಕಳಕಳಿಯನ್ನು ಮೆರೆದಿದ್ದಾರೆ.
ಇದನ್ನೂ ಓದಿ : ಗ್ರೇಟಾ ಹಂಚಿಕೊಂಡಿದ್ದ ಟೂಲ್ ಕಿಟ್ ನಲ್ಲಿ ಏನಿದೆ?
Heartbreaking to follow the recent developments in India. The global community must step up and immediately offer the assistance needed. #CovidIndia https://t.co/OaJVTNXa6R
— Greta Thunberg (@GretaThunberg) April 24, 2021
ಈ ಹಿಂದೆ ಭಾರತದ ರೈತರ ಹೋರಾಟದ ವಿಚಾರವಾಗಿ ಟ್ವೀಟ್ ಸುದ್ದಿಯಾಗಿದ್ದರು. ಅವರ ಟ್ವೀಟ್ ಗೆ ಭಾರತೀಯರು ಸೇರಿದಂತೆ ಜಾಗತಿಕ ಬೆಂಬಲ ವ್ಯಕ್ಯವಾಗಿತ್ತು. ಟೂಲ್ ಕಿಟ್ ಪ್ರಕರಣ ಎಂದೇ ಅದು ಖ್ಯಾತಿಯನ್ನು ಪಡೆದಿತ್ತು.