ಬೆಳಗಾವಿ| ಹೃದಯಾಘಾತ: ಮನೆಯಲ್ಲಿ ಮಲಗಿದ್ದಾಗ ಹೆಡ್ ಕಾನ್ಸ್ಟೇಬಲ್ ಸಾವು

ಬೆಳಗಾವಿ: ಇತ್ತೀಚಿಗೆ ಜನರಲ್ಲಿ ವಯಸ್ಸಿನ ಮಿತಿ ಇಲ್ಲದೆ ಹೃದಯಘಾತ ಆಗುವುದು ಸಾಮಾನ್ಯವಾದ ಕಾಯಿಲೆಯಾಗಿ ಬಿಟ್ಟಿದೆ. ಇದೀಗ ಬೆಳಗಾವಿಯಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಒಬ್ಬರು ಕರ್ತವ್ಯ ಮುಗಿಸಿ ಮನೆಗೆ ಬಂದು ಮಲಗಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಮೃತರನ್ನು ಮಲ್ಲಸರ್ಜ ಅಂಕಲಗಿ (45) ಎಂದು ತಿಳಿದುಬಂದಿದೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎಂದಿನಂತೆ ಡ್ಯೂಟಿ ಮುಗಿಸಿ ಮನೆಗೆ ಬಂದ ಮಲ್ಲಸರ್ಜ ಅಂಕಲಗಿ, ಊಟ ಮಾಡಿ ರಾತ್ರಿ ಮಲಗಿದ್ದರು.

ಇದನ್ನೂ ಓದಿ: ಬಿಸಿಎಮ್ ಇಲಾಖೆ ಮಹಾ ಭ್ರಷ್ಟಾಚಾರದ ತನಿಖೆಗಾಗಿ, ಮೂಲಭೂತ ಸೌಕರ್ಯಗಳಿಗಾಗಿ ನಿರಂತರ ಹೋರಾಟ: ಇತ್ಯರ್ಥವಾಗದ ಸಮಸ್ಯೆಗಳು – ಜಿಲ್ಲಾಧಿಕಾರಿಗಳಿಗೆ ಎಸ್ಎಫ್ಐ ದೂರು

ಏಪ್ರಿಲ್‌ 13 ಭಾನುವಾರ ಬೆಳಿಗ್ಗೆ ಎಷ್ಟು ಹೊತ್ತಾದರೂ ಕೂಡ ಏಳದೆ ಇದ್ದಾಗ ಮನೆಯವರು ಗಾಬರಿಗೊಂಡು ಎಬ್ಬಿಸಿದಾಗ ಮಲ್ಲಸರ್ಜಾ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಇದನ್ನೂ ನೋಡಿ: ಬದುಕನ್ನು ಕಿತ್ತುಕೊಂಡ ʼವೈಟ್‌ ಟಾಪಿಂಗ್‌ ಕಾಮಗಾರಿʼ! Janashakthi Media

Donate Janashakthi Media

Leave a Reply

Your email address will not be published. Required fields are marked *