ಎಚ್‌ಡಿಕೆ- ಸತೀಶ್ ಭೇಟಿ ಅನ್ಯ ಅರ್ಥ ಬೇಕಿಲ್ಲ: ತಂಗಡಗಿ

ಕೊಪ್ಪಳ: ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಸಚಿವ ಸತೀಶ್ ಜಾರಕಿಹೊಳಿ ತಮ್ಮ ಜಿಲ್ಲೆಯ ಯಾವುದಾದರೂ ಅಭಿವೃದ್ಧಿ ವಿಚಾರವಾಗಿ ಭೇಟಿ ಆಗಿರ ಬಹುದು. ಇದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಇದನ್ನು ಓದಿ :-ಒಳಮೀಸಲಾತಿ ವೈಜ್ಞಾನಿಕ ಸಮೀಕ್ಷೆಯನ್ನು ತ್ವರಿತಗೊಳಿಸಲು ಮತ್ತು ಅಲ್ಲಿಯವರೆಗೆ ಪರಿಶಿಷ್ಟ ನೇಮಕಾತಿಗಳನ್ನು ತಡೆಹಿಡಿಯಲು ಸಿಪಿಐ(ಎಂ) ಆಗ್ರಹ

ಕೊಪ್ಪಳದ ಕಾರಟಗಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬರೋಬ್ಬರಿ 138 ಶಾಸಕರೊಂದಿಗೆ ಸದೃಢ ಸರಕಾರ ನಮ್ಮದು. ನಮ್ಮ ಹಡುಗು ತುಂಬಿದೆ. ಜೆಡಿಎಸ್ ಬೆಂಬಲ ತಗೊಂಡ ನಾವೇನು ಮಾಡಬೇಕು? ಇಬ್ಬರು ನಾಯಕರು ಭೇಟಿ ಮಾಡಿದರೆ, ಸರಕಾರ ಬದಲಾಗುತ್ತದೆ ಎಂಬುದಕ್ಕೆ ಇದರಲ್ಲಿ ಏನಿದೆ? ಮಾಧ್ಯಮದಲ್ಲಿ ಮಾತ್ರ ಡಿಕೆಶಿ- ಸಿದ್ದರಾಮಯ್ಯ ಬಣ ಇದೆ. ಆದರೆ, ನಮ್ಮದು ಕಾಂಗ್ರೆಸ್ ಬಣ ಮಾತ್ರ. ಐದು ವರ್ಷ ಸರಕಾರ ಇರಲಿದ್ದು, ಮುಂದೆಯೂ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹನಿಟ್ರ್ಯಾಪ್, ಕೊಲೆ ಸುಪಾರಿ ಎಫ್ಐಆರ್ ಇವೆಲ್ಲ ಒಳ್ಳೆಯ ಬೆಳವಣಿಗೆ ಅಲ್ಲ. ಇವೆಲ್ಲ ಜನಪ್ರತಿನಿಧಿಗಳಿಗೆ ಗೌರವ ಕಡಿಮೆ ಮಾಡುವ ಘಟನೆಗಳು. ಈ ಬಗ್ಗೆ ಸರಕಾರ ತನಿಖೆ ಮಾಡಿಸುತ್ತೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಚಿವ ಕೆ. ರಾಜಣ್ಣ ಅವರನ್ನೆ ಕೇಳಬೇಕು ಎಂದರು.

ಇದನ್ನು ಓದಿ :-ಒಳಮೀಸಲಾತಿ ವೈಜ್ಞಾನಿಕ ಸಮೀಕ್ಷೆಯನ್ನು ತ್ವರಿತಗೊಳಿಸಲು ಮತ್ತು ಅಲ್ಲಿಯವರೆಗೆ ಪರಿಶಿಷ್ಟ ನೇಮಕಾತಿಗಳನ್ನು ತಡೆಹಿಡಿಯಲು ಸಿಪಿಐ(ಎಂ) ಆಗ್ರಹ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಉಚ್ಚಾಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯತ್ನಾಳ ಒಬ್ಬ ಹಿರಿಯ ನಾಯಕ. ಪ್ರಬಲ ಪಂಚಮಸಾಲಿ ಸಮುದಾಯದ ನಾಯಕರು. ಒಳ್ಳೆಯ ಸಂಘಟನಾ ಚತುರ. ಅವರನ್ನು ಪಕ್ಷದಿಂದ ಹೊರಹಾಕಿ ಬಿಜೆಪಿ ತಪ್ಪು ಮಾಡಿದೆ. ಈ ಮೂಲಕ ರಾಜ್ಯದ ಒಂದು ಪ್ರಬಲ ಸಮುದಾಯಕ್ಕೆ ಅನ್ಯಾಯ ಮಾಡುವ ಕೆಲಸ ಮಾಡಿದ್ದಾರೆ. ಬಿಜೆಪಿಯಲ್ಲಿನ ಭ್ರಷ್ಟಾಚಾರವನ್ನು ಹೊರಗೆ ಎಳೆದ ನಾಯಕ ಎಂದರೆ ಯತ್ನಾಳ ಸಾಹೇಬ್ರು. ಅವರು ಕಾಂಗ್ರೆಸ್ ಗೆ ಬರುವ ಬಗ್ಗೆ ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.

ವಿಜಯೇಂದ್ರ ರಾಜಕಾರಣದಲ್ಲಿ ಕಣ್ಣು ತೆರೆವ ಮುಂಚೆನೆ ಯತ್ನಾಳ ಕೇಂದ್ರದಲ್ಲಿ ಮಂತ್ರಿ ಆಗಿದ್ದವರು. ಯಡಿಯೂರಪ್ಪ ಹಾಗೂ ಅವರ ಮಗ ಲಿಂಗಾಯತರ ಹೆಸರು ಹೇಳಿಕೊಂಡೆ ರಾಜಕಾರಣ ಮಾಡಿದ್ದಾರೆ. ಈಗ ಲಿಂಗಾಯತ ನಾಯಕರನ್ನು ಉಚ್ಚಾಟನೆ ಮಾಡಿದ್ದಾರೆ. ಇವರ ಉಚ್ಚಾಟನೆ ಯಿಂದ ಕಾಂಗ್ರೆಸ್ ಗೆ ಲಾಭ‘ ನಷ್ಟದ ಪ್ರಶ್ನೆ ಬರಲ್ಲ. ನಾವು ವರು ಇಲ್ಲದೆಯೇ ಈಗಾಗಲೇ 136 ಸೀಟ್ ಗೆದ್ದಿದ್ದೇವೆ ಎಂದರು.

ಪ್ರಧಾನಿ ಮೋದಿ ರಂಜಾನ್ ಕಿಟ್ ವಿತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತೆ ಎಂದು ಹೇಳುವವರಿಗೆ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಈಗ ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಮಾಡಲಿ. ಮೋದಿಯವರು ಒಂದು ಕಡೆ ಮುಸ್ಲಿಂ ಓಲೈಕೆ ಮಾಡುತ್ತಾರೆ. ಮತ್ತೊಂದೆಡೆ ಮುಸ್ಲಿಂರಿಗೆ ಯೋಜನೆ ಯಾಕೆ ಕೊಡುತ್ತೀರಿ ಎಂದು ರಾಜ್ಯದ ಬಿಜೆಪಿ ನಾಯಕರು ಕೇಳುತ್ತಾರೆ. ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಮಾತಾಡ್ತಾರೆ ಯಾಕೆ ಅವರು ಈ ದೇಶದ ಪ್ರಜೆಗಳಲ್ವಾ? ಎಂದು ಪ್ರಶ್ನಿಸಿದರು.

Donate Janashakthi Media

Leave a Reply

Your email address will not be published. Required fields are marked *