ಬೆಂಗಳೂರು: ಫಸ್ಟ್ ಲುಕ್ ನಲ್ಲಿ ರೆಟ್ರೊ ಶೈಲಿಯ ಸೂಟ್ ಧರಿಸಿ, ಕೈಯಲ್ಲಿ ವಿಂಟೆಜ್ ಶೈಲಿಯ ರಿವಾಲ್ವರ್ ಹಿಡಿದು ಖಡಕ ಲುಕ್ ಕೊಟ್ಟಿದ್ದಾರೆ. ಇದನ್ನು ನೋಡಿದವರಿಗೆ ಡಾ. ರಾಜ್ ಕುಮಾರ ಅವರ ಬಾಂಡ್ ಶೈಲಿಯ ಸಿನಿಮಾಗಳು ನೆನಪಿಗೆ ಬರುತ್ತವೆ. ಅಣ್ಣಾವ್ರ ಬಳೀಕ ಅವರ ಮಗ ಶಿವಣ್ಣಕೂಡಾ ಬಾಂಡ್ ಶೈಲಿಯ ಪಾತ್ರಗಳಲ್ಲಿ ಮಿಂಚಲಿದ್ದಾರೆ ಎಂದುದನ್ನು ಚಿತ್ರತಂಡ ಈ ಲುಕ್ ಮೂಲಕ ಹೇಳಿ. ಇನ್ನು ಇದೇ ಮೊದಲ ಬಾರಿಗೆ ಇಂತಹ ಲುಕ್ ನಲ್ಲಿ ಶಿವಣ್ಣ ನನ್ನು ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಶಿವಣ್ಣ ಮತ್ತು ಡಾಲಿ ಜೋಡಿ
“ಕವಲು ದಾರಿ”, “ಸಪ್ತ ಸಾಗರದಾಚೆ ಎಲ್ಲೋ”, “ಗೋಧಿ ಬಣ್ಣ ಸಾಧಾರಣ ಮೈಕಟ್ಟು” ಸಿನಿಮಾಗಳ ನಂತರ ಹೇಮಂತ್ ಎಂ ರಾವ್ ಈ ಸಿನಿಮಾಗೆ ನಿರ್ದೆಶನ ಮಾಡುತ್ತಿದ್ದಾರೆ. ಈ ಬಾರಿ ರೆಟ್ರೋ ಶೈಲಿಯ ಡಿಟಡಕ್ಟಿವ್ ಕಥೆಯನ್ನು ಆಯ್ಕೆಮಾಡಿಕೊಂಡಿದ್ದಾರೆ.ಟಗರು, ಬೈರಾಗಿ, ಬಳಿಕ ಶಿವರಾಜ ಕುಮಾರ ಮತ್ತು ಡಾಲಿ ಧನಂಜ ಅವರು ʻ666 ಆಪರೆಷನ್ ಡ್ರೀಮ್ ಥಿಯೆಟರ್ʼ ಸಿನಿಮದಲ್ಲಿ ಒಂದಾಗಿದ್ದಾರೆ.
ಇದನ್ನೂ ಓದಿ: ಉಗ್ರರಿಗೆ ನೆರವು ನೀಡಿದ ಆರೋಪದಡಿ ಮೂವರ ಬಂಧನ
ಈ ತಿಂಗಳಲ್ಲೇ ಶೂಟಿಂಗ್ ಪ್ರಾರಂಭ
“666 666 ಆಪರೆಷನ್ ಡ್ರೀಮ್ ಥಿಯೆಟರ್” ಸಿನಿಮದ ಚಿತ್ರಿಕರಣವು ಜುಲೈನಲ್ಲಿ ಪ್ರಾರಂಭವಾಗುವ ನೀರಿಕ್ಷೆಯಿದೆ. ತೆಲಗು ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಕ್ ಜೆ ಗೌಡ್ ಅವರ ನಿರ್ಮಾಣ ಮಾಡುತ್ತಿದ್ದರೆಚರಣರಾಜ್ ಸಂಗೀತವಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ.
ಇನ್ನು ಶಿವರಾಜಕುಮಾರ್ ಅವರು 45 ಸಿನಿಮಾದ ಬಿಡುಗಡೆಯನ್ನು ಎದುರು ನೊಡುತ್ತಿದ್ದು, ಒಂದಷ್ಟು ಹೊಸ ಸಿನಿಮಾಗಳ ಚಿತ್ರಿಕರಣದಲ್ಲೂ ಮಗ್ನರಾಗಿದ್ದಾರೆ. ಇದೆಲ್ಲರ ಜೊತೆಗೆ ಉತ್ತರಖಂಡ ಸಿನಿಮಾದ ಕೊಂಚ ತಡವಾಗಿದ್ದು ಹಲಗಲಿ ಸಿನಿಮಾದ ಕೆಲಸಗಳು ಕೂಡಾ ನಡೆಯುತ್ತಿವೆ. ಇದರ ಮಧ್ಯೆ ಹೊಸ ಹೊಸ ಪ್ರಾಜೆಕ್ಟ್‌ಗಳನ್ನು ಡಾಲಿ ಒಪ್ಪಿಕೊಂಡಿದ್ದಾರೆ.
ಇದನ್ನೂ ನೋಡಿ: ಅನ್ನ ತಿನ್ನುವವರೆಲ್ಲ ರೈತರ ಹೋರಾಟ ಬೆಂಬಲಿಸಬೇಕು | ಚನ್ನರಾಯಪಟ್ಟಣ ಹೋರಾಟಕ್ಕೆ ಸಾಹಿತಿ ಕಲಾವಿದರ ಸಾತ್
