ಹಸಿವಿನ ಸೂಚ್ಯಂಕದ ಸುತ್ತ ಸರಕಾರ ಪ್ರಾಯೋಜಿತ ಅಸಂಗತ ನಾಟಕ

ಪ್ರೊ. ರಾಜೇಂದ್ರ ಚೆನ್ನಿ

ಮಹಾಶ್ವೇತಾದೇವಿ ಅವರು `ಶಿಶು’ ಎನ್ನುವ ಭೀಭತ್ಸವಾದ, ಪ್ರಭಾವಿಯಾದ ಕತೆಯೊಂದನ್ನು ಬರೆದಿದ್ದಾರೆ. ಕ್ಷಾಮ, ಬಡತನ ಇವುಗಳೇ ಸಾಮಾನ್ಯವಾಗಿರುವ ಪ್ರದೇಶವೊಂದರಲ್ಲಿ ಸರಕಾರಿ ಅಧಿಕಾರಿಯೊಬ್ಬನು ಹುಡುಕುತ್ತ ಹೋಗಿ ಒಂದು ಕಾಡಿನಂಚಿನಲ್ಲಿ ವಿಚಿತ್ರವೂ, ಭೀಕರವೂ ಆದ ದೃಶ್ಯವನ್ನು ಕಾಣುತ್ತಾನೆ. ವಿಕಾರರೂಪದ ಮಕ್ಕಳುಗಳಂತೆ ಕಾಣುವ ಕೆಲವು ವಿಚಿತ್ರ ಜೀವಿಗಳು ಅಲ್ಲಿವೆ. ಭಯಗ್ರಸ್ತನಾದ ಅವನಿಗೆ ಕೊನೆಗೆ ಅರ್ಥವಾಗುವುದೆಂದರೆ ಆ ಜೀವಿಗಳು ಮನುಷ್ಯರೇ. ಆದರೆ ಸರಿಯಾದ ಆಹಾರವಿಲ್ಲದೆ, ಪೌಷ್ಠಿಕತೆ ಇಲ್ಲದೆ ಅವರು ಕುಬ್ಜರಾಗಿ ಬಿಟ್ಟಿದ್ದಾರೆ. ಅವರನ್ನು ಈ ಸ್ಥಿತಿಗೆ ತಂದಿರುವ ಆಡಳಿತ, ಸರ್ಕಾರದ ಪ್ರತಿನಿಧಿಯಾಗಿ ಈ ಅಧಿಕಾರಿ ಇದ್ದಾನೆ. ಈ ಕತೆಯಲ್ಲಿ ಅಂಕಿ ಸಂಖ್ಯೆಯ ಬದಲು ವಾಸ್ತವವೇ ಇದೆ. ಇದು ಹಸಿವಿನ ಸೂಚ್ಯಂಕವು ಸೂಚಿಸುವ ಒಂದು ಸಾಧ್ಯತೆ.

‘ಅಂತರ‍್ರಾಷ್ಟ್ರೀಯ ಪಿತೂರಿ’, ‘ಅವರು ಹಸಿದಿಲ್ಲ, ಅವರ ಬಳಿ ಅನ್ನ ಇಲ್ಲ ಅಷ್ಟೇ’, ‘ದೇಶ-ವಿರೋಧಿಗಳು’ – ‘ಸ್ವಲ್ಪ ಇರು! ಅವರು ನಾವು ಹಸಿದಿದ್ದೇವಾ ಅಂತ ಪರಾಮರ್ಶೆ ಮಾಡಿ ಸರ್ಟಿಫೀಕೆಟ್ ಕೊಡಲಿ’ – ವ್ಯಂಗಚಿತ್ರ ಕೃಪೆ : ಸತೀಶ್‌ ಆಚಾರ‍್ಯ

ಆಧುನಿಕ ಜಗತ್ತಿನ ಮಹಾ ದುರಂತವೆAದರೆ ಮನುಷ್ಯರು ಅಂಕಿ ಸಂಖ್ಯೆಗಳಾಗಿದ್ದು. ಜನಸಂಖ್ಯೆ ಬೆಳೆದಂತೆ ಇದು ಅನಿವಾರ್ಯ, ಆಧುನೀಕ ಸಮಾಜಗಳ ನಿರ್ವಹಣೆ ದತ್ತಾಂಶಗಳ ವರದಿಯ ಆಧಾರದ ಮೇಲೆ ನಡೆಯುವುದು ಅನಿವಾರ್ಯ ಇತ್ಯಾದಿ ಕಾರಣಗಳನ್ನು ಹೇಳಬಹುದಾದರೂ, ಜಾಗತಿಕ ಮಟ್ಟದಲ್ಲಿ ಅಂಕಿಸAಖ್ಯೆಗಳ ರಾಜಕೀಯವು ಸಣ್ಣದೇನಲ್ಲ. ಇಂಗ್ಲೆಂಡ್‌ನಲ್ಲಿ ಹತ್ತೊಂಬತ್ತನೇಯ ಶತಮಾನದಲ್ಲಿ ದೊಡ್ಡ ಮಹಾನಗರಗಳಲ್ಲಿ ಉದ್ಯಮೀಕರಣ ಬೆಳೆದಂತೆ ಹಳ್ಳಿಗಳಿಂದ ಸಣ್ಣ ರೈತರು ವಲಸೆ ಬರುವುದು ಹೆಚ್ಚಿದಂತೆ ಮನುಷ್ಯರು ಸಂಖ್ಯೆಗಳಾಗಿ ಕಾಣತೊಡಗಿದರು. ಇದು ಅಂದಿನ ಬರಹಗಾರರಿಗೆ ಆಘಾತಕರವಾಗಿ ಕಾಣತೊಡಗಿತು. ಅಂದು Political Economy ಎಂದು ಕರೆಯಲಾಗುತ್ತಿದ್ದ ಅರ್ಥಶಾಸ್ತ್ರವು ಬರಹಗಾರರಿಗೆ ʻDismal Science’ ಆಗಿ ಕಾಣತೊಡಗಿತು. ಅಲ್ಲದೆ ಮನುಷ್ಯರ ಬದುಕಿನ ಕರಾಳ ವಾಸ್ತವಗಳು ನಮ್ಮನ್ನು ಬಾಧಿಸುವ ಬದಲಾಗಿ ಬರಿ ಅಂಕಿ ಸಂಖ್ಯೆಯ ವಿಷಯಗಳಾದವು. ಎಲ್ಲೋ ಒಂದು ಕಡೆಗೆ ಮನುಷ್ಯ ಭಾಷೆಗಳು ಮತ್ತು ಕಲ್ಪನಾಶಕ್ತಿಯು ತಮ್ಮ ಸಾಮರ್ಥ್ಯವನ್ನು ಈ ವಾಸ್ತವಗಳ ಎದುರಿಗೆ ಕಳೆದುಕೊಂಡು ಕೈ ಚೆಲ್ಲಿ ಬಿಟ್ಟವು. ಇಂಥ ಸಮಾಜಗಳನ್ನು ಬದಲಾಯಿಸಬೇಕು ಎನ್ನುವವರು ಕೂಡ ದತ್ತಾಂಶಗಳನ್ನೇ ಅವಲಂಬಿಸಬೇಕಾಯಿತು. ಮಾರ್ಕ್ಸ್ನ ಬಂಡವಾಳದಲ್ಲಿ ಇವು ಹೇರಳವಾಗಿವೆ. ವಿಶೇಷವಾಗಿ ಆ ಕೃತಿಯ ಅಡಿ ಟಿಪ್ಪಣಿಗಳಲ್ಲಿ.

ಇದೆಲ್ಲ ಪ್ರಸ್ತಾಪಿಸಲು ಕಾರಣವೆಂದರೆ, ಇತ್ತೀಚೆಗೆ ಹಸಿವಿನ ಸೂಚ್ಯಂಕದ ಮಾಹಿತಿಯು ಹೊರಬಂದ ಕೂಡಲೇ ಎರಡು ಬಗೆಯ ಪ್ರತಿಕ್ರಿಯೆಗಳು ಬಂದವು. ಮನಸ್ಸುಗಳು ಇನ್ನೂ ಮರಗಟ್ಟಿರದ ಅನೇಕರು ಈ ಸೂಚ್ಯಂಕವು ಸೂಚಿಸುವ ಮಾನವ ದುರಂತದ ಬಗ್ಗೆ ತೀರ ವಿಷಾದದಿಂದ ಪ್ರತಿಕ್ರಿಯಿಸಿದರು. ಅಂಕಿ-ಸAಖ್ಯೆಗಳ ಆಚೆಗೆ ನಮ್ಮ ಕಣ್ಣಿನ ಎದುರಿಗೆ ಬಂದಿದ್ದು (ಅಥವಾ ಬರಬೇಕಾದದ್ದು) ಪೌಷ್ಠಿಕತೆ ಇಲ್ಲದೆ, ದುರ್ಬಲವಾಗಿ ಕ್ಷೀಣವಾಗಿ ಮುರುಟಿಕೊಂಡ ಪುಟ್ಟಮಕ್ಕಳು. ಗರ್ಭದಲ್ಲಿರುವ ಮಕ್ಕಳಿಗೆ ಜನ್ಮಕೊಡಲೂ ಕಷ್ಟವಿರುವ ಅಮ್ಮಂದಿರು. ಅವರಲ್ಲಿ ಪ್ರಾಣ ಕಳೆದುಕೊಳ್ಳುವ ಅನೇಕರು. ಸಹಜವಾದ ಎತ್ತರಕ್ಕೆ ಬೆಳೆಯದ ಅಶಕ್ತ ಮಕ್ಕಳು. ಅಲ್ಲದೆ ಪ್ರತಿರಾತ್ರಿ ಊಟವೂ ಇಲ್ಲದೆ ಒಂದು ಲೋಟ ನೀರು ಕುಡಿದು ಮಲಗುವ ಅಪಾರ ಸಂಖ್ಯೆಯ ಜನರು. ಇವರೆಲ್ಲರು ನಮ್ಮಂತೆಯೇ ಮನುಷ್ಯರು, ಸೃಷ್ಠಿಯ ಪವಾಡವೇ ಎಂದುಕೊಳ್ಳುವ ಮನುಷ್ಯ ಜೀವಿಯ ಶರೀರವನ್ನು ಹೊಂದಿದವರು.

ಮಹಾಶ್ವೇತಾದೇವಿ ಅವರು `ಶಿಶು’ ಎನ್ನುವ ಭೀಭತ್ಸವಾದ, ಪ್ರಭಾವಿಯಾದ ಕತೆಯೊಂದನ್ನು ಬರೆದಿದ್ದಾರೆ. ಕ್ಷಾಮ, ಬಡತನ ಇವುಗಳೇ ಸಾಮಾನ್ಯವಾಗಿರುವ ಪ್ರದೇಶವೊಂದರಲ್ಲಿ ಸರಕಾರಿ ಅಧಿಕಾರಿಯೊಬ್ಬನು ಹುಡುಕುತ್ತ ಹೋಗಿ ಒಂದು ಕಾಡಿನಂಚಿನಲ್ಲಿ ವಿಚಿತ್ರವೂ, ಭೀಕರವೂ ಆದ ದೃಶ್ಯವನ್ನು ಕಾಣುತ್ತಾನೆ. ವಿಕಾರರೂಪದ ಮಕ್ಕಳುಗಳಂತೆ ಕಾಣುವ ಕೆಲವು ವಿಚಿತ್ರ ಜೀವಿಗಳು ಅಲ್ಲಿವೆ. ಭಯಗ್ರಸ್ತನಾದ ಅವನಿಗೆ ಕೊನೆಗೆ ಅರ್ಥವಾಗುವುದೆಂದರೆ ಆ ಜೀವಿಗಳು ಮನುಷ್ಯರೇ. ಆದರೆ ಸರಿಯಾದ ಆಹಾರವಿಲ್ಲದೆ, ಪೌಷ್ಠಿಕತೆ ಇಲ್ಲದೆ ಅವರು ಕುಬ್ಜರಾಗಿ ಬಿಟ್ಟಿದ್ದಾರೆ. ಅವರನ್ನು ಈ ಸ್ಥಿತಿಗೆ ತಂದಿರುವ ಆಡಳಿತ, ಸರ್ಕಾರದ ಪ್ರತಿನಿಧಿಯಾಗಿ ಈ ಅಧಿಕಾರಿ ಇದ್ದಾನೆ. ಈ ಕತೆಯಲ್ಲಿ ಅಂಕಿ ಸಂಖ್ಯೆಯ ಬದಲು ವಾಸ್ತವವೇ ಇದೆ. ಇದು ಹಸಿವಿನ ಸೂಚ್ಯಂಕವು ಸೂಚಿಸುವ ಒಂದು ಸಾಧ್ಯತೆ.

ಆದರೆ ಈ ವಾಸ್ತವವನ್ನು ಅಂಕಿ-ಸAಖ್ಯೆಯ ಮೂಲಕ ಹೇಳಿದಾಗ ನಮಗೆ ಈ ಭೀಕರ ಸತ್ಯ ಕಾಣುವುದೇ ಇಲ್ಲ. ಇನ್ನೂ ವಿಶೇಷವೆಂದರೆ ಭಾರತ ಸರ್ಕಾರವು ವಿಶ್ವ ಹಸಿವಿನ ಸೂಚ್ಯಂಕವನ್ನೂ ತನ್ನ ವಿರುದ್ಧ ನಡೆಸಲಾಗಿರುವ ಪಿತೂರಿ ಎಂದು ವರ್ಣಿಸಿದೆ. ಆಳುವ ಪಕ್ಷದ ಪರಿವಾರದವರೂ ಇದೇ ಮಾತನ್ನೂ ಆಡುತ್ತಿದ್ದಾರೆ. ಅಲ್ಲದೇ ಭಾರತವು ತನ್ನ ಅವಶ್ಯಕತೆಗಿಂತ ಹೆಚ್ಚು ಧಾನ್ಯ ಬೆಳೆಯುತ್ತಿವೆ ಮತ್ತು ಅದರ ಗೋದಾಮುಗಳು ತುಂಬಿ ತುಳುಕುತ್ತಿವೆ ಎಂದೂ ಹೇಳುತ್ತಿವೆ. ಕೋವಿಡ್ ಕಾಲದಲ್ಲಿಯೂ ಇದನ್ನೇ ಹೇಳಲಾಗಿತ್ತು. ನಾನು ಓದಿರುವ ಎಲ್ಲಾ ವರದಿಗಳ ಪ್ರಕಾರ ಅನೇಕ ವರ್ಷಗಳಿಂದ ಭಾರತದ ಗೋದಾಮುಗಳಲ್ಲಿ ಕೊಳೆಯುವ ಮತ್ತು ಇಲಿಗಳಿಗೆ ಆಹಾರವಾಗುವ ಧಾನ್ಯದ ಪ್ರಮಾಣವೂ ಗಾಬರಿ ಹುಟ್ಟಿಸುವಂತಿದೆ. ಆದರೆ ಸರ್ಕಾರಗಳ ಅಸಾಮರ್ಥ್ಯ, ಅಲಕ್ಷ ಮಾತ್ರವಲ್ಲ ಇಂದಿನ ಪ್ರಭುತ್ವದ ವ್ಯಾಪಾರಿ ಮನೋಭಾವದಿಂದಾಗಿ ಇದೆಲ್ಲವೂ ಆಗುತ್ತಿದೆ. ಹಸಿವಿನಿಂದ ಸಾಯಬಹುದಾದ ಮನುಷ್ಯರನ್ನು ಉಳಿಸುವ ಇರಾದೆ ಸರ್ಕಾರಕ್ಕೆ ಇಲ್ಲ. ಏಕೆಂದರೆ ಅಂಕಿ-ಸAಖ್ಯೆಗಳಷ್ಟೇ ಅಗಾಧವಾದ ಫೈಲುಗಳು, ಕಡತಗಳು, ಆದೇಶಗಳು ಇವುಗಳ ರಾಕ್ಷಸ ವ್ಯವಸ್ಥೆ ಇದೆಯಲ್ಲ! ಈ ಸ್ಥಿತಿಯು ಸುದಾರಣೆ ಆಗದಿದ್ದಲ್ಲಿ ಭವಿಷ್ಯ ಎಷ್ಟು ಕರಾಳವಾಗಬಹುದೆನ್ನುವುದನ್ನೂ ಊಹಿಸಬೇಕಲ್ಲವೆ? ಕೆಲವೇ ದಶಕಗಳಲ್ಲಿ ಜಗತ್ತಿನ ಅತಿ ಹೆಚ್ಚು ಸಂಖ್ಯೆಯ ಮನುಷ್ಯರು ಭಾರತೀಯರೇ ಆಗಿರುತ್ತಾರೆ. ಹಾಗೆ, ಅತಿ ಹೆಚ್ಚು ಸಂಖ್ಯೆಯ ಕಡುಬಡವರು, ಹಸಿವಿನಿಂದ ಬಳಲುವವರೂ ಆವರೇ ಆಗಿರುತ್ತಾರೆ. ಕೆಲವು ವರ್ಷಗಳಲ್ಲಿ ಬಡತನ ರೇಖೆಯ ಕೆಳಗೆ ದೂಡಲ್ಪಟ್ಟ ಅತಿ ಹೆಚ್ಚು ಸಂಖ್ಯೆಯ ಜನರು ಭಾರತೀಯರು. ಮಹಾ ಶ್ವೇತಾದೇವಿಯವರ ಕತೆಯಲ್ಲಿಯಂತೆ ವಿಕಾರರೂಪದ ಜೀವಿಗಳೂ ಇವರೇ ಆಗಬಹುದಲ್ಲವೆ?

ಆದರೆ ಪ್ರಭುತ್ವವು ವಾಸ್ತವಗಳಿಗೆ ಹೆದರಿಕೊಳ್ಳುತ್ತದೆ. ಅನೇಕ ವರ್ಷಗಳಿಂದ ಬಹುಮುಖ್ಯವಾದ ಅಧಿಕೃತವಾದ ದತ್ತಾಂಶಗಳನ್ನು ಸರ್ಕಾರವೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿಯೇ ಇಲ್ಲ. ಕೋವಿಡ್‌ನಿಂದ ಸತ್ತವರ ಸಂಖ್ಯೆಯ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿದೆ. ಅಂದರೆ ಕೋವಿಡ್ ಕಾಲದಲ್ಲಿ ಸತ್ತವರ ಸಂಖ್ಯೆ ಇಹದಲ್ಲಿಯೂ ಇಲ್ಲ. ಪರದಲ್ಲಿಯೂ ಇಲ್ಲ. ಆದರೆ ಸತ್ತವರ ಕುಟುಂಬದವರಿಗೆ ಸಾವಿನಿಂದ ಆಗಿರುವ ಶಾಶ್ವತವಾದ ಆಘಾತವನ್ನು ‘ಭಾರತ್ ಜೋಡೋ’ ನಡೆಯಲ್ಲಿ ಒಂದು ಮಗು ಆಕ್ಸಿಜನ್ ಇಲ್ಲದೇ ತೀರಿಹೋದ ತನ್ನ ತಂದೆಯ ಬಗ್ಗೆ ರಾಹುಲ್ ಗಾಂಧಿಗೆ ಹೇಳಿಕೊಂಡ ಮಾತಿನಲ್ಲಿ ನಾವೆಲ್ಲಾ ಕಂಡೆವು.

ಈ ವಿದ್ಯಮಾನಗಳೂ ಅಷ್ಟು ಸರಳವಲ್ಲ. ಪ್ರಭುತ್ವವು ತನ್ನ ಅಸಾಮರ್ಥ್ಯದಿಂದ ಸಮಸ್ಯೆಗಳು ಸುದ್ಧಿಯಾದಾಗ ಮಾಡುವ ಕೆಲಸವೆಂದರೆ ವಾಸ್ತವವನ್ನು ಮರೆಮಾಡುವುದು. ಅಂದರೆ ಆಧುನಿಕ ಜಗತ್ತಿನಲ್ಲಿ ವಾಸ್ತವದ ಅರಿವನ್ನು ಕೊಡುವ ದತ್ತಾಂಶಗಳನ್ನೂ ಬಚ್ಚಿಡುವುದು ಅಥವಾ ಉದ್ದೇಶಪೂರ್ವಕವಾಗಿ ತಪ್ಪಾಗಿ ನೀಡುವುದು. ವಿತ್ತ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು `ರೂಪಾಯಿ ಬೀಳುತ್ತಿಲ್ಲ; ಡಾಲರ್ ಬಲವಾಗುತ್ತಿದೆ’ ಎಂದು ಹೇಳಿದ್ದು ಈ ಹಳೆಯ ತಂತ್ರಗಾರಿಕೆಯ ಒಂದು ಉದಾಹರಣೆ. ಅವರ ಮಾತನ್ನು ಇನ್ನಿಲ್ಲದಂತೆ ಅಣಕಿಸುವ ಸಂದೇಶಗಳನ್ನು ಫೇಸ್‌ಬುಕ್‌ನಲ್ಲಿ ನೋಡಿದಾಗ ಇದೊಂದು ಬೃಹತ್ತಾದ ಅಸಂಗತ ನಾಟಕವೆಂದೆನಿಸಿತು. ಇಂಥದನ್ನು ನಾನು ನೋಡಿದ್ದು ಬೇಂದ್ರೆಯವರ ಕೆಲವು ಪದ್ಯಗಳಲ್ಲಿ ಮತ್ತು ಅವರ ಅಸಂಗತ ನಾಟಕಗಳಲ್ಲಿ. ಬೇಂದ್ರೆ ನಂತರ ಕನ್ನಡ ಕಾವ್ಯವೂ ಇಂಥ ದುರಂತ ಅಸಂಗತತೆ ಬಗ್ಗೆ, ಹಸಿವು ಬಡತನಗಳ ಬಗ್ಗೆ ರೋಷÀದಿಂದ ಬರೆಯಲೇ ಇಲ್ಲ.

ಬಂಗಾಳ ಬರ 1943ರ ಒಂದು ಭೀಕರ ಚಿತ್ರ

ನಮ್ಮೆದುರಿಗೆ ಇರುವ ಪ್ರಶ್ನೆಯೆಂದರೆ ಈ ವಾಸ್ತವಗಳ ಬಗ್ಗೆ ನಾವು ಬೆಳೆಸಿಕೊಂಡಿರುವ ಆಸೂಕ್ಷö್ಮತೆಯನ್ನು ಬದಲಿಸುವುದು ಹೇಗೆ? ಮನುಷ್ಯರು ಅಂಕಿ-ಸಂಖ್ಯೆಗಳಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಡುವುದು ಹೇಗೆ? ವಿಚಿತ್ರವೆಂದರೆ ಜಗತ್ತಿನಲ್ಲಿ ಸರ್ವಾಂತರ್ಯಾಮಿಯಾಗಿದ್ದೂ ಅಗೋಚರವಾಗಿರುವುದು ಹಸಿವು ಮತ್ತ ಬಡತನ. ಇಂಥ ಕುರುಡುತನ ನಮ್ಮ ಸಂವೇದನೆಯ ಭಾಗವಾಗಿರುವಂತೆ ಪ್ರಭುತ್ವದ ಅಸ್ತçವೂ ಆಗಿದೆ. ಮಾಧ್ಯಮಗಳು ಉದ್ದೇಶ ಪೂರ್ವಕವಾಗಿ Selective blindness ಅನ್ನು ಆಯ್ಕೆ ಮಾಡಿಕೊಂಡರೆ, ಪ್ರಜೆಗಳು ವಾಸ್ತವವನ್ನು ನೋಡುವ ಕ್ಷಮತೆಯನ್ನು ಕಳೆದುಕೊಂಡು ಬಿಡುತ್ತಾರೆ. ಕಂಪನಿ ನಾಟಕಗಳ ಅರಮನೆ ದೃಶ್ಯಗಳಲ್ಲಿ ರಾಜನು ಮಂತ್ರಿಯನ್ನು ಕೇಳುತ್ತಾನೆ, “ದೇಶದಲ್ಲಿ ಮಳೆ, ಬೆಳೆ ಎಲ್ಲವೂ ಚೆನ್ನಾಗಿದೆಯೇ? ಪ್ರಜೆಗಳು ಸಂತೋಷವಾಗಿದ್ದಾರೆಯೇ” ಎಂದು ಕೇಳಿದಾಗ ಮಂತ್ರಿಯು “ಪ್ರಭುಗಳೇ ಎಲ್ಲವೂ ಚೆನ್ನಾಗಿದೆ. ರಾಜ್ಯದಲ್ಲಿ ಸುಭಿಕ್ಷೆಯು ನೆಲೆಸಿದೆ” ಎಂದು ಹೇಳುತ್ತಿದ್ದನು. ಇಂದಿನ ಪ್ರಭುತ್ವವು ಇದನ್ನು ಬಯಸುತ್ತದೆ. ಮಂತ್ರಿಯ ಬದಲಾಗಿ ಮಾಧ್ಯಮಗಳು ಇಂಥ ಆಶ್ವಾಸನೆಯನ್ನು ಕೋಡುತ್ತಿವೆ.

ಚರಿತ್ರೆಯ ಭೀಕರ ಸತ್ಯವೆಂದರೆ ಈ ವಿದ್ಯಮಾನವು ಹೊಸತಲ್ಲ. ಭಾರತದಲ್ಲಿ ಅತ್ಯಂತ ಭೀಕರವಾದ ಕ್ಷಾಮದಿಂದಾಗಿ ಅನೇಕ ಲಕ್ಷ ಜನರು ಸಾಯುತ್ತಿದ್ದಾಗ ಬ್ರಿಟಿಷ್ ಸರ್ಕಾರವೂ ಕಂದಾಯವನ್ನು ತೆರಿಗೆಯನ್ನೂ ಹೆಚ್ಚಿಸಿ ಅತಿಹೆಚ್ಚು ಹಣ ಶೇಖರಿಸಿ ದಾಖಲೆಯನ್ನೇ ಮಾಡಿತು. ನೆನಪಿರಬೇಕು! ಹೀಗೆ ಕಂದಾಯ, ಕರವಸೂಲಿಯನ್ನು ಮಾಡಿದವರು ಬ್ರಿಟಿಷ್ ಸರ್ಕಾರದ ಸೇವಕರಾದ ಭಾರತೀಯರೇ. ಅವರಿಗೆ ಒಂದು ನಿಗದಿತ ಸಂಖ್ಯೆಯ ಕಂದಾಯ, ಕರಗಳನ್ನು ವಸೂಲಿ ಮಾಡಬೇಕಿತ್ತು. ಆಗಲೂ ಸಂಖ್ಯೆಗಳದೇ ಕಾರುಬಾರು, ಮನುಷ್ಯರು ಕಾಣಲೇ ಇಲ್ಲ. ಕಾಣದಿದ್ದರ ಕುರುಹಾಗಿ ಕೆಲವು ಭೀಕರವಾದ ಪೋಟೋಗಳಿವೆ. ಥೇಟು ಮಹಾಶ್ವೇತಾದೇವಿಯವರ ಕತೆಯ ದೃಶ್ಯದಂತಿದೆ.

Donate Janashakthi Media

Leave a Reply

Your email address will not be published. Required fields are marked *