ವಿಶ್ವದಲ್ಲಿ ಇದುವರೆಗೆ ಯಾವುದಾದರು ಸರ್ವಾಧಿಕಾರಿ ಆಡಳಿತ ನಡೆಸುವ ದೇಶದಲ್ಲೂ ಕೂಡಾ ಇಂತಹದೊಂದು ಘಟನೆ ನಡೆದ ಬಗ್ಗೆ ಯಾರಾದರೂ ಕೇಳಿದ್ದಾರೆಯೇ ಎಂಬುದು ಸಂಶಯ…!!! ಆದಿವಾಸಿ
– ಟಿ ಸುರೇಂದ್ರ ರಾವ್
ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಭೈನ್ಸ್ ದೇಹಿ ತಾಲ್ಲೂಕಿನ ಧಾಭ್ ಎಂಬ ಗ್ರಾಮದಲ್ಲಿ ಅಬ್ದುಲ್ ನಯೀಮ್ ಎಂಬಾತ ತನ್ನ ಸ್ವಂತ ಜಮೀನಿನಲ್ಲಿ ತನ್ನ ಸ್ವಂತ ಜೇಬಿಂದ ಹಣ ಖರ್ಚು ಮಾಡಿ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಶಾಲಾ ಕಟ್ಟಡವನ್ನು ನಿರ್ಮಿಸಿದರು. ಆದಿವಾಸಿ
ಸುಮಾರು ಎರಡು ಸಾವಿರದಷ್ಟು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಕೇವಲ ನಾಲ್ಕು ಮುಸ್ಲಿಂ ಕುಟುಂಬಗಳಷ್ಟೇ ಇವೆ. ಹತ್ತಿರದ ಸರ್ಕಾರಿ ಶಾಲೆ ಎಂಬುದು ಇರುವುದು ಐದು ಕಿಲೋಮೀಟರ್ ದೂರದಲ್ಲಿ…!
ಇದನ್ನೂ ಓದಿ: ಮಹಾರಾಷ್ಟ್ರ| ಮತದಾನವಿಲ್ಲದೆ ಚುನಾವಣೆಗಳು ನಡೆಯುವ ಏಕೈಕ ಪ್ರಜಾಪ್ರಭುತ್ವ – ನಟ ಕಿಶೋರ್
ಗ್ರಾಮದಲ್ಲಿರುವ ಬಹುಸಂಖ್ಯಾತ ದಲಿತ – ಆದಿವಾಸಿ ಮಕ್ಕಳು ಶಿಕ್ಷಣದ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಈ ಪ್ರದೇಶದಲ್ಲಿ ನರ್ಸರಿಯಿಂದ ತೊಡಗಿ ಎಂಟನೇ ತರಗತಿ ವರೆಗೆ ತರಗತಿಗಳನ್ನು ಆರಂಭಿಸುವುದು ನಯೀಮ್ ರವರ ಉದ್ದೇಶವಾಗಿತ್ತು…
ಆದರೆ ಮೂರು ದಿನಗಳ ಹಿಂದೆ ನಯೀಮ್ “ಅಕ್ರಮ ಮದ್ರಸ” ಕಟ್ಟುತ್ತಿದ್ದಾರೆ ಎಂದೂ,ಅಲ್ಲಿ ಮಕ್ಕಳಿಗೆ “ಅನಧಿಕೃತ ಶಿಕ್ಷಣ” ನೀಡಲಾಗುತ್ತದೆ ಎಂಬ ವದಂತಿ ಸಂಘ ಪ್ಯಾಸಿಸ್ಟ್ ಶಕ್ತಿಗಳಿಂದ ಗ್ರಾಮದಲ್ಲಿ ಹರಡಲಾಯಿತು!!!…
ಗ್ರಾಮಸ್ಥರ ಹೇಳಿಕೆಯ ಪ್ರಕಾರ, SDM, ತಹಸೀಲ್ದಾರ್ ಮತ್ತು ಪೊಲೀಸ್ ಠಾಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಲ್ಲ ದಾಖಲೆಗಳು ಸರಿಯಿವೆ ಎಂದು ಹೇಳಿ ಪಂಚಾಯಿತಿಯಿಂದ NOC ಪಡೆದುಕೊಳ್ಳುವಂತೆ ಜನವರಿ 10ರಂದು ಸಲಹೆ ನೀಡಿ ಹೋಗಿದ್ದರು…
ಆದರೆ ಅದರ ಮುಂದಿನ ದಿನವೇ, ಜನವರಿ 11ರಂದು, ಕಟ್ಟಡವನ್ನು ಕೆಡವಲು ಆದೇಶ ಹೊರಡಿಸಿ ಪಂಚಾಯಿತಿ ನಯೀಮ್ ಅವರಿಗೆ ನೋಟಿಸ್ ನೀಡುತ್ತದೆ!!!…
ನಯೀಮ್ ಪಂಚಾಯಿತಿ ಕಚೇರಿಗೆ ಹೋದಾಗ ಅರ್ಜಿಯನ್ನು ಸ್ವೀಕರಿಸದೇ “ಸೋಮವಾರ ಬನ್ನಿ” ಎಂದು ಹಿಂದಿರುಗಿಸಿದರು. ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಪೂರ್ಣವಾಗಿವೆ ಮತ್ತು ಶಾಲೆ ನಡೆಸಲು ಡಿಸೆಂಬರ್ 30ರಂದು ಶಾಲಾ ಶಿಕ್ಷಣ ಇಲಾಖೆಗೆ ಅನುಮತಿ ಅರ್ಜಿ ಸಲ್ಲಿಸಲಾಗಿದೆ ಎಂದು ನಯೀಮ್ ತಮ್ಮ ವಿವರಣೆಯಲ್ಲಿ ಸ್ಪಷ್ಟಪಡಿಸಿದ್ದರು…
ಆದರೆ ಅದಾಗಲೇ ಕಟ್ಟಡ ಧ್ವಂಸದ ಆದೇಶ ಹೊರಡಿಸಲಾಗಿತ್ತು!!!. ಶಾಲೆ ಕೆಡವುವ ನೋಟಿಸ್‌ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ನಂತರ ಪಂಚಾಯಿತಿ ತುರ್ತಾಗಿ ಕಟ್ಟಡಕ್ಕೆ NOC ನೀಡಿತು…
ಆದರೆ ವಿಷಯ ಅಲ್ಲಿಗೆ ಮುಗಿಯಲಿಲ್ಲ,,,ಅಂದೇ ಸಂಜೆ SDM ನಯೀಮ್ ಅವರಿಗೆ “ಮೇಲಿನಿಂದ ಭಾರೀ ಒತ್ತಡ ಇದೆ; ಶಾಲೆಯನ್ನು ಕೆಡವಲೇಬೇಕು” ಎಂದು ತಿಳಿಸುತ್ತಾರೆ!!!…
ಯಾವುದೇ ನಿಯಮ ಉಲ್ಲಂಘನೆ ಆಗಿದ್ದರೆ ದಂಡ ವಿಧಿಸಿ ಸರಿಪಡಿಸಿಕೊಳ್ಳೋಣ ಎಂದು ಗ್ರಾಮಸ್ಥರು ಮನವಿ ಮಾಡಿದರು. ಶಾಲೆ ಕೆಡವಿದರೆ ಮಕ್ಕಳ ಶಿಕ್ಷಣ ಸಂಪೂರ್ಣ ನಿಂತು ಹೋಗುತ್ತದೆ ಎಂದು ಕೂಡಾ ಹೇಳಿ ನೋಡಿದರು…
NOC ನೀಡಿದ ಬಳಿಕವೂ ಸೋಮವಾರದ ಧ್ವಂಸ ಆದೇಶ ಹಿಂಪಡೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಹೇಮಂತ್ ವಾಗಾದ್ರೆ ಅವರೊಂದಿಗೆ ಗ್ರಾಮಸ್ಥರು 80 ಕಿಲೋಮೀಟರ್ ದೂರದ ಜಿಲ್ಲಾಧಿಕಾರಿ ಕಚೇರಿಗೆ ಹೊರಟರು. ಆದರೆ ದಾರಿ ಮಧ್ಯದಲ್ಲೇ ಪೊಲೀಸರು ಅವರನ್ನು ತಡೆದರು!!!.
ಹಲವು ಗಂಟೆಗಳ ಬಳಿಕ ಬಿಟ್ಟಾಗ ಗ್ರಾಮಸ್ಥರು ನೇರವಾಗಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಎಲ್ಲ ದಾಖಲೆಗಳು ಹಾಗೂ ಪಂಚಾಯಿತಿಯ NOC ಕೂಡ ಲಭ್ಯವಿದೆ, ಈಗ ಯಾವುದೇ ಸಮಸ್ಯೆ ಇಲ್ಲ ಎಂದು ಮನವಿ ಮಾಡಿದರು…
ಆದರೆ ಜಿಲ್ಲಾಧಿಕಾರಿ, “ಶಿಕ್ಷಣದಂತ ಪವಿತ್ರವಾದ ವಿಷಯದಲ್ಲೂ ನೀವು ಅಕ್ರಮ ಮಾರ್ಗವನ್ನು ಬಯಸುತ್ತಿದ್ದೀರಿ” ಎಂದು ನೇರವಾಗಿ ಹೇಳಿದರು!!!…
ಜಿಲ್ಲಾಧಿಕಾರಿ ಈ ಮಾತುಗಳನ್ನು ಹೇಳುತ್ತಿರುವಾಗಲೇ ಇನ್ನೊಂದು ಕಡೆ SDM ಕಟ್ಟಡವನ್ನು ಧ್ವಂಸಗೊಳಿಸುತ್ತಿದ್ದರು!!!…
ಈ ಕುರಿತು ಜಿಲ್ಲಾಧಿಕಾರಿಯೂ ಪೊಲೀಸ್ ವರಿಷ್ಠಾಧಿಕಾರಿಯೂ ಯಾರೂ ಮಾಧ್ಯಮಗಳ ಮುಂದೆ ಮಾತನಾಡಲು ಅಥವಾ ಅಧಿಕೃತ ಹೇಳಿಕೆ ನೀಡಲು ಸಿದ್ಧರಾಗಿರಲಿಲ್ಲ!!!…
21ನೇ ಶತಮಾನದಲ್ಲಿ ಆದಿವಾಸಿ–ದಲಿತ ಹಿಂದುಳಿದ ಮಕ್ಕಳಿಗಾಗಿ ತನ್ನ ಸ್ವಂತ ಜಮೀನಿನಲ್ಲಿ ತನ್ನ ಸ್ವಂತ ಹಣದಿಂದ ಒಂದೊಳ್ಳೆಯ ಸಂಕಲ್ಪದಿಂದ ಶಾಲೆ ಕಟ್ಟಿದ ಒಬ್ಬ ಮಾನವೀಯ ವ್ಯಕ್ತಿಯ ಕಟ್ಟಡವನ್ನು ಕೆಡವುವ ಮೂಲಕ ಮದ್ಯಪ್ರದೇಶ ಸರಕಾರ ಮತ್ತು ಆಡಳಿತ ಸಮಾಜಕ್ಕೆ ನೀಡುತ್ತಿರುವ ಸಂದೇಶವಾದರು ಏನು?!…
ಇದನ್ನೂ ನೋಡಿ: ಸಂಕ್ರಾಂತಿ ಕವಿಗೋಷ್ಠಿ | ಕಾವ್ಯಗಳ ಹುಗ್ಗಿಯ ಸಂಭ್ರಮ Janashakthi Media
