ಮತಾಂತರದ ವಿವಾಹ ಕಾನೂನು ಬಾಹಿರ: ಕಾಯ್ದೆ ಜಾರಿಗೆ ತಂದ ಹರಿಯಾಣ ರಾಜ್ಯ

ಚಂಡೀಗಢ: ಮತಾಂತರದ ವಿವಾಹ ಕಾನೂನು ಬಾಹಿರವೆಂದು ಹೊಸ ಕಾಯ್ದೆಯೊಂದನ್ನು ಹರಿಯಾಣ ಸರ್ಕಾರ ಜಾರಿಗೊಳಿಸಿದೆ. ಈ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಗಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಯಾರಾದರೂ ಈ ಕಾಯ್ದೆ ಉಲ್ಲಂಘಿಸಿದರೆ, ಅಂತಹ ವ್ಯಕ್ತಿ 3ರಿಂದ 10ವರ್ಷಗಳವರೆಗೆ ಜೈಲುಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಹರಿಯಾಣದಲ್ಲಿ ಕಳೆದ 4 ವರ್ಷಗಳಲ್ಲಿ 127 ಬಲವಂತದ ಮತಾಂತರ ಪ್ರಕರಣ ದಾಖಲಾಗಿತ್ತು. ಇವುಗಳನ್ನು ಗಮನಲ್ಲಿಸಿಕೊಂಡು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ “ಧಾರ್ಮಿಕ ಮತಾಂತರ ನಿಗ್ರಹ ಕಾಯ್ದೆ-2022” ಜಾರಿಗೆ ಶಿಫಾರಸ್ಸು ಮಾಡಿತು.

ಮಾರ್ಚ್ 2022ರಲ್ಲಿ ರಾಜ್ಯ ಆಯವ್ಯಯ ಅಧಿವೇಶನದಲ್ಲಿ, ಹರಿಯಾಣ ಸರ್ಕಾರ ಈ ಮಸೂದೆ ಪ್ರಸ್ತಾಪಿಸಿತು. ವಿಧಾನಸಭೆಯಲ್ಲಿ ಅಂಗೀಕಾರವಾಗಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ಇದೀಗ ಕಾಯ್ದೆಯಾಗಿ ಜಾರಿಗೊಂಡಿದೆ.

ರಾಜ್ಯದಲ್ಲಿ ಜಾರಿಯಾಗಿರುವ ಧಾರ್ಮಿಕ ಮತಾಂತರ ನಿಗ್ರಹ ಕಾಯ್ದೆ-2022 ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ನಿಟ್ಟಿನಲ್ಲಿ ಬಲವಂತದ ಮತಾಂತರ ಪ್ರಕರಣದ ಬಗ್ಗೆ ಸಂತ್ರಸ್ತರು ಮತ್ತು ಆರೋಪಿ ವಿರುದ್ಧ ಕೋರ್ಟ್ ಕ್ರಮತೆಗೆದುಕೊಳ್ಳಲು ಕಾಯ್ದೆ ನೆರವಾಗಲಿದೆ.

ಒಂದು ವೇಳೆ ಬಲವಂತದ ಮತಾಂತರದ ವಿವಾಹವಾಗಿ ಮಗು ಜನಿಸಿದ ಮೇಲೆ ಮಹಿಳೆ ಅಥವಾ ಪುರುಷ ವಿವಾಹದ ಬಗ್ಗೆ ಅಸಮಾಧಾನ ಇದ್ದರೆ ಇಬ್ಬರೂ ಕೋರ್ಟ್ ಮೊರೆ ಹೋಗಬಹುದು. ಆಗ ಕೋರ್ಟ್ ಮಗುವಿನ ಮುಂದಿನ ಭವಿಷ್ಯದ ಬಗ್ಗೆ ಜೀವನಾಂಶ ನೀಡುವಂತೆ ಆದೇಶ ನೀಡಲಿದೆ. ಮತಾಂತರದ ನಂತರ ವಿವಾಹದಿಂದ ಜನಿಸಿದ ಮಕ್ಕಳು ಸಹ ನಿರ್ವಹಣೆ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆರೋಪಿ ಮೃತಪಟ್ಟರೆ, ಸ್ಥಿರಾಸ್ತಿಯನ್ನು ಹರಾಜು ಮಾಡುವ ಮೂಲಕ ಸಂತ್ರಸ್ತರಿಗೆ ಪರಿಹಾರ ನೀಡಲಾಗುತ್ತದೆ. ಇದರಲ್ಲಿ ಕಾಯ್ದೆಯ 6ರ ಅಡಿಯಲ್ಲಿ ವಿವಾಹ ಅಸಿಂಧು ಎಂದು ಘೋಷಿಸುವ ನಿಬಂಧನೆಯೂ ಒಳಗೊಂಡಿದೆ.

ಬಲವಂತದ ಮತಾಂತರಕ್ಕೆ ಶಿಕ್ಷೆಯ ಪ್ರಮಾಣ:

ಬಲವಂತದ ಮತಾಂತರಕ್ಕೆ 1ರಿಂದ 5 ವರ್ಷ ಜೈಲುಶಿಕ್ಷೆ. ಕನಿಷ್ಠ ಒಂದು ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶ. ವಿವಾಹದ ವಿಚಾರದಲ್ಲಿ ಧರ್ಮದ ವಿಚಾರ ಮುಚ್ಚಿಟ್ಟರೆ 3ರಿಂದ 10 ವರ್ಷಗಳವರೆಗೆ ಜೈಲುಶಿಕ್ಷೆ. ಕನಿಷ್ಠ ಮೂರು ಲಕ್ಷ ರೂಪಾಯಿವರೆಗೆ ದಂಡವನ್ನೂ ವಿಧಿಸಬಹುದಾಗಿದೆ. ಸಾಮೂಹಿಕ ಧಾರ್ಮಿಕ ಮತಾಂತರ ಪ್ರಕರಣದಲ್ಲಿ 10 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸುವಂತ ನಿಯಮಗಳು ಈ ಕಾಯ್ದೆ ಒಳಗೊಂಡಿದೆ.

ಜಿಲ್ಲಾಧಿಕಾರಿಗೆ ದೂರು ನೀಡಬಹುದು

ಮತಾಂತರ ವಿಚಾರದಲ್ಲಿ ವಿಭಾಗೀಯ ಆಯಕ್ತರಿಗೂ ಮನವಿ ಸಲ್ಲಿಸುವ ಅವಕಾಶವಿದೆ. ಒಂದು ವೇಳೆ ಸ್ವಇಚ್ಛೆಯಿಂದ ಮತಾಂತರಗೊಂಡಿದ್ದರೆ, ಆಗ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು. ಆ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಯ ಸಾರ್ವಜನಿಕ ಸೂಚನಾ ಫಲಕದಲ್ಲಿ ಹಾಕಲಾಗುತ್ತದೆ. ಒಂದು ವೇಳೆ ಆಕ್ಷೇಪ ಬಂದರೆ ಇಲ್ಲವೇ 30ದಿನದೊಳಗೆ ಲಿಖಿತ ದೂರು ಬಂದರೆ, ಜಿಲ್ಲಾಧಿಕಾರಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಮತಾಂತರ ಘಟನೆಯಲ್ಲಿ ಕಾಯ್ದೆ ಉಲ್ಲಂಘನೆಯಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಿರ್ಧರಿಸುತ್ತಾರೆ. ನಂತರ 30ದಿನದೊಳಗೆ ಜಿಲ್ಲಾಧಿಕಾರಿ ಆದೇಶದ ವಿರುದ್ಧ ವಿಭಾಗೀಯ ಕಮಿಷನರ್‌ ಗೆ ಮನವಿ ಸಲ್ಲಿಸಬಹುದಾಗಿದೆ ಎಂದು ವರದಿ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *