ಈ ದೇಶದ್ ಕಥೆ ಇಷ್ಟೇ ಕಣಮ್ಮೋ – ಹಂಸಲೇಖ ಬೆಂಬಲಕ್ಕೆ ನಿಂತ ಕವಿರಾಜ್

ಬೆಂಗಳೂರು : “ಈ ದೇಶದ್ ಕಥೆ ಇಷ್ಟೇ ಕಣಮ್ಮೋ..ಇಲ್ಲ್ ಚಿಂತೇ (ಚಿಂತನೆ) ಮಾಡಿ ಲಾಭ ಇಲ್ಲಮ್ಮೋ..”ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿ ಹಂಸಲೇಖರವರ ಬೆಂಬಲಕ್ಕೆ ನಿಂತಿದ್ದಾರೆ.

“ಹಂಸಲೇಖ ಸರ್ ಒಂದು ಅತ್ಯಂತ ಸದಾಶಯದ ಬದಲಾವಣೆಯ ವಿಷಯ ಪ್ರಸ್ತಾಪಿಸಿದ್ದರು. ಶತಮಾನಗಳಿಂದ ಹೀನಾಯವಾಗಿ ನಡೆಸಿಕೊಳ್ಳಲ್ಪಟ್ಟ ಜನರ ವೇದನೆಗೊಂದು ದನಿಯಾಗಿ ಮಾತಾಡಿದ್ದರು.

ದೌರ್ಜನ್ಯಕ್ಕೊಳಗಾದವರ ಆಕ್ರೋಶವನ್ನು ಪ್ರತಿನಿಧಿಸುವಾಗ ಅದಕ್ಕೆ ಪೂರಕವಾಗಿ ಮಾತನಾಡುವಾಗ ಒಂದು ವಾಕ್ಯದಲ್ಲಿ ಬಳಸಿದ ಖಾರವೆನಿಸಿದ ಒಂದೆರೆಡು ಪದಗಳನ್ನು ಇಟ್ಟುಕೊಂಡು ಕ್ಷಮೆ ಕೇಳಿಸಿಕೊಳ್ಳಲಾಗಿದೆ . ಆದರೆ ನಿಜವಾದ ಮಹತ್ವ ಸಿಗಬೇಕಾಗಿದ್ದು ಅವರ ಸದಾಶಯಕ್ಕೆ. ಅದು ಈ ಗಲಭೆಯಲ್ಲಿ ಮುಚ್ಚಿಯೇ ಹೋಯಿತು.ವಿಷಾದದ ವಿಷಯ ಎಂದರೆ ಅವರ ಮಾತುಗಳು ಯಾರ ಹಿತಾಸಕ್ತಿಯ ವಿರುದ್ಧವಿತ್ತೋ ಅವರೆಲ್ಲಾ ಒಂದಾಗಿ ಗಟ್ಟಿ ದನಿಯಲ್ಲಿ ವಿರೋಧಿಸಿದರು.

ಆದರೆ ಅವರ ಮಾತುಗಳ ಕಾಳಜಿ ಯಾರ ಪರವಿತ್ತೋ ಆ ಬಹುಸಂಖ್ಯಾತ ಜನರು ತಮಗೇನು ಸಂಬಂಧವಿಲ್ಲ , ನಮಗೇಕೆ ಎಂಬಂತೆ ಮೂಕ ಪ್ರೇಕ್ಷಕರಾಗಿ ಕುಳಿತರು. ಕೊನೆಗೆ ಅವರದೇ ಹಾಡು ನೆನಪಾಗುತ್ತೆ.

ಈ ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೇ (ಚಿಂತನೆ) ಮಾಡಿ ಲಾಭ ಇಲ್ಲಮ್ಮೋ..”ಎಂದು ಬರೆದುಕೊಂಡಿದ್ದಾರೆ.

ಡಿಎಸ್ಎಸ್ ಬೆಂಬಲ : ಜಾತಿವಾದಿಗಳು ಜಾಲತಾಣಗಳ ಮೂಲಕ ಹಂಸಲೇಖ ವಿಚಾರವನ್ನು ಟ್ರೋಲ್ ಮಾಡುತ್ತಿದ್ದಾರೆ ಎಂದು ಡಿಎಸ್‌ಎಸ್ ರಾಜ್ಯ ಮುಖಂಡ ಗುರುಮೂರ್ತಿ ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶೇ. 3ರಷ್ಟು ಮನುವಾದಿಗಳು ಹಂಸಲೇಖ ಕ್ಷಮೆ ಕೇಳಲು ಒತ್ತಾಯ ಮಾಡ್ತಾರೆ.

ಆದರೆ, ಶೇ. 85ರಷ್ಟು ಜನರು ಪ್ರತಿಭಟಿಸುವಲ್ಲಿ ಇಂದು ಸೋತಿದ್ದೇವೆ. ದಲಿತರ ಪರವಾಗಿ ಧ್ವನಿ ಎತ್ತುವ ಜನರ ಧ್ವನಿಯನ್ನು ಅಡಗಿಸುವ ಕೆಲಸವನ್ನು ಶೇ. 3ರಷ್ಟು ಜನರು ಮಾಡ್ತಿದ್ದಾರೆ. ದಲಿತರ ಪರವಾಗಿ ಬಸವಣ್ಣ, ಬುದ್ದ, ಗೌರಿಯವರ ಧ್ವನಿ ಅಡಗಿಸುವ ಕೆಲಸ ಮಾಡಿದ್ದಾರೆ‌. ದಲಿತರು ಎಷ್ಟೇ ವಿರೋಧ ಮಾಡಿದರೂ ಯಾರು ತಲೆ ಕೆಡಿಸಿಕೊಳ್ಳಲ್ಲ. ಇದೇ ಕಾರಣಕ್ಕೆ ಹಂಸಲೇಖ ಅವರು ಡೆಮಾಕ್ರಸಿ ಹೋಗಿ ಧರ್ಮಾಕ್ರಸಿ ಬರುತ್ತಿದೆ ಎಂದರು.

ಅದೇ ಕಾರಣಕ್ಕಾಗಿ ಹಂಸಲೇಖ ಅವರ ಧ್ವನಿ ಅಡಗಿಸುವ ಕೆಲಸ ಮಾಡಲಾಗುತ್ತಿದೆ. ಸಂವಿಧಾನ ಕಾಪಾಡುವ ಎಚ್ಚರದ ಹೆಜ್ಜೆ ಇಡಬೇಕಾದ ಸ್ಥಿತಿ ಇಂದು ನಿರ್ಮಾಣವಾಗುತ್ತಿದೆ. ಹಂಸಲೇಖ ಅವರು ಹೇಳಿಕೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಮರ್ಥನೆ ಮಾಡಿಕೊಳ್ಳುತ್ತೆ. ಹಂಸಲೇಖ ಪರವಾಗಿ ಡಿಎಸ್‌ಎಸ್ ಕೆಲಸ ಮಾಡುತ್ತೆ. ಹಂಸಲೇಖ ಅವರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು, ಭಯ ಪಡಬಾರದು ಎಂದು ಬೆಂಬಲ ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *