ಕಲಾ ಪ್ರದರ್ಶನಗಳೊಂದಿಗೆ ವಿಜೃಂಭಿಸಿದ ಹಳೆವೂರು ಜಾನಪದ ಸಮ್ಮೇಳನ

ಕುಣಿಗಲ್: ದಿನಾಂಕ ಅಕ್ಟೋಬರ್‌ 26ರಂದು ರಂದು ತಾಲ್ಲೂಕು, ಹುಲಿಯೂರುದುರ್ಗ ಹೋಬಳಿ ಹಳೇವೂರು ಗ್ರಾಮದ ಹುಲಿಯೂರಮ್ಮ ದೇವಸ್ಥಾನದ ಆವರಣದಲ್ಲಿ ಹಳೇವೂರು ಜಾನಪದ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಸಮ್ಮೇಳನ ವಿಜೃಂಭಣೆಯಿಂದ ನಡೆಯಿತು. ಪ್ರದರ್ಶನ

ವಿವಿಧ ಕಲಾತಂಡಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಯಶಸ್ಸು ಕಂಡಿತು. ವೇದಿಕೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿದ ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟದ ರಾಜ್ಯಧ್ಯಕ್ಷರಾದ ಶ್ರೀ ವೀರೇಶ್ ಪ್ರಸಾದ್ (ಗುಬ್ಬಿ ವೀರಣ್ಣ) ರವರು ಮಾತನಾಡುತ್ತಾ, ಕಲಾವಿದರಿಗೆ ಸಾಮಾಜಿಕ ಭದ್ರತೆ, ಮಕ್ಕಳಿಗೆಶೈಕ್ಷಣಿಕ ಸೌಲಭ್ಯ,ಆರೋಗ್ಯ ಮತ್ತಿತರರ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಸಂಘ ಸಂಸ್ಥೆಗಳಿಗೆ ಆರ್ಥಿಕ ಸೌಲಬ್ಯಗಳನ್ನು ಕಲ್ಪಿಸುವಂತೆ ಸರ್ಕಾರವನ್ನು ಆಗ್ರಿಹಿಸಿದರು. ಪ್ರದರ್ಶನ

ಇದನ್ನೂ ಓದಿ: “ಅವಳ ಹೆಜ್ಜೆ ಕಿರುಚಿತ್ರೋತ್ಸವ-2026”: ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರ ಸ್ಪರ್ಧೆ

ಜಾನಪದ ಹಾಗೂ ಬಯಲಾಟ ಕಲಾವಿದರಾದ ಶ್ರೀ. ಡಿ. ನಾಗರಾಜು ವೀರ್ಲಗೊಂದಿ ರವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಜಾನಪದ ನಮ್ಮ ಸಂಸ್ಕೃತಿಯ ಪ್ರತಿಬಿಂಬ ನಮ್ಮ ಆಚಾರ ವಿಚಾರ,ಜನನ, ಮರಣ, ವೈದ್ಯ ಪದ್ಧತಿ, ಅಡುಗೆವಿಧಾನ, ಸಾಮೂಹಿಕತೆ, ಸಮಗ್ರತೆಯನ್ನು ಒಳಗೊಂಡಿದೆ. ಜನಪದ ಕಾಯಕ ಜೀವಿಗಳ ಪ್ರತಿ ಬಿಂಬ, ಕೃಷಿ ಕಾಯಕದಲ್ಲಿ ತಮ್ಮ ಧಣಿವನ್ನು ಆರಿಸಿಕೊಳ್ಳಲು, ಕುಟ್ಟುವಾಗ, ಬೀಸುವಾಗ, ನಾಟಿಮಾಡುವಾಗ ಅನಕ್ಷರಸ್ತ ಕುಕ್ಷಿಗಳಿಂದ ಪಾರಂಪರಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಬಾಯಿಂದ ಬಾಯಿಗೆ ಹರಿದು ಬಂದ ಮೌಖಿಕ ಸಾಹಿತ್ಯ ಈ ಜನಪದ. ಸುಮಾರು 22 ಮಹಾ ಕಾವ್ಯಗಳನ್ನು ಜಾನಪದ ಸಾಹಿತ್ಯದಲ್ಲಿ ಕಾಣುತ್ತೇವೆ. ಕರ್ನಾಟಕದಲ್ಲಿ 170ಕ್ಕೂ ಹೆಚ್ಚು ಜಾನಪದ ಕಲೆಗಳು ಜೀವಂತವಾಗಿವೆ ಎಂದು ತಿಳಿಸಿ ಜುಂಜಪ್ಪನ ಕಾವ್ಯದ ಹಾಡುಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಡಿ.ಹೆಚ್.ಎಸ್ ಜಿಲ್ಲಾಧ್ಯಕ್ಷ ರಾಜುವೆಂಕಟಪ್ಪ ಮಾತನಾಡುತ್ತಾ ನಶಿಸಿ ಹೋಗುತಿರುವ ಜಾನಪದ ಕಲೆಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಹಾಗೂ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು ಮತ್ತು ವಿಶೇಷವಾಗಿ ಟಮಟೆ ಕಲಾವಿದರ ಬದುಕು ಅತ್ಯಂತ ದುಸ್ಥರದಲ್ಲಿದ್ದು ಯಾವುದೇ ಆರ್ಥಿಕ ಮತ್ತು ಸಾಮಾಜಿಕ ಶೈಕ್ಷಣಿಕ ಭದ್ರತೆಯಿಲ್ಲದೆ ಜೀವನ ನಡೆಸುತ್ತಿದ್ದಾರೆ, ಗ್ರಾಮ ಪಂಚಾಯಿತಿಗೊಂದು ಕಲಾವಿದರ ಸಂಘ ಕಟ್ಟಿ ಹಳ್ಳಿ ಹಳ್ಳಿಯಲ್ಲೂ ಜಾನಪದ ಮತ್ತು ಪೂರ್ವಜರ ಕಲೆಯನ್ನು ಮುಂದಿನ ತಲೆಮಾರಿಗೂ ಪರಿಚಯಿಸಬೇಕಿದೆ ಎಂದು ಹೇಳಿದರು. ಪ್ರದರ್ಶನ

ಮೈಸೂರು ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಆರ್. ಕೆ. ಸ್ವಾಮಿ ರವರು ಹೊಸದಾಗಿ ರಚಿಸಿರುವ ಟ್ರಸ್ಟ್ ನ ಸದಸ್ಯರು ಹಮ್ಮಿಕೊಂಡಿದ್ದ ಜನಪದ ಸಮ್ಮೇಳನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀನಿವಾಸ್ ರವರು ಮಾತನಾಡುತ್ತಾ ನಶಿಸುತ್ತಿರುವ ಜಾನಪದ ಕಲೆಗಳಿಗೆ ಮತ್ತು ಯುವಕರಿಗೆ ಸದಾ ನಮ್ಮ ಪ್ರೋತ್ಸಾಹ ಯಾವಾಗಲೂ ಇರುತ್ತೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ, ಬೀಚನಹಳ್ಳಿ ಗಂಗಾಧರ್, ಮತ್ತು ಕಾರ್ಯಕ್ರಮದ ರುವಾರಿ ಮತ್ತು ಟ್ರಸ್ಟ್‌ ನ ಅಧ್ಯಕ್ಷರಾದ ಎಚ್.ಕೆ. ಚೇತನ್ ಹಾಗೂ ಕಾರ್ಯದರ್ಶಿಗಳಾದ ದರ್ಶನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರುದ್ರೇಶ್ ಮತ್ತು ತಂಡದವರಿಂದ ವೀರಗಾಸೆ, ವೈರಮುಡಿ ಮತ್ತು ತಂಡದವರಿಂದ ತಮಟೆ ವಾದನ, ವಸಂತ್, ಜೀವನ್ ಮತ್ತು ತಂಡದವರಿಂದ ಪೂಜಾ ಕುಣಿತ, ಸಾಕಮ್ಮ ಮತ್ತು ತಂಡದವರಿಂದ ಸೋಬಾನೆ ಹಾಡುಗಳು, ನಾಗಣ್ಣ ಮತ್ತು ತಂಡದವರಿಂದ ಚಿಲಿಪಿಲಿ ಗೊಂಬೆ ಪ್ರದರ್ಶನಗೊಂಡಿತು ಪುಟ್ಟಲಕ್ಷ್ಮಮ್ಮ ರವರು ಜಾನಪದ ಗೀತೆಯನ್ನು ಪ್ರಸ್ತುತಪಡಿಸಿದರು.

ಇದನ್ನೂ ನೋಡಿ: ಶಿಕ್ಷಣ ಇಲ್ಲದ ಪ್ರಜಾಪ್ರಭುತ್ವದಿಂದ ಸಮಾನತೆ ಅಸಾಧ್ಯ: ಕಿರಣ್ ಗಾಜನೂರು Janashakthi Media

Donate Janashakthi Media

Leave a Reply

Your email address will not be published. Required fields are marked *