ದೆಹಲಿಯಿಂದ ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನವು ಆಲಿಕಲ್ಲು ಹೊಡೆತಕ್ಕೆ ಒಳಗಾಗಿ ವಿಮಾನದ ಮುಂಭಾಗ ಹಾನಿಗೊಳಗಾಯಿತು. ಈ ಘಟನೆಯಿಂದಾಗಿ ಪೈಲಟ್ ಎಮರ್ಜೆನ್ಸಿ ಘೋಷಿಸಿದರು. ಆದರೆ, ವಿಮಾನವು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು.
ಇದನ್ನು ಓದಿ :-ಬೆಂಗಳೂರು| ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಭಾರೀ ಮಳೆ: ಐಎಂಡಿ
ಇಂಡಿಗೋ ಏರ್‌ಲೈನ್ಸ್‌ನ 6E 6125 ವಿಮಾನವು ದೆಹಲಿಯಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಹವಾಮಾನ ತೀವ್ರವಾಗಿ ಬದಲಾಗಿದೆ. ವಿಮಾನವು ಜಮ್ಮು-ಕಾಶ್ಮೀರದ ವಾಯುಪ್ರದೇಶದಲ್ಲಿ ಸಾಗುತ್ತಿರುವಾಗ ಭಾರಿ ಮಳೆಯೊಂದಿಗೆ ಆಲಿಕಲ್ಲು ಬಿದ್ದಿದ್ದು, ವಿಮಾನದ ಮುಂಭಾಗದ ಗಾಜು ಮತ್ತು ನಾಕೋನ್ ಭಾಗಕ್ಕೆ ಹಾನಿಯಾಗಿದೆ.
ಇದನ್ನು ಓದಿ :-ಬೆಂಗಳೂರು| ಎಂದಿಗೂ ಕನ್ನಡ ಮಾತನಾಡುವುದಿಲ್ಲ: ಬ್ಯಾಂಕ್ ಬ್ರಾಂಚ್ ಮ್ಯಾನೇಜರ್
ಘಟನೆಯ ತೀವ್ರತೆಯನ್ನು ಗಮನಿಸಿದ ಪೈಲಟ್ ಎಮರ್ಜೆನ್ಸಿ ಘೋಷಿಸಿದರು. ಆದರೆ ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ. ವಿಮಾನವು ಯಶಸ್ವಿಯಾಗಿ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರು ಭದ್ರವಾಗಿದ್ದಾರೆ.