ತುಮಕೂರು: ಶಾಂತಿಯುತ ಪ್ರತಿಭಟನೆ ಮುಗಿಸಿ ವಾಪಸ್ ಆಗುತ್ತಿದ್ದಾಗ ರೈತರ ಮೇಲೆ ಗುಬ್ಬಿ ಶಾಸಕ ಬೆದರಿಕೆ ಹಾಕಿದ್ದಾರೆ. ಇದರಿಂದ ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ಖಂಡಿಸಿದ್ದು, ಸಿಎಂ ಕಚೇರಿಗೆ ಪತ್ರ ಬರೆದಿದ್ದಾರೆ. ತುಮಕೂರು
ಬಗರ್ ಹುಕುಂ ಸಾಗುವಳಿದಾರರ ಪ್ರಶ್ನೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಆಗ್ರಹಿಸಿ, ರೈತರನ್ನು ದಾರಿ ತಪ್ಪಿಸುವ ಗುಬ್ಬಿ ತಹಸಿಲ್ದಾರ್ ಹೇಳಿಕೆ ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿ ಇಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಗುಬ್ಬಿ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಗುಬ್ಬಿ ತಹಸಿಲ್ದಾರ್ ಕಛೇರಿ ಎದುರು ರೈತರು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.
ಇದನ್ನು ಓದಿ :-ಕ್ಷೇತ್ರ ಮರುವಿಂಗಡಣೆ ನ್ಯಾಯಯುತ ಪ್ರಕ್ರಿಯೆಯಾಗಲಿ
ವಾಪಸ್ಸು ಆಗುತ್ತಿದ್ದಾಗ ,ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಕಾಂಗ್ರೆಸ್ ಶಾಸಕರಾದ ಎಸ್ ಆರ್ ಶ್ರೀನಿವಾಸ್ ರವರು ರೈತರು ಮತ್ತು ರೈತ ಮುಖಂಡರ ಮೇಲೆ ದೌರ್ಜನ್ಯದ ಮಾತುಗಳನ್ನಾಡಿ ಪ್ರತಿಭಟನೆ ಮಾಡದಂತೆ ಕ್ರಿಮಿನಲ್ ಬೆದರಿಕೆ ಹಾಕಿದ್ದಾರೆ.
ರೈತ ಸಮುದಾಯಕ್ಕೆ ಅಗೌರವ ತೋರಿಸಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ. ಪ್ರತಿಭಟನೆಗೆ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಮತ್ತು ಸಿಐಟಿಯು ಮುಖಂಡರಾದ ಎನ್ ಕೆ ಸುಬ್ರಮಣ್ಯ ಮುಂತಾದ ಮುಖಂಡರನ್ನು ಹಾಗೂ ರೈತರನ್ನು ಶಾಸಕರು ಬಾಯಿಗೆ ಬಂದಂತೆ ಮಾತನಾಡಿ ಕ್ರಿಮಿನಲ್ ಬೆದರಿಕೆ ಒಡ್ಡಿದ್ದಾರೆ ಮತ್ತು ಪ್ರತಿಭಟನೆ ಮಾಡುವ ನಿಮ್ಮಗಳ ಮೇಲೆ ಕೇಸು ದಾಖಲಿಸುತ್ತೇನೆ ಎಂದು ಗೂಂಡಾವರ್ತನೆ ತೋರಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.
ಇದನ್ನು ಓದಿ :-ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ವಾಮೀಜಿ; ಎಫ್‌ಐಆರ್ ದಾಖಲು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮ್ಮ ಹಕ್ಕುಗಳನ್ನು ಕೇಳಲು ಪ್ರತಿಭಟನೆ ನಡೆಸುತ್ತಿದ್ದರೆ, ಜನಪ್ರತಿನಿಧಿಗಳಾದವರು ಜನರ ಅಹವಾಲುಗಳನ್ನು ಕೇಳುವ ಬದಲು ದರ್ಪ ತೋರುವುದು ಉತ್ತಮ ಬೆಳವಣಿಗೆಯಲ್ಲ. ಕೂಡಲೇ ಶಾಸಕರು ರೈತರ ಕ್ಷಮೆಯಾಚಿಸಬೇಕೆಂದು ಹಾಗೂ ಸಂವಿಧಾನ ಪ್ರತಿ ಹಿಡಿದು ಎಲ್ಲೆಡೆ ಮಾತಾನಾಡುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಶಾಸಕರಿಗೆ ಸೂಕ್ತ ತಿಳುವಳಿಕೆ ನೀಡುವಂತೆ ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ನೀಡಿ : ತುಮಕೂರು | ರೈತರ ಮೇಲೆ ಗುಬ್ಬಿ ಶಾಸಕನ ದರ್ಪ – KPRS ಖಂಡನೆ Janashakthi Media