- 13 ರಾಜ್ಯಗಳಿಂದ ಒಪ್ಪಿಗೆ ಬಿಜೆಪಿಯೇತರ ರಾಜ್ಯಗಳ ವಿರೋಧ
ದೆಹಲಿ: ಜಿಎಸ್ಟಿ ನಿಯಂತ್ರಣ ಕಾನೂನಿನಡಿಯಲ್ಲಿ, ಜಿಎಸ್ಟಿ ಜಾರಿಗೆ ಬಂದ ಜುಲೈ 1, 2017 ರಿಂದ ಮೊದಲ ಐದು ವರ್ಷಗಳಲ್ಲಿ ರಾಜ್ಯಗಳಿಗೆ ಆದಾಯ ನಷ್ಟಕ್ಕೆ ಕೇಂದ್ರದಿಂದ ಪಾವತಿ ಖಾತರಿ ನೀಡಲಾಗಿದೆ. 2022ರವರೆಗೂ ರಾಜ್ಯಗಳು ನಷ್ಟ ಹೊಂದಿದ್ದಲ್ಲಿ ಕೇಂದ್ರ ಅದನ್ನು ತುಂಬಿಕೊಡುವ ಭರವಸೆ ನೀಡಿತ್ತು. ಆದರೆ, ಇದೀಗ ಆ ಪರಿಹಾರದ ಹಣ ನೀಡಲಾಗುವುದಿಲ್ಲ ಬೇಕಿದ್ದರೆ ರಾಜ್ಯಗಳಿಗೆ ಸಾಲ ನೀಡುತ್ತೇವೆ ಎನ್ನುವ ಮೂಲ ಕೇಂದ್ರ ಸರ್ಕಾರ ರಾಜ್ಯಗಳಿಗೆ ಆಘಾತ ನೀಡಿದೆ.
ಕಳೆದ ವಾರ ಜಿಎಸ್ಟಿ ತೆರಿಗೆ ಸಭೆ ನಡೆಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಗಳಿಗೆ ನೀಡಲಾಗುವ ಹೆಚ್ಚುವರಿಯಾಗಿ ನೀಡಲಾಗುತ್ತಿದ್ದ ಜಿಎಸ್ಟಿ ಪರಿಹಾರ ಹಣವನ್ನು ನೀಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಎಲ್ಲಾ ರಾಜ್ಯಗಳಿಗೂ ವಿಶೇಷ ಸಾಲ ಸೌಲಭ್ಯ ನೀಡಲಾಗುವುದು ಎಂದು ಆಯ್ಕೆಯೊಂದನ್ನು ಮುಂದಿಟ್ಟಿದ್ದರು. ಈ ಆಯ್ಕೆಗೆ ಪಶ್ಚಿಮ ಬಂಗಾಳ, ಹರಿಯಾಣ ಸೇರಿದಂರೆ ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಆದರೆ, ಇದೀಗ ಈ ವಿಶೇಷ ಸಾಲವನ್ನು ಪಡೆಯಲು 13 ರಾಜ್ಯಗಳು ಒಪ್ಪಿಗೆ ಸೂಚಿಸಿವೆ ಎನ್ನಲಾಗುತ್ತಿದೆ. ಆಂಧ್ರಪ್ರದೇಶ, ಬಿಹಾರ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮೇಘಾಲಯ, ಸಿಕ್ಕಿಂ, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಒಡಿಶಾ ರಾಜ್ಯಗಳು ಕೇಂದ್ರ ಸರ್ಕಾರದ ಸಾಲ ಪಡೆಯುವಿಕೆಯ 1ನೇ ಆಯ್ಕೆಯ ಪ್ರಸ್ತಾವವನ್ನು ಒಪ್ಪೊಕೊಂಡಿವೆ. ಆದರೆ ಮಣಿಪುರ ಮಾತ್ರ ಆಯ್ಕೆ 2 ಅನ್ನು ಆರಿಸಿದೆ ಎಂಬ ಮಾಹಿತಿಗಳು ದೊರೆತಿವೆ.
ಇದನ್ನೂ ಓದಿ: ನಿಮ್ಮ ಅಸಮರ್ಥತೆಗೆ “ದೈವಿಕ ಮಧ್ಯಪ್ರವೇಶ”ವನ್ನು ದೂಷಿಸಬೇಡಿ
ಗೋವಾ, ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಹಿಮಾಚಲ ಪ್ರದೇಶ – ಒಂದು ಅಥವಾ ಎರಡು ದಿನಗಳಲ್ಲಿ ತಮ್ಮ ಆಯ್ಕೆಯನ್ನು ನೀಡಲಿವೆ ಎಂಬುದನ್ನು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ಈ 19 ರಾಜ್ಯಗಳನ್ನು ಹೊರತುಪಡಿಸಿ ಪಶ್ಚಿಮ ಬಂಗಾಳ ಸೇರಿದಂತೆ ಉಳಿದ ರಾಜ್ಯಗಳ ಆಯ್ಕೆ ಏನು? ಎಂಬುದು ಈ ವರೆಗೆ ತಿಳಿದುಬಂದಿಲ್ಲ.
ಇದನ್ನೂ ಓದಿ: ಜಿಎಸ್ಟಿ ಹಣ ಬಿಡುಗಡೆ ಮಾಡದೇ ಸಾಲಕ್ಕೆ ಸೂಚನೆ” ಗಣರಾಜ್ಯ ವ್ಯವಸ್ಥೆಗೆ ಧಕ್ಕೆ- ಸುದರ್ಶನ್ ಟೀಕೆ
ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಕೇಂದ್ರ ಸರ್ಕಾರ ಒಟ್ಟು 3 ಲಕ್ಷ ಕೋಟಿ ರೂಗಳ ನಷ್ಟವನ್ನು ಎದುರಿಸುತ್ತಿದೆ. ಕೇವಲ 65,000 ಕೋಟಿ ಸೆಸ್ ಸಂಗ್ರಹವಾಗುವ ನಿರೀಕ್ಷೆಯಿದ್ದು ಉಳಿದ 2.35 ಲಕ್ಷ ಕೋಟಿ ಕೊರತೆ ಬೀಳಲಿದೆ. ಹಾಗಾಗಿ ಮೊದಲ ಆಯ್ಕೆಯಾಗಿ ಆರ್‌ಬಿಐನಿಂದ 97,000 ಕೋಟಿ ರೂ. ಸಾಲ ಪಡೆಯಬಹುದು ಮತ್ತು ಎರಡನೇ ಆಯ್ಕೆಯಾಗಿ ಹೊರಗಿನಿಂದ 2.35 ಲಕ್ಷ ಕೋಟಿ ಸಾಲ ಪಡೆಯಬಹುದೆಂಬ ಮತ್ತು ಅದನ್ನು 2022ರ ನಂತರ ಕೇಂದ್ರ ಭಾಗಶಃ ತೀರಿಸುತ್ತದೆ ಎಂಬ ಎರಡು ಆಯ್ಕೆಗಳನ್ನು ಕೇಂದ್ರವು ರಾಜ್ಯಗಳ ಮುಂದಿಟ್ಟಿದೆ.
ಆರ್‌ಬಿಐ ನಿಂದ ಸಾಲ ಪಡೆದರೆ ಅಸಲು ಬಡ್ಡಿ ಎರಡನ್ನು ಕೇಂದ್ರ ತೀರಿಸಲಿದೆ. ಒಂದು ವೇಳೆ ಹೊರಗಿನಿಂದ 2.35 ಲಕ್ಷ ಸಾಲ ಪಡೆದರೆ ಕೇಂದ್ರ ಅಸಲನ್ನು ಮಾತ್ರ ತೀರಿಸುವುದಾಗಿಯೂ, ರಾಜ್ಯಗಳು ಬಡ್ಡಿ ಭರಸಬೇಕೆಂದು ಕೇಂದ್ರ ಹೇಳಿದೆ. ಕೆಲವು ರಾಜ್ಯಗಳು ತಮ್ಮ ಅಭಿಪ್ರಾಯಗಳನ್ನು ಜಿಎಸ್‌ಟಿ ಕೌನ್ಸಿಲ್ ಅಧ್ಯಕ್ಷರಿಗೆ ಸಲ್ಲಿಸಿದ್ದು, ಆಯ್ಕೆಗಳ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಆಗಸ್ಟ್ 27 ರಂದು ನಡೆದ ಸಭೆಯಲ್ಲಿ ಜಿಎಸ್‌ಟಿ ಕೌನ್ಸಿಲ್ ಈ ಎರಡು ಆಯ್ಕೆಗಳನ್ನು ನಿರ್ಧರಿಸಿತ್ತು.
ಇದನ್ನೂ ಓದಿ: ಕೊರೊನಾ ದೇವರ ಆಟ; ಹೆಚ್ಚಿನ ಜಿಎಸ್ಟಿ ಪರಿಹಾರ ಕೊಡಲ್ಲ: ಕೇಂದ್ರ

ಆದರೆ, ಕೇಂದ್ರದ ಈ ಎರಡೂ ಆಯ್ಕೆಗಳನ್ನು ಬಿಜೆಪಿಯೇತರ ರಾಜ್ಯಗಳು ವಿರೋಧಿಸಿವೆ. ಕಾನೂನುಬದ್ಧವಾಗಿ ನ್ಯಾಯಯುತವಾಗಿ ನಮ್ಮ ಪಾಲಿನ ತೆರಿಗೆ ಹಣ ನೀಡಿ ಎಂದು ಪಟ್ಟು ಹಿಡಿದಿವೆ. ಕೇರಳವಂತು ಕೇಂದ್ರ ಹಣ ನೀಡದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದೆ.
ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜಿಎಸ್‌ಟಿ ಪರಿಹಾರದ ಕೊರತೆಯನ್ನು ಪೂರೈಸಲು ಕೇಂದ್ರವು ಸಾಲ ಪಡೆಯಬೇಕು ಎಂದು ಸಲಹೆ ನೀಡಿದ್ದರು.
ಈ ಕುರಿತು ಪಿಣರಾಯಿ ವಿಜಯನ್, “ರಾಜ್ಯಗಳಿಗೆ ನೀಡಬೇಕಾದ ಜಿಎಸ್‌ಟಿ ಪರಿಹಾರ ಮೊತ್ತವನ್ನು ನೀಡಿ. ರಾಜ್ಯಗಳಿಗೆ ಎದುರಾಗಿರುವ ತೊಂದರೆಯನ್ನು ನೀಗಿಸಲು ಸಹಕಾರಿಯಾಗಬೇಕೆಂದು, ಮತ್ತು ರಾಜ್ಯಗಳ ಪರಿಸ್ಥಿತಿಯನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಈ ಪತ್ರ ಬರೆದಿದ್ದೇನೆ” ಎಂದು ಟ್ವೀಟ್ ಮಾಡಿದ್ದರು.ಜಿಎಸ್‌ಟಿ ಪರಿಹಾರ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಈಗಾಗಲೇ ಹಲವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಜಾರ್ಖಂಡ್ ಸಿಎಂ ಕೂಡ ಅವರ ಸಾಲಿಗೆ ಸೇರಿದ್ದಾರೆ. “ಕೇಂದ್ರ ಸರ್ಕಾರವು ರಾಜ್ಯಗಳನ್ನು ಬಂಜರುಗೊಳಿಸಿದೆ ಎಂದು ತಮ್ಮ ಪತ್ರದಲ್ಲಿ ಸೊರೆನ್ ತಿಳಿಸಿದ್ದರು. ಕೇಂದ್ರ ಸಂಸತ್ತಿನಲ್ಲಿ ನಡೆದ ಎಲ್ಲಾ ಕೌನ್ಸಿಲ್ ಸಭೆಗಳಲ್ಲೂ ರಾಜ್ಯಗಳಿಗೆ ದ್ರೋಹವಾಗಿದೆ ಎಂದು ಕಿಡಿಕಾರಿ, ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವಕ್ಕೆ ವಿರುದ್ಧವಾಗಿ ನಡೆಯುವ ಕೇಂದ್ರ ಸರ್ಕಾರದ ನಡೆ ದೇಶದ ಸಾರ್ವಭೌಮಕ್ಕೆ ದಕ್ಕೆ ತರುತ್ತದೆ” ಎಂದು ಅಭಿಪ್ರಾಯಪಟ್ಟಿದ್ದರು.
ತಮ್ಮ ಹಕ್ಕುಗಳಿಗಾಗಿ, ಕೇಂದ್ರದಿಂದ ಬರಬೇಕಾದ ಬಿಎಸ್‌ಟಿ ಪರಿಹಾರಕ್ಕಾಗಿ ಬಿಜೆಪಿಯೇತರ ಸರ್ಕಾರಗಳು ಪ್ರಧಾನಿಗೆ ಪತ್ರ ಬರೆದು ಪರಿಹಾರ ಕೇಳುತ್ತಿದ್ದಾರೆ. ಆದರೆ ಬಿಜೆಪಿ ಆಡಳಿತವಿರುವ ಕರ್ನಾಟಕ ಸರ್ಕಾರ ಮಾತ್ರ ಕೇಂದ್ರ ನೀಡಿದ ಮೊದಲ ಆಯ್ಕೆ ತೆಗೆದುಕೊಂಡಿದ್ದು, ಸಾಲ ಪಡೆಯಲು ಸಿದ್ಧವಾಗಿದೆ.
ಜಿಎಸ್‌ಟಿ ನಿಯಂತ್ರಣ ಕಾನೂನಿನಡಿಯಲ್ಲಿ, ಜಿಎಸ್ಟಿ ಜಾರಿಗೆ ಬಂದ ಜುಲೈ 1, 2017 ರಿಂದ ಮೊದಲ ಐದು ವರ್ಷಗಳಲ್ಲಿ ರಾಜ್ಯಗಳಿಗೆ ಆದಾಯ ನಷ್ಟಕ್ಕೆ ಕೇಂದ್ರದಿಂದ ಪಾವತಿ ಖಾತರಿ ನೀಡಲಾಗಿದೆ. 2022ರವರೆಗೂ ರಾಜ್ಯಗಳು ನಷ್ಟ ಹೊಂದಿದ್ದಲ್ಲಿ ಕೇಂದ್ರ ಅದನ್ನು ತುಂಬಿಕೊಡುವ ಭರವಸೆ ನೀಡಿತ್ತು. ಆದರೆ, ಇದೀಗ ಆ ಪರಿಹಾರದ ಹಣ ನೀಡಲಾಗುವುದಿಲ್ಲ ಬೇಕಿದ್ದರೆ ರಾಜ್ಯಗಳಿಗೆ ಸಾಲ ನೀಡುತ್ತೇವೆ ಎನ್ನುವ ಮೂಲ ಕೇಂದ್ರ ಸರ್ಕಾರ ರಾಜ್ಯಗಳಿಗೆ ಆಘಾತ ನೀಡಿದೆ.