ಜಿಎಸ್ ಟಿ ಮಂಡಳಿ ರೂಪಿಸುವ ಶಿಫಾರಸುಗಳನ್ನು ಕಡ್ಡಾಯವಾಗಿ ಪಾಲಿಬೇಕಾಗಿಲ್ಲ: ಸುಪ್ರಿಂ ಕೋರ್ಟ್

ನವದೆಹಲಿ : ತೆರಿಗೆ ವಿಧಿಸುವ ವಿಚಾರದಲ್ಲಿ ಶಾಸನ ರೂಪಿಸುವ ಸಮಾನ ಅಧಿಕಾರವು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಕ್ಕೆ ಇದೆ. ಹೀಗಾಗಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಮಾಡುವ ಶಿಫಾರಸುಗಳು ಅವುಗಳ ಪಾಲಿಗೆ ಕಡ್ಡಾಯವಾಗಿ ಪಾಲಿಸಬೇಕಾದವು ಅಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಸಂವಿಧಾನ ತಿದ್ದುಪಡಿ ಕಾಯ್ದೆಯ  ಪ್ರಕಾರ 2016 ಬಳಿಕ ಸೇರಿಸಲಾದ 246(ಎ) ವಿಧಿಯು ಜಿಎಸ್ ಟಿ ಸಲುವಾಗಿ ಕಾನೂನು ರೂಪಿಸುವ ಅಧಿಕಾರವನ್ನು ಸಂಸತ್ತಿಗೂ ರಾಜ್ಯ ಶಾಸನ ಸಭೆಗಳಿಗು ಒಟ್ಟೊಟ್ಟಿಗೆ  ನೀಡಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.

ಕೇಂದ್ರ ಮತ್ತು ರಾಜ್ಯ ಒಟ್ಟಾಗಿ ನಡೆಸುವ ಮಾತುಕತೆಯನ್ನ ಧರಿಸಿ ಜಿಎಸ್ ಟಿ ಮಂಡಳಿ ಶಿಫಾರಸ್ಸನ್ನು ರೂಪಿಸುತ್ತದೆ.ಪಾಲಿಸಲೇ ಬೇಕು ಎನ್ನುವ ಶಿಫಾರಸ್ಸುಗಳು ಒಕ್ಕೂಟದ ವ್ಯವಸ್ಥೆಯನ್ನು ಹಾಳು ಮಾಡುತ್ತವೆ. ಜಿಎಸ್ ಟಿ ಮುಖಾಂತರ ಶಾಸನ ತರುವ ಸಮಾನ ಅಧಿಕಾರವು ಈ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೂ ಇದೆ. ಎಂದು ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ವಿಕ್ರಮ್ ನಾಥ್ ಪೀಠದಲ್ಲಿದ್ದರು.

ಭಾರತವು ಬಹುಪಕ್ಷಗಳ ವ್ಯವಸ್ಥೆಯನ್ನು ಹೊಂದಿದೆ.ಕೇಂದ್ರದಲ್ಲಿ ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿರಬಹುದು ಅಥವಾ ಇಲ್ಲದೆಯು ಇರಬಹುದು ರಾಜ್ಯಗಳಿಗಿರುವ ಅಧಿಕಾರ ಕಡಿಮೆಯಾದರು ಕೇಂದ್ರದ ಅಪ್ಪಣೆಗಳಿಗೆ ಅವು ಸಂವಿಧಾನ ವ್ಯಾಪ್ತಿಯಲ್ಲಿ ರಾಜಕೀಯ ಮಾರ್ಗಗಳ ಮೂಲಕ ಪ್ರತಿರೋಧ ಒಡ್ಡಬಹುದೆಂದು ಕೋರ್ಟ್ ಹೇಳಿದೆ.

ಜಿಎಸ್ ಟಿ  ಮಂಡಳಿಯು ತೀರ್ಮಾನ ಕೈಗೊಳ್ಳುವ ಪ್ರಾಧಿಕಾರ ಆಗಿದಿದ್ದರೆ ಅದರ ಶಿಫಾರಸಗಳು ಶಾಸನಗಳಾಗಬೇಕು ಎಂಬುದಾಗಿದಿದ್ದರೆ ಅಂತಹ ಅಂಶವು ಸಂವಿಧಾನದ246 (ಎ),279(ಎ) ವಿಧಿಗಳಲ್ಲಿ ಅಡಕವಾಗಿರುತ್ತಿತ್ತು ಎಂದು ನ್ಯಾಯಮೂರ್ತಿಚಂದ್ರಚೂಡ್  153 ಪುಟಗಳ ತೀರ್ಪನ್ನು ನ್ಯಾಯ ಪೀಠದ ಪರವಾಗಿ ಬರೆದಿದ್ದಾರೆ.

ಜಿಎಸ್‌ಟಿ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಸ್ವಾಗತಿಸಿವೆ. ‘ಸುಪ್ರೀಂ ಕೋರ್ಟ್‌ ತೀರ್ಪು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಹಕ್ಕನ್ನು ಎತ್ತಿಹಿಡಿದಿದೆ’ ಎಂದು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್‌ ತ್ಯಾಗರಾಜನ್‌ ಗುರುವಾರ ಅಭಿಪ್ರಾಯಪಟ್ಟಿದ್ದಾರೆ. ‘ಜಿಎಸ್‌ಟಿ ಮಂಡಳಿಯ ಕೆಲಸ ಕೇವಲ ಶಿಫಾರಸು ಮಾಡುವುದು. ಅದು ತನ್ನ ನಿರ್ಧಾರಗಳನ್ನು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳ ಮೇಲೆ ಹೇರುವಂತಿಲ್ಲ. ಈ ಅಂಶವನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಜಿಎಸ್‌ಟಿ ಮಂಡಳಿಗಿರುವ ಅಧಿಕಾರ ಮತ್ತು ಸರ್ಕಾರಗಳ ತೆರಿಗೆ ಹಕ್ಕುಗಳ ಕುರಿತು ನಮಗೆ ಮೊದಲೇ ತಿಳಿದಿತ್ತು. ಅದನ್ನೇ ಸುಪ್ರೀಂ ಕೋರ್ಟ್‌ ಪ್ರಮಾಣೀಕರಿಸಿದೆ’ ಎಂದು ಹೇಳಿದ್ದಾರೆ. ರಾಜ್ಯಗಳು ಮತ್ತು ಜನರ ಒಕ್ಕೂಟ ಹಕ್ಕುಗಳನ್ನು ಈ ತೀರ್ಪು ಎತ್ತಿ ಹಿಡಿದಿದೆ ಎಂದು ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್‌ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *