ನವದೆಹಲಿ: ಕೋವಿಡ್-19 ರೋಗವನ್ನು ತಡೆಗಟ್ಟಲು ಬಳಸಲಾಗುವ ಕೆಲವು ಔಷಧಿಗಳು ಮತ್ತು ಕೆಲವು ಆಸ್ಪತ್ರೆ ಉಪಕರಣಗಳು, ಇತರ ವಸ್ತುಗಳ ಅಗತ್ಯ ಸಾಮಗ್ರಿಗಳ ಮೇಲಿನ ಜಿಎಸ್‌ಟಿ ದರವನ್ನು ಶೇಕಡಾ 18 ರಿಂದ ಶೇ 12 ಕ್ಕೆ ಇಳಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಇಂದು ನಡೆದ ಸರಕು ಹಾಗೂ ಸೇವಾ ತೆರಿಗೆ(ಜಿಎಸ್‌ಟಿ) ಮಂಡಳಿ ಸಭೆಯ ಬಳಿ ಮಾಹಿತಿಯನ್ನು ನೀಡಿದ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ -19 ಚಿಕಿತ್ಸೆಗೆ ಬಳಸುವ ಔಷಧಿಗಳಾದ ರೆಮ್ಡಿಸಿವಿರ್, ಆಮ್ಲಜನಕ ಸಾಂದ್ರಕಗಳು ಮತ್ತು ವೈದ್ಯಕೀಯ ದರ್ಜೆಯ ಆಮ್ಲಜನಕದಂತಹ ಉಪಕರಣಗಳ ಮೇಲಿನ ತೆರಿಗೆ ದರವನ್ನು ಜಿಎಸ್‌ಟಿ ಕೌನ್ಸಿಲ್ ದರ ಕಡಿತಗೊಳಿಸಿದೆ.
ಇದನ್ನು ಓದಿ: ನೆಗೆಟಿವ್ ಜಿಡಿಪಿ, ‘ತರ್ಕಹೀನ’ ಎಂಬ ಲಸಿಕೆ ತರಾಟೆ ಮತ್ತು ಗೃಹಮಂತ್ರಿಗಳ ‘ಜಯಭೇರಿ’ ತಮಾಷೆ
ಕೋವಿಡ್ ಲಸಿಕೆಗಳ ಮೇಲಿನ ಶೇಕಡಾ 5ರಷ್ಟು ತೆರಿಗೆ ದರ ಮುಂದುವರಿಸಲು ಸಭೆಯು ನಿರ್ಧರಿಸಿದೆ. ಕೋವಿಡ್ ಲಸಿಕೆಗಳನ್ನು ಸರಕಾರವೇ ಖರೀದಿಸುವುದರಿಂದ ಲಸಿಕೆ ಮೇಲಿನ ಜಿಎಸ್ಟಿಯಿಂದ ಜನರಿಗೆ ಹೊರೆಯಾಗುವುದಿಲ್ಲ ಎಂದು ಹೇಳಿದರು. ಕೋವಿಡ್ ಪರೀಕ್ಷಾ ಕಿಟ್‌ಗಳ ಮೇಲೆ ವಿಧಿಸಲಾಗುತ್ತಿರುವ ಶೇಕಡಾ 12ರಷ್ಟು ತೆರಿಗೆಯನ್ನು ಶೇಕಡಾ 5 ಕ್ಕೆ ಇಳಿಸಲಾಗಿದೆ.
ಶಿಲೀಂಧ್ರ ರೋಗವಾದ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಟೊಸಿಲಿಜುಮಬ್ ಮತ್ತು ಆಂಫೊಟೆರಿಸಿನ್ ಬಿ ಮೇಲಿನ ಶೇಕಡಾ 5 ರಷ್ಟಿದ್ದ ಜಿಎಸ್‌ಟಿಯನ್ನು ಸಂಪೂರ್ಣ ತೆಗೆದುಹಾಕಲಾಗಿದೆ.
ಇದನ್ನು ಓದಿ: ದರ ಏರಿಕೆಯ ಶಾಕ್ ಮೇಲೆ ಶಾಕ್! ರಾಜ್ಯ ಸರಕಾರದಿಂದ ಕರೆಂಟ್ ಶಾಕ್
ರೆಮ್ಡಿಸಿವಿರ್ ಮತ್ತು ಹೆಪಾರಿನ್‌ನಂತಹ ಔಷಧಿಗಳು, ವೈದ್ಯಕೀಯ ದರ್ಜೆಯ ಆಮ್ಲಜನಕ, ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್‌ಗಳು, ಬೈಪಾಪ್(BIPAP) ಯಂತ್ರಗಳ ಮೇಲಿನ ತೆರಿಗೆಯನ್ನು ಶೇಕಡಾ 12 ರಿಂದ 5 ಕ್ಕೆ ಕಡಿತಗೊಳಿಸಲಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಪಲ್ಸ್ ಆಕ್ಸಿಮೀಟರ್, ಹ್ಯಾಂಡ್ ಸ್ಯಾನಿಟೈಸರ್, ತಾಪಮಾನ ತಪಾಸಣೆ ಉಪಕರಣಗಳು ಮತ್ತು ಆಂಬುಲೆನ್ಸ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 5ರಷ್ಟು ಇಳಿಸಲಾಗಿದೆ ಎಂದು ಸಚಿವರು ತಿಳಿಸಿದರು. ಶೇಕಡಾ 28ರಷ್ಟಿದ್ದ ಅಂಬುಲೆನ್ಸ್ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಶೇಕಡಾ 12ಕ್ಕೆ ಇಳಿಸಲಾಗಿದೆ.
ಜಿಎಸ್‌ಟಿ ಮಂಡಳಿ ಕೈಗೊಂಡ ನಿರ್ಧಾರ ತಕ್ಷಣವೇ ಜಾರಿಗೊಳ್ಳಲಿದೆ ಮತ್ತು ಸೆಪ್ಟೆಂಬರ್‌ವರೆಗೆ ಈ ಹೊಸ ತೆರಿಗೆ ದರ ಜಾಲ್ತಿಯಲ್ಲಿರಲಿದೆ ಎಂದು ಸಿರ್ಮಲಾ ಸೀತಾರಾಮನ್ ಹೇಳಿದ್ದಾರೆ.