ಸರ್ಕಾರ ಬೆಳೆ ನಷ್ಟ ಪರಿಹಾರವನ್ನು 3 ಪಟ್ಟು ಹೆಚ್ಚಿಸಬೇಕು: ಆರ್‌. ಅಶೋಕ್‌

ಬೆಳಗಾವಿ: ಬರದಿಂದ ತತ್ತರಿಸಿರುವ ರೈತರಿಗೆ ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟವಾಗಿದೆ. ಹೀಗಾಗಿ ಸರ್ಕಾರ ಬೆಳೆ ನಷ್ಟ ಪರಿಹಾರವನ್ನು ಮೂರು ಪಟ್ಟು ಹೆಚ್ಚಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಂಗಳವಾರ ಒತ್ತಾಯಿಸಿದರು. ಬೆಳೆ 

ಅಧಿವೇಶನದಲ್ಲಿ ಮಾತನಾಡಿದ ಆರ್. ಅಶೋಕ ರಾಜ್ಯದಲ್ಲಿ ಆವರಿಸಿರುವ ಬರ ಕುರಿತು ಅಲ್ಪಾವಧಿ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಬರ ಪರಿಹಾರಕ್ಕಾಗಿ ಈವರೆಗೆ ಸರ್ಕಾರ ಏನೂ ಮಾಡಿಲ್ಲ. ಅಧಿವೇಶನದಲ್ಲಿ ಪ್ರತಿಪಕ್ಷ ಪ್ರಶ್ನೆ ಮಾಡುತ್ತದೆ ಎಂಬ ಕಾರಣಕ್ಕೆ ರೈತರಿಗೆ 2 ಸಾವಿರ ರೂ. ಪರಿಹಾರ ವಿತರಿಸುವುದಾಗಿ ಘೋಷಣೆ ಮಾಡಲಾಗಿದೆ. ಆದರೆ ಅದು ಘೋಷಣೆಯಾಗಷ್ಟೇ ಉಳಿದಿದೆ. ಈವರೆಗೆ ಒಂದು ಪೈಸೆಯೂ ಡಿಬಿಟಿ ಮೂಲಕ ಸಂದಾಯವಾಗಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಒಂದು ಎಕರೆ, ಎರಡು ಎಕರೆ ಇರುವವರಿಗೆ 500-600 ರೂ. ನೀಡಲಾಗುತ್ತದೆ ಎಂದು ಹೇಳುತ್ತಾರೆ. ಹೀಗಾದರೆ ರೈತರನ್ನು ನೀವು ಯಾವ ದೃಷ್ಟಿಯಲ್ಲಿ ಕಾಣುತ್ತೀರಾ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Belagavi Winter Session| ವೇತನ ಆಯೋಗದ ವರದಿ ಬಗ್ಗೆ ಅತೃಪ್ತಿ; ಸಭಾತ್ಯಾಗ ಮಾಡಿದ ಕಮಲ, ದಳ ಸದಸ್ಯರು

ಸರ್ಕಾರ ಬಳಿ ಹಣ ಇಲ್ಲ ಅಂತೇನೂ ಇಲ್ಲ. ತೆಲಂಗಾಣದಲ್ಲಿ ಇಲ್ಲಿನ ಯೋಜನೆಗಳ ಜಾಹೀರಾತು ನೀಡಿದ್ದೀರಿ. ಅದಕ್ಕಾಗಿ 7-8 ಕೋಟಿ ರೂ. ಖರ್ಚಾಗಿರಬಹುದು. ತೆಲಂಗಾಣದಲ್ಲೇನು 2 ಸಾವಿರ ರೂ. ಕೊಡುತ್ತಿಲ್ಲ ಎಂದರು. ಅಲ್ಲಿ ನಮ್ಮ ಬಸ್ ಫ್ರೀ ಕೂಡ ಇಲ್ಲ. ಅಲ್ಲಿ ಜಾಹೀರಾತು ಕೊಟ್ಟಿದ್ದು ಕರ್ನಾಟಕದ ತೆರಿಗೆ ಹಣ. ಬರ ಬಂದಿರುವ ಸಂದರ್ಭದಲ್ಲಿ ಒಂದೊಂದು ಪೈಸೆಯೂ ಮುಖ್ಯವಾಗುತ್ತದೆ. ಅಂದು ಕಾಕಾ ಪಾಟೀಲಂಗೂ ಫ್ರೀ, ಮಹದೇವಪ್ಪಂಗೂ ಫ್ರೀ ಎಂದಿರಿ. ಫ್ರೀಯಾಗೇ ಕೊಡಿ. ನಮ್ಮದೇನು ಆಕ್ಷೇಪಣೆ ಇಲ್ಲ. ಆದರೆ ರೈತರು ಸಂಕಷ್ಟದಲ್ಲಿ ಇರುವಾಗ ಅವರಿಗೆ ಏಕೆ ನೆರವು ನೀಡಿಲ್ಲ ಎಂಬುದು ನಮ್ಮ ಪ್ರಶ್ನೆ ಎಂದು ಅಶೋಕ್‌ ಪ್ರಶ್ನಿಸಿದರು.

ಬರ ಮತ್ತು ಪ್ರವಾಹದ ಸಂದರ್ಭದಲ್ಲಿ ನಮ್ಮ ಸರ್ಕಾರ ಇದ್ದಾರ, ಕೇಂದ್ರದ ನೆರವಿಗೂ ಕಾಯದೇ ರೈತರಿಗೆ ಎರಡು ಪಟ್ಟು ಪರಿಹಾರ, ಪ್ರವಾಹದಲ್ಲಿ ಮನೆಗಳು ಕೊಚ್ಚಿ ಹೋದಾಗ ಎನ್‌ಡಿಆರ್‌ಎಫ್‌ ನಿಯಮಕ್ಕಿಂತ ಹೆಚ್ಚು ಮೊತ್ತವನ್ನು ಮನೆಗಳ ನಿರ್ಮಾಣಕ್ಕೆ ನೀಡಿದೆವು. 14ಬಾರಿ ಬಜೆಟ್‌ ಮಂಡಿಸಿರುವುದಾಗಿ ಹೇಳಿಕೊಳ್ಳುವ ನೀವು ಒಂದು ಪೈಸೆ ಬಿಡುಗಡೆ ಮಾಡದೇ ಏಕೆ ನಿರ್ಲಕ್ಷಿಸಿದ್ದೀರಿ ಎಂದು ಪ್ರಶ್ನಿಸಿದರು.

ವಿಡಿಯೋ ನೋಡಿ: ಭಾರತವು ಪ್ಯಾಲೆಸ್ತೀನ್ ಪರ ನಿಲ್ಲಬೇಕು : ಸದಾಗ್ರಹದ ಸಭೆ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *