ಒಳ ಮೀಸಲಾತಿ ವಿಧೇಯಕ 2025ಕ್ಕೆ ಅಂಕಿತ ಹಾಕಿದ ರಾಜ್ಯಪಾಲರು

ಬೆಂಗಳೂರು: ದಲಿತ ಸಮುದಾಯದ ಸಚಿವರು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್‌ರನ್ನು ಭೇಟಿ ಮಾಡಿದ ಬೆನ್ನಲೇ , ಫೆಬ್ರವರಿ 26ರಂದು ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಪರಿಶಿಷ್ಟ ಜಾತಿಗಳ(ಒಳ ಮೀಸಲಾತಿ) ವಿಧೇಯಕ 2025ಕ್ಕೆ ಸಹಿ ಹಾಕಿದ್ದಾರೆ. ವಿಧೇಯಕ

ಒಳ ಮೀಸಲಾತಿ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದರಿಂದ ರಾಜ್ಯಪಾಲರು ಈ ಮಸೂದೆಗೆ ಸಹಿ ಹಾಕದೆ ಪೆಂಡಿಂಗ್ ಇಟ್ಟಿದ್ದರು. ಆದರೆ ದಲಿತ ಸಚಿವರ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿಯಾಗಿ ಒಳ ಮೀಸಲಾತಿ ಮಸೂದೆಗೆ ಅಂಕಿತ ಹಾಕುವಂತೆ ಮನವಿ ಮಾಡಿತ್ತು.

ಇದನ್ನೂ ಓದಿ: ವಸಾಹತುಶಾಹಿ ಯುಗವನ್ನು ನೆನಪಿಸುವ ಅಸಮಾನ ಒಪ್ಪಂದ

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಪ್ರಸ್ತಾಪಿಸಿ, ಒಳ ಮೀಸಲಾತಿ ಗೊಂದಲದಿಂದ ನೇಮಕಾತಿ ವಿಳಂಬವಾಗುತ್ತಿದೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ವೇಳೆ ಅಂಕಿತ ಹಾಕುವುದಾಗಿ ಸಚಿವರ ನಿಯೋಗಕ್ಕೆ ರಾಜ್ಯಪಾಲರು ಭರವಸೆ ನೀಡಿದ್ದರು. ಇದೀಗ ಎಸ್ಸಿ ಒಳ ಮೀಸಲಾತಿ ಮಸೂದೆ ರಾಜ್ಯಪಾಲರು ಸಹಿ ಹಾಕಿದ್ದಾರೆ.

ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ 5 ವಿಂಗಡಣೆ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರ, 3 ಗುಂಪುಗಳಾಗಿ ವರ್ಗೀಕರಣ ಮಾಡಿದೆ. 18 ಜಾತಿಗಳಿರುವ ಎಡಗೈ ಸಮುದಾಯಕ್ಕೆ (SC Left) ಶೇ. 6 ರಷ್ಟು ಮೀಸಲಾತಿ ಹಾಗೂ 20 ಜಾತಿಗಳಿರುವ ಬಲಗೈ ಸಮುದಾಯಕ್ಕೆ (SC Right) ಶೇ. 6 ರಷ್ಟು ಮೀಸಲಾತಿ. ಇನ್ನು 63 ಜಾತಿಗಳಿರುವ ಇತರ ಸಮುದಾಯಕ್ಕೆ ಶೇ. 5 ಮೀಸಲಾತಿ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಇದನ್ನೂ ನೋಡಿ: “ಯು.ಎಸ್. ಸಾಮ್ರಾಜ್ಯಶಾಹಿ: ಓದುಗರ ಅಲೆ ಎಬ್ಬಿಸಿದ ಪುಸ್ತಕ” Janashakthi Media

Donate Janashakthi Media

Leave a Reply

Your email address will not be published. Required fields are marked *