ತಿರುವನಂತಪುರಂ: ಶಾಸಕಾಂಗವು ಅಂಗೀಕರಿಸಿದ ಮಹತ್ವದ ಮಸೂದೆಗಳನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಗೆ ತಡೆಹಿಡಿದಿದ್ದಾರೆ ಎಂಬ ಕೇರಳ ಸರ್ಕಾರದ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲು ಒಂದು ದಿನ ಮುಂಚಿತವಾಗಿ, ರಾಜ್ಯಪಾಲರು ನವೆಂಬರ್ 28 ಮಂಗಳವಾರ ಏಳು ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದ್ದಾರೆ. ಅವರು ಈಗಾಗಲೆ ಒಂದು ಮಸೂದೆಗೆ ಹಸಿರು ನಿಶಾನೆ ತೋರಿದ್ದಾರೆ.
ನಿಯಮಗಳ ಪ್ರಕಾರ, ಶಾಸಕಾಂಗವು ಮಸೂದೆಯನ್ನು ಅಂಗೀಕರಿಸಿದ ನಂತರ ರಾಜ್ಯಪಾಲರು ಸರ್ಕಾರದಿಂದ ಮಸೂದೆಯನ್ನು ಸ್ವೀಕರಿಸಿದ ನಂತರ ಒಪ್ಪಿಗೆ ನೀಡಬಹುದು. ಅಥವಾ ಅದನ್ನು ಸರ್ಕಾರಕ್ಕೆ ಹಿಂತಿರುಗಿಸಬಹುದು ಅಥವಾ ರಾಷ್ಟ್ರಪತಿಗಳಿಗೆ ಕಳುಹಿಸಬಹುದಾಗಿದೆ. ಕೇರಳ
ಇದನ್ನೂ ಓದಿ: ತೆಲಂಗಾಣ | ಮುಸ್ಲಿಂ ಯುವಕರಿಗೆ ಐಟಿ ಪಾರ್ಕ್ – ಕೆಸಿಆರ್ ಭರವಸೆ
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಳೆದ ತಿಂಗಳು ರಾಜ್ಯಪಾಲರು ಹಲವು ವಿಧೇಯಕಗಳನ್ನು ತಡೆಹಿಡಿದಿದ್ದರ ವಿರುದ್ಧ ಸುಪ್ರೀಂಕೋರ್ಟ್‌ಗೆ ತೆರಳಿದ್ದರು. ರಾಜ್ಯಪಾಲ ತಡೆಹಿಡಿದ ಕೆಲವು ಮಸೂದೆಗಳು ಒಂದು ವರ್ಷ ಹಳೆಯದಾಗಿದೆ. ಹೀಗಾಗಿ ಕಾನೂನಿನ ಆಶ್ರಯವನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ಸೂಚಿಸಿದ್ದ ಮುಖ್ಯಮಂತ್ರಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ನಿರ್ಧರಿಸಿದ್ದರು. ಕೇರಳ
ಮಸೂದೆ ತಡೆ ಹಿಡಿದ ವಿಚಾರವಾಗಿ ಅಲ್ಲಿಸಿದ ಅರ್ಜಿಯ ಪ್ರಾಥಮಿಕ ವಿಚಾರಣೆಯನ್ನು ಈ ತಿಂಗಳ ಆರಂಭದಲ್ಲಿ ಮಾಡಲಾಗಿತ್ತು. ಇದರ ನಂತರ ನ್ಯಾಯಾಲಯವು ಪಂಜಾಬ್ ಮತ್ತು ತಮಿಳುನಾಡು ಸರ್ಕಾರಗಳು ಸಲ್ಲಿಸಿದ್ದ ಇದೇ ರೀತಿಯ ಸಮಸ್ಯೆಗಳನ್ನು ಪರಿಶೀಲಿಸಿತ್ತು. ಈ ವೇಳೆ ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂಕೋರ್ಟ್, ರಾಜ್ಯಪಾಲರು ಭಾರತೀಯ ಸಂವಿಧಾನದ 200 ನೇ ವಿಧಿಯ ಪ್ರಕಾರ ಕಾರ್ಯನಿರ್ವಹಿಸಬೇಕು, ಕಾನೂನು ರಚನೆಗೆ ರಾಜ್ಯಾಪಾಲರು ಅಡ್ಡಿ ಮಾಡಬಾರದು ಎಂದು ಪಂಜಾಜ್ ಸರ್ಕಾರ ಸಲ್ಲಿಸಿದ ರಿಟ್ ಅರ್ಜಿ ಪ್ರಕರಣದ ತೀರ್ಪಿನಲ್ಲಿ ಸ್ರುಪ್ರೀಂಕೋರ್ಟ್ ಹೇಳಿತ್ತು. ಕೇರಳ
ರಾಜ್ಯಪಾಲರು ರಾಜ್ಯದ ಚುನಾಯಿತರಾಗದ ಮುಖ್ಯಸ್ಥರಾಗಿದ್ದು, ಕೆಲವು ಸಾಂವಿಧಾನಿಕ ಅಧಿಕಾರಗಳನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ನ್ಯಾಯಾಲಯ ಅಂದು ಪುನರುಚ್ಚರಿಸಿತ್ತು. “ಆದಾಗ್ಯೂ, ರಾಜ್ಯ ಶಾಸಕಾಂಗಗಳ ಸಾಮಾನ್ಯ ಕಾನೂನು ರಚನೆಯನ್ನು ತಡೆಯಲು ಈ ಅಧಿಕಾರವನ್ನು ಬಳಸಲಾಗುವುದಿಲ್ಲ. ಸಂಸದೀಯ ಸ್ವರೂಪದ ಪ್ರಜಾಪ್ರಭುತ್ವದಲ್ಲಿ ‘ನೈಜ ಅಧಿಕಾರ’ ಜನರ ಚುನಾಯಿತ ಪ್ರತಿನಿಧಿಗಳಿಗೆ ನೀಡಲ್ಪಟ್ಟಿದೆ ಎಂದು ನ್ಯಾಯಾಲಯದ ತೀರ್ಪು ಹೇಳಿತ್ತು.
ಇದನ್ನೂ ಓದಿ: ಪ್ರದರ್ಶನ ಬೇಡ ಎಂದರೂ ಪಟ್ಟು ಹಿಡಿದು ಹುತಾತ್ಮ ಸೈನಿಕನ ತಾಯಿಯ ಫೋಟೋ ಕ್ಲಿಕ್ ಮಾಡಿದ ಬಿಜೆಪಿ ಸಚಿವ | ರಣಹದ್ದು ಎಂದ ಕಾಂಗ್ರೆಸ್
“ಸರ್ಕಾರದ ಕ್ಯಾಬಿನೆಟ್ ರೂಪದಲ್ಲಿರುವ ಸರ್ಕಾರದ ಸದಸ್ಯರು ಶಾಸಕಾಂಗದ ಪರಿಶೀಲನೆಗೆ ಜವಾಬ್ದಾರರಾಗಿರುತ್ತಾರೆ ಮತ್ತು ಒಳಪಟ್ಟಿರುತ್ತಾರೆ. ರಾಷ್ಟ್ರಪತಿಗಳ ನೇಮಕವಾಗಿರುವ ರಾಜ್ಯಪಾಲರು ರಾಜ್ಯದ ನಾಮಸೂಚಕ ಮುಖ್ಯಸ್ಥ ಮಾತ್ರ’’ ಎಂದು ನ್ಯಾಯಪೀಠ ಅಂದು ತಿಳಿಸಿತ್ತು.
ಭಾರತೀಯ ಸಂವಿಧಾನದ ಆರ್ಟಿಕಲ್ 200 ರ ಪ್ರಕಾರ, ಒಂದು ವೇಳೆ ರಾಜ್ಯಪಾಲರು ಮಸೂದೆಯನ್ನು ಹಿಂತಿರುಗಿಸಿದಾಗ, ಸದನವು ಮಸೂದೆಯನ್ನು ಮರುಪರಿಶೀಲಿಸುತ್ತದೆ ಮತ್ತು ರಾಜ್ಯಪಾಲರು ಸೂಚಿಸಿದ ಬದಲಾವಣೆಗಳೊಂದಿಗೆ ಅಥವಾ ಯಾವುದೆ ಬದಲಾವಣೆ ಇಲ್ಲದೆಯೇ ಅದನ್ನು ರಾಜ್ಯಪಾಲರ ಅನುಮೋದನೆಗೆ ಮತ್ತೆ ಕಳುಹಿಸುತ್ತದೆ. ಎರಡನೇ ಬಾರಿಗೆ ಮಸೂದೆಯನ್ನು ಸದನವು ಅಂಗೀಕರಿಸಿದ ನಂತರ, ರಾಜ್ಯಪಾಲರು ಮರು-ಅಂಗೀಕಾರಗೊಂಡ ಮಸೂದೆಗೆ “ಸಮ್ಮತಿಯನ್ನು ತಡೆಹಿಡಿಯುವಂತಿಲ್ಲ”.
ಆರ್ಟಿಕಲ್ 200 ರಾಜ್ಯಪಾಲರಿಗೆ ವಿಧೇಯಕಕ್ಕೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯಲು ಅಧಿಕಾರ ನೀಡಿದ್ದರೂ, ರಾಜ್ಯಪಾಲರು ಸರಿಯಾದ ಕ್ರಮವನ್ನು ಅನುಸರಿಸಬೇಕು ಮತ್ತು ‘ಸಾಧ್ಯವಾದಷ್ಟು ಬೇಗ’ ವಿಧಾನಸಭೆಗೆ ಕಾರಣವನ್ನು ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ವಿಡಿಯೊ ನೊಡಿ: ದುಡಿಯುವ ಜನರ ಐಕ್ಯ ಹೋರಾಟ ರೂಪಗೊಂಡಿದ್ದು ಹೇಗೆ? – ಎಚ್.ಆರ್. ನವೀನ್ ಕುಮಾರ್ ಜೊತೆ ಮಾತುಕತೆ Janashakthi Media