ಕೋಲಾರ: ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಮಿಕರ ಹಾಗೂ ಜನ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಪ್ರಬಲವಾದ ಜನಾಂದೋಲನ ರೂಪಿಸಬೇಕಾಗಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಪ್ರತಾಪ್‌ಸಿಂಹ ತಿಳಿಸಿದರು. ಜನಾಂದೋಲನ
ನಗರದ ಗುತ್ತಿಗೆದಾರರ ಭವನದಲ್ಲಿ ಭಾನುವಾರ ಸಿಐಟಿಯು ಜಿಲ್ಲಾ ಸಂಘಟನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರದ ನರೇಂದ್ರ ಮೋದಿ ಸರಕಾರವು ನಿರಂತರವಾಗಿ ಕಾರ್ಪೊರೇಟ್ ಸಂಸ್ಥೆಗಳ ಪರವಾದ ನೀತಿಗಳನ್ನು ಜಾರಿಗೊಳಿಸುತ್ತಿದೆ ದೇಶಕ್ಕೆ ಅನ್ನ ನೀಡುವ ರೈತರು ಹಾಗೂ ಶ್ರಮಶಕ್ತಿಯ ಕಾರ್ಮಿಕರ ಬದುಕಿಗೆ ಮಾರಕವಾಗುವ ರೀತಿಯ ಕಾನೂನುಗಳನ್ನು ಜಾರಿಗೊಳಿಸಲು ಮುಂದಾಗಿದೆ ಇದನ್ನು ಪ್ರಶ್ನೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ರೈತರಿಗೆ ಕಾರ್ಮಿಕರಿಗೆ ಉಳಿಗಾಲವಿಲ್ಲ ಎಂದರು.
ಇದನ್ನೂ ಓದಿ:ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಬೃಹತ್ ವಿಧಾನಸೌಧ ಚಲೋ
ಕೇಂದ್ರದ ಬಿಜೆಪಿ ಸರ್ಕಾರವು ಜನರ ಮಧ್ಯೆ ಕೋಮು ಭಾವನೆಗಳನ್ನು ಕೆರಳಿಸುವ ಮೂಲಕ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಮೂಲಕ ಬಂಡವಾಳಶಾಹಿ, ಕಾರ್ಪೊರೇಟ್ ಸಂಸ್ಥೆಗಳ ಪರವಾದ ಕೇಂದ್ರ ಬಿಜೆಪಿ ಸರಕಾರವನ್ನು ದೂರವಿಡಬೇಕಾಗಿದೆ ಸಾರ್ವಜನಿಕ ವಲಯವನ್ನು ಉಳಿಸಲು ಸರ್ಕಾರದ ನವ-ಉದಾರೀಕರಣ ನೀತಿಗಳ ವಿರುದ್ಧ ಜನರು ಒಗ್ಗಟ್ಟಿನ ಹೋರಾಟಗಳನ್ನು ನಡೆಸಬೇಕು ಎಂದು ತಿಳಿಸಿದರು. ರಾಜ್ಯ
ಕಾರ್ಮಿಕರ ಕಾನೂನುಗಳ ಬಗ್ಗೆ ಸಾಕಷ್ಟು ಅರಿವು ಇಲ್ಲದಿರುವುದರಿಂದಲೇ ಬಂಡವಾಳಶಾಹಿಗಳು ಸುಲಭವಾಗಿ ಕಾರ್ಮಿಕರನ್ನು ಶೋಷಿಸುತ್ತಿದ್ದಾರೆ ಎಲ್ಲರನ್ನೂ ಒಗ್ಗಟ್ಟಾಗಿ ನಿಲ್ಲಿಸುವುದೇ ದೊಡ್ಡ ಸವಾಲಾಗಿದೆ ಆ ಸವಾಲನ್ನು ಮೆಟ್ಟಿ ನಿಂತರೆ ಯಶಸ್ಸು ಖಚಿತ ಮಾಲೀಕರು ಎಲ್ಲೆಡೆ ಕಾನೂನುಗಳನ್ನು ಉಲ್ಲಂಘಿಸುತ್ತಿದ್ದಾರೆ. ಕಾರ್ಮಿಕರಿಗಾಗಿ 44 ಕಾನೂನುಗಳಿದ್ದು ಅವೆಲ್ಲವನ್ನೂ ಪ್ರತಿಯೊಬ್ಬ ಕಾರ್ಮಿಕನೂ ತಿಳಿದುಕೊಳ್ಳಲೇಬೇಕು ಕಾರ್ಮಿಕರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಸಮಾನ ಶ್ರಮ, ಸಮಾನ ವೇತನ ಸೂಕ್ತವಾಗಿ ಜಾರಿಗೆ ಬಂದಲ್ಲಿ ಪ್ರತಿಯೊಬ್ಬ ಕಾರ್ಮಿಕನ ಬಾಳೂ ಉತ್ತಮವಾಗಲಿದೆ. ಬಂಡವಾಳಶಾಹಿಗಳು ಕಾರ್ಮಿಕ ಕಾನೂನುಗಳನ್ನು ಜಾರಿಗೆ ಬರಲು ಅವಕಾಶ ನೀಡುತ್ತಿಲ್ಲ ನವೆಂಬರ್ ತಿಂಗಳಲ್ಲಿ ದೇಶದಾದ್ಯಂತ ಬೃಹತ್ ಹೋರಾಟ ನಡೆಯಲಿದ್ದು ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ ಕಾರ್ಮಿಕರಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಬಂಡವಾಳಶಾಹಿಗಳ ಶೋಷಣೆಯಿಂದ ತಪ್ಪಿಸಲು ಕಾರ್ಮಿಕರಿಗಾಗಿ ಇರುವ ಕಾನೂನುಗಳನ್ನು ಕಡ್ಡಾಯವಾಗಿ ಜಾರಿಯಾಗಬೇಕು ದೇಶದ ಕಾರ್ಮಿಕರಿಗೆ ನ್ಯಾಯ ಸಿಗುವವರೆಗೂ ನಿರಂತರ ಹೋರಾಟ ನಡೆಯುತ್ತಲೇ ಇರುತ್ತದೆ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನಿಗದಿಗೊಳಿಸಬೇಕು ಕಾರ್ಮಿಕರು ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂಬುದನ್ನು ಸರಕಾರಗಳು ಗಂಭೀರವಾಗಿ ತೆಗೆದುಕೊಳ್ಳುಬೇಕು ಎಂದು ಹೇಳಿದರು. ಜನಾಂದೋಲನ
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಅಮರನಾರಾಯಣ, ಖಜಾಂಚಿ ಭೀಮರಾಜ್, ಜಿಲ್ಲಾ ಸಮಿತಿ ಸದಸ್ಯರಾದ ಹೊಗರಿ ನಾಗರಾಜಪ್ಪ, ಗಾಂಧಿನಗರ ಮಂಜುಳ ಇದ್ದರು.
ವಿಡಿಯೋ ನೋಡಿ:ಕುಸಿಯುತ್ತಿದೆ ಲಿಂಗಾನುಪಾತ- ಸಮಾಜ ಮತ್ತು ಸರಕಾರದ ಜವಾಬ್ದಾರಿ ಏನು?Janashakthi Media