ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರುಗಳ ಹುದ್ದೆಗೆ ಸುಪ್ರಿಂ ಕೋರ್ಟ್ ಪಟ್ಟಿ ಮಾಡಿದ ಅಭ್ಯರ್ಥಿಗಳ ಬಗ್ಗೆ ಸರ್ಕಾರ ತಿಂಗಳಾನುಗಟ್ಟಲೆ ಯಾವುದೇ ನಿರ್ಧಾರ ಕೈಗೊಳ್ಳದಿರುವುದರಿಂದ ನ್ಯಾಯಾಂಗವು ಹಿಂದೆಂದೂ ಕಾಣದ ರೀತಿಯಲ್ಲಿ ಹೊಸ ಪ್ರತಿಭೆಗಳನ್ನು ಕಳೆದುಕೊಳ್ಳುತ್ತಿದೆ ಎಂದು ಸುಪ್ರಿಂ ಕೋರ್ಟ್ ಟಿಪ್ಪಣಿ ಮಾಡಿರುವುದಾಗಿ ವರದಿಯಾಗಿದೆ(ದಿ ಹಿಂದೂ, ಸೆಪ್ಟಂಬರ್ 26). ನ್ಯಾಯಾಂಗವು
ಸರಕಾರ ಯಾವ ಕಾರಣಕ್ಕೋ ಗೊತ್ತಿಲ್ಲ, ಹೆಸರುಗಳನ್ನು ವಿಂಗಡಿಸಿ ಒಂದು ಹೆಸರಿನ ಬದಲು ಮತ್ತೊಂದು ಹೆಸರನ್ನು ಬಯಸುತ್ತದೆ, ಇದಕ್ಕೆ ನ್ಯಾಯಪೀಠಕ್ಕೆ ಸೇರಲು ತಮ್ಮ ಕಾನೂನು ಪ್ರಾಕ್ಟೀಸನ್ನು ತ್ಯಾಗ ಮಾಡಲು ಸಿದ್ಧರಿರುವ ಅನೇಕ “ಪ್ರತಿಭಾಶಾಲಿ” ಕಾನೂನು ಮನಸ್ಸುಗಳು ಬಲಿಯಾಗುತ್ತವೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ತಿಳಿಸಿದ್ದಾರೆ.
“ಜನ ಬರಲು ನಿರಾಕರಿಸುತ್ತಿದ್ದಾರೆ. ನಾವು ಪ್ರಯತ್ನಿಸುತ್ತೇವೆ, ಅತ್ಯುತ್ತಮ ಪ್ರತಿಭೆಯನ್ನು ಪಡೆಯಲು ಶ್ರಮಿಸುತ್ತೇವೆ.ವಿಂಗಡಣೆ(segregation)ಯಿಂದಾಗಿ ಪೀಠವು ಉತ್ತಮ ಪ್ರತಿಭೆಯನ್ನು ಕಳೆದುಕೊಂಡಿದೆ. ಅವರು ಬೇಡ ಎನ್ನುತ್ತಾರೆ, ಹೆಸರು ಹಿಂತೆಗೆದುಕೊಳ್ಳುತ್ತಾರೆ… ”ಎಂದು ನ್ಯಾಯಮೂರ್ತಿ ಕೌಲ್ ಅವರು ಕೇಂದ್ರ ಸರಕಾರದ ಅಟಾರ್ನಿ ಜನರಲ್ ಅವರನ್ನು ಉದ್ದೇಶಿಸಿ ಹೇಳಿದರು.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಅರವಿಂದ್ ದಾತಾರ್ ಮತ್ತು ವಕೀಲ ಅಮಿತ್ ಪೈ, ಬೆಂಗಳೂರಿನ ವಕೀಲರ ಸಂಘ, “ಕೊಲಿಜಿಯಂಗಳು ಸರ್ಕಾರಕ್ಕೆ ಒದಗಿಸಿದ ಪಟ್ಟಿಯಿಂದ ಕೆಲವು ಹೆಸರುಗಳನ್ನು ವಿಂಗಡಿಸುವುದು ತುಂಬಾ ಮುಜುಗರದ ಸಂಗತಿ” ಎಂದು ಹೇಳಿದರು. ವಕೀಲ ಪ್ರಶಾಂತ್ ಭೂಷಣ್, ಕೊಲಿಜಿಯಂ ಈ ಪದ್ಧತಿಯನ್ನು ನಿಷೇಧಿಸಿದ್ದರೂ ಸರ್ಕಾರವು ನಿರ್ಭಿಡೆಯಿಂದ ಹೆಸರುಗಳನ್ನು ವಿಂಗಡಿಸುವುದನ್ನು ಮುಂದುವರೆಸಿದೆ. “ಇನ್ನು ಮುಂದೆ ಇಲ್ಲ&” ಎಂದು ಕೊಲಿಜಿಯಂ ಹೇಳಿದರೂ ಅದು ಇನ್ನೂಮುಂದುವರಿಯುತ್ತಿದೆ” ಎಂದು ಅವರು ಹೇಳಿದರು. ನ್ಯಾಯಾಂಗವು
ಇದನ್ನೂ ಓದಿ: ಮಹಾರಾಷ್ಟ್ರ: ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ, 59 ರೋಗಿಗಳ ಸಾವು
ನ್ಯಾಯಾಲಯವು ಚಾವಟಿಯನ್ನು ಬೀಸಿ ಯಾರನ್ನಾದರೂ ನ್ಯಾಯಾಂಗ ನಿಂದನೆಗೆ ಎಳೆಯಬೇಕಾದ ಸಮಯ ಬಂದಿದೆ, “ಇದು ಹೀಗೇ ಮುಂದುವರೆಯಲು ಸಾಧ್ಯವಿಲ್ಲ,” ಎಂದು ಅವರು ಹೇಳಿದರು.ನವೆಂಬರ್ 2022 ರಿಂದ 10 ತಿಂಗಳಲ್ಲಿ ಹೈಕೋರ್ಟ್ ಕೊಲಿಜಿಯಂಗಳು ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡಿರುವ 70 ಹೆಸರುಗಳ ಬಗ್ಗೆ ಸರಕಾರದ ನಿರ್ಣಯ ಬಂದಿಲ್ಲ ಎಂಬ ಸಂಗತಿಯತ್ತ ನ್ಯಾಯಮೂರ್ತಿ ಕೌಲ್ ಅಟಾರ್ನಿ ಜನರಲ್‍ರವರ ಗಮನ ಸೆಳೆದರು.
ಹೈಕೋರ್ಟ್ ನ್ಯಾಯಾಧೀಶರ 70 ಹುದ್ದೆಗಳು ಖಾಲಿ ಇವೆ. ಹೈಕೋರ್ಟ್ ಕೊಲಿಜಿಯಂನ ಶಿಫಾರಸುಗಳನ್ನು ಸ್ವೀಕರಿಸಿದಾಗ, ಕೆಲವು ಮೂಲಭೂತ ಪ್ರಕ್ರಿಯೆಗಳನ್ನು ಮಾಡಬೇಕು ಮತ್ತು ಅದನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ರವಾನಿಸಬೇಕು. ಅದನ್ನೂ ಸರಕಾರ ಮಾಡಿಲ್ಲ. ಅವರ ಬಗ್ಗೆ ಸರಕಾರದ ದೃಷ್ಟಿಕೋನವು ತಿಳಿದರೆ, ಮುಂದೇನು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಯೋಚಿಸಬಹುದು. “ನೀವು ಅದನ್ನು ಮಾಡುತ್ತಿಲ್ಲ … – ಸರಿಸುಮಾರು ನಾಲ್ಕು ಅಥವಾ ಐದು ತಿಂಗಳುಗಳ ಸಮಯ ಚೌಕಟ್ಟನ್ನು ನಿಗದಿಪಡಿಸಲಾಗಿದೆ ” ಎಂದು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂನ ಸದಸ್ಯರೂ ಆಗಿರುವ ನ್ಯಾಯಮೂರ್ತಿ ಕೌಲ್ ಸರ್ಕಾರದ ಕಾನೂನು ಪ್ರತಿನಿಧಿಗಳಿಗೆ ಹೇಳಿದರು.
ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿರುವ 26 ವರ್ಗಾವಣೆಗಳ ಬಗ್ಗೆಯೂ ಸರಕಾರದಿಂದ ಯಾವುದೇ ಮಾತು ಬಂದಿಲ್ಲ. ಎಂದು ಹೇಳಿದರು. ಹೈಕೋರ್ಟುಗಳಿಗೆ ನೇಮಕಾತಿಗಾಗಿ ಕೊಲಿಜಿಯಂ ಮಾಡಿದ ಒಂಬತ್ತು ಹೊಸ ಶಿಫಾರಸುಗಳ ಮೇಲೆ ಸರ್ಕಾರವು ಕ್ರಮ ಕೈಗೊಂಡಿಲ್ಲ ಅಥವಾ ಕೊಲಿಜಿಯಂಗೆ ಹಿಂತಿರುಗಿಸಿಲ್ಲ.
ಇದನ್ನೂ ಓದಿ: ಕಾವೇರಿ ಮತ್ತು ಏಕತೆ
ವಿವಿಧ ಹೈಕೋರ್ಟುಗಳಿಗೆ ನೇಮಕಾತಿಗಾಗಿ ಕೊಲಿಜಿಯಂ ಪುನರುಚ್ಚರಿಸಿದ ಇತರ ಏಳು ಹೆಸರುಗಳ ಭವಿಷ್ಯದ ಮೇಲೆ ಅನಿಶ್ಚಿತತೆಯ ಮಂಜು ಆವರಿಸಿದೆ. ವಿಧಿ-ವಿಧಾನಗಳ ಪ್ರಕಾರ ಸರ್ಕಾರವು ಕೊಲಿಜಿಯಂ ಪುನರುಚ್ಚರಿಸಿದ ಹೆಸರುಗಳನ್ನು ಮತ್ತಷ್ಟು ವಿಳಂಬವಿಲ್ಲದೆ ನೇಮಿಸಬೇಕು ಸರಕಾರದ ಅಟಾರ್ನಿ ಜನರಲ್ ಇವೆಲ್ಲವೂ ಯಾವ ಹಂತದಲ್ಲಿವೆ ಎಂದು ವಿಚಾರಿಸಲು ಒಂದು ವಾರ ಕಾಲಾವಕಾಶ ಕೇಳಿದರು.
ನ್ಯಾಯಾಲಯ ಅಕ್ಟೋಬರ್ 9ರ ವರೆಗೆ ಸಮಯ ಕೊಟ್ಟು ಅಷ್ಟರ ಒಳಗೆ ಬಾಕಿ ಉಳಿದಿರುವ ನ್ಯಾಯಾಂಗ ನೇಮಕಾತಿಗಳು ಮತ್ತು ವರ್ಗಾವಣೆಗಳ ಬಗ್ಗೆ ಸರಕಾರ ನಿರ್ಧಾರಕ್ಕೆ ಬರುವಂತೆ ಮಾಡಬೇಕು ಎಂದು ಅವರಿಗೆ ಹೇಳಿದೆ. ಈ ಹೆಸರುಗಳಿಗೆ ಏನಾಯಿತು ಎಂದು ನೀವು ನನಗೆ ಹೇಳುವವರೆಗೆ ನಾನು ಪ್ರತಿ 10 ದಿನಗಳಿಗೊಮ್ಮೆ ಈ ಪ್ರಕರಣವನ್ನು ತೆಗೆದುಕೊಳ್ಳುತ್ತೇನೆ … ಅಟಾರ್ನಿಯವರು ಸಮಯ ಕೇಳಿದ್ದರಿಂದ ನಾನು ಇಂದು ಹೆಚ್ಚು ಹೇಳುತ್ತಿಲ್ಲ. ಆದರೆ ಮುಂದಿನ ಬಾರಿ ನಾನು ಬಹಳಷ್ಟು ಹೇಳುತ್ತೇನೆ” ಎಂದು ನ್ಯಾಯಮೂರ್ತಿ ಕೌಲ್ ಹೇಳಿರುವುದಾಗಿ ವರದಿಯಾಗಿದೆ. ನ್ಯಾಯಾಂಗವು
ವಿಡಿಯೋ ನೋಡಿ: ಹೋರಾಟದ ಹಕ್ಕಿಗಾಗಿ ಆಂದೋಲನ – ಪ್ರತಿಭಟನೆಕಾರರ ಬಂಧನ Janashakthi Media