ಸರ್ಕಾರಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿರುವ ಎಂ.ಆರ್ ಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಕೆಪಿಆರ್‌ಎಸ್‌ಪ್ರತಿಭಟನೆ

ತುಮಕೂರು: ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌)  ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಬಗರ್ ಹುಕಂ ಸಾಗುವಳಿದಾರರು ಬೃಹತ್ ಧರಣಿ ನಡೆಸಿ ಪ್ರತಿಭಟಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಕಿರುಕುಳ ನಿಲ್ಲಬೇಕು, ಬಗರ್ ಹುಕಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು , ಸಾಗುವಳಿ ಸಕ್ರಮ ಕೋರಿ ಅರ್ಜಿ ಸಲ್ಲಿಸಿರುವ ರೈತರ ಸ್ವಾಧೀನಕ್ಕೆ ತೊಂದರೆ ನೀಡಬಾರದು, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆಲಸ ಒದಗಿಸಬೇಕು , ಸರ್ಕಾರಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿರುವ ಎಂ ಆರ್ ಗಳನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗುಬ್ಬಿ ಗೇಟ್ ನ ಭೀಮಸಂದ್ರದಿಂದ ಅತ್ಯಂತ ಶಿಸ್ತುಬದ್ದವಾಗಿ ಕೆಂಬಾವುಟ ಹಿಡಿದು ಸುಮಾರು ಮೂರು ಕಿ.ಮೀ ನಷ್ಟು ದೂರದ ಜಿಲ್ಲಾಧಿಕಾರಿ ಕಛೇರಿ ಗೆ ಮೆರವಣಿಗೆ ಮೂಲಕ ಬಂದು ಸಮಾವೇಶಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ.ಟಿ ಯಶವಂತ ಮಾತಾನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಕಾರ್ಪೊರೇಟ್ ಪರ ಭೂ ನೀತಿಯನ್ನು ಖಂಡಿಸಿದರು.

ಇದನ್ನೂ ಓದಿ:ಅರಣ್ಯ ಇಲಾಖೆ ಕಿರುಕುಳ ಖಂಡಿಸಿ-ಬಗರ್‌ ಹುಕುಂ ಸಾಗುವಳಿ ಭೂಮಿ ಹಕ್ಕುಪತ್ರಕ್ಕೆ ಆಗ್ರಹಿಸಿ ಕೆಪಿಆರ್‌ಎಸ್‌ ಪ್ರತಿಭಟನೆ

ಯಾವುದೇ ಕಾರಣಕ್ಕೂ ಸಣ್ಣ ಹಿಡುವಳಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ. ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಗಳ ದೌರ್ಜನ್ಯ ಕುರಿತು ಬಗರ್ ಹುಕಂ ಸಾಗುವಳಿದಾರರ ಅಹವಾಲು ಆಲಿಸಿ ದೂರು ಸ್ವೀಕರಿಸಲು ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು ,ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿ , ಪ್ರತಿಭಟನೆ ಕೈ ಬಿಡುವಂತೆ ವಿನಂತಿಸಿದರು.

ಜಿಲ್ಲಾಡಳಿತ ತನ್ನ ಭರವಸೆಯಂತೆ ನಡೆದುಕೊಳ್ಳಬೇಕು ಎಂಬ ಷರತ್ತು ಆಧಾರದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆ ನೇತೃತ್ವವನ್ನು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಜಿಲ್ಲಾಧ್ಯಕ್ಷ ಆರ್ ಎಸ್ ಚನ್ನಬಸವಣ್ಣ, ಕಾರ್ಯದರ್ಶಿ ಸಿ ಅಜ್ಜಪ್ಪ, ಮುಖಂಡರುಗಳಾಗ ಬಿ ಉಮೇಶ್ , ಎನ್ ಕೆ ಸುಬ್ರಹ್ಮಣ್ಯ, ದೊಡ್ಡನಂಜಯ್ಯ, ಬಸವರಾಜು ಮುಂತಾದವರು ವಹಿಸಿದ್ದರು.

ವಿಡಿಯೋ ನೋಡಿ:ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಪ್ಯಾಲಿಸ್ಟೈನ್ ಕಾರ್ಮಿಕರನ್ನು ಹೊರದಬ್ಬಲಾಗುತ್ತಿದೆ. Janashakthi Media

Donate Janashakthi Media

Leave a Reply

Your email address will not be published. Required fields are marked *