ನಗದು ನೀಡಿಕೆ : ಅಕ್ಕಿ ಸಿಗುವವರೆಗೆ ಮಾತ್ರ – ಸಿಪಿಐಎಂ ಒತ್ತಾಯ

ಬೆಂಗಳೂರು : ಅಕ್ಕಿ ದೊರೆಯದ ಕಾರಣಕ್ಕೆ ಅಕ್ಕಿದೊರೆಯುವವರೆಗೆ ನಗದು ನೀಡಲು ಅನಿವಾರ್ಯವಾಗಿ ನಿರ್ಧರಿಸಲಾಗಿದೆಯೆಂಬ ಹೇಳಿಕೆಯನ್ನು ಸಿಪಿಐಎಂ ಸ್ವಾಗತಿಸುತ್ತದೆ. ಆದರೇ, ಇದನ್ನೇ ನೆಪ ಮಾಡಿ ನಗದು ವರ್ಗಾವಣೆಯನ್ನೇ ನೀತಿಯಾಗಿ ಮಾಡಿಕೊಳ್ಳಬಾರದು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಗದು ವರ್ಗಾವಣೆಯು ಬಿಪಿಎಲ್ ಕಾರ್ಡದಾರರ ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ಜಮಾ ಮಾಡುವುದು ಅಗತ್ಯವಾಗಿದೆಯೆಂದು ಸೂಚಿಸಿದೆ. ಕರ್ನಾಟಕ ಸರಕಾರ ರಾಜ್ಯದ ಓಪನ್ ಮಾರುಕಟ್ಟೆಯಲ್ಲಿ ಭತ್ತವನ್ನು ಖರೀದಿಸಿ, ಬಂಡವಾಳ ತೊಡಗಿಸಿ ಸಾರ್ವಜನಿಕ ರಂಗದ ಆಧುನಿಕ ರೈಸ್ ಮಿಲ್ ನಿರ್ಮಿಸಿ ಅಕ್ಕಿ ಉತ್ಪಾದನೆಯಲ್ಲಿ ತೊಡಗುವ ಕಡೆ ಚಿಂತಿಸಿ ಕಾರ್ಯ ಪ್ರವೃತ್ತವಾಗುವುದು ಅಗತ್ಯವಿದೆಯೆಂದು  ತಿಳಿಸಿದ್ದಾರೆ.

ರಾಜ್ಯ ಸರಕಾರ ಬಡವರಿಗೆ ಹೆಚ್ಚುವರಿಯಾಗಿ ತಲಾ ಐದು ಕೇಜಿ ಅಕ್ಕಿ ನೀಡುವ ಯೋಜನೆಯಲ್ಲಿ ಅಕ್ಕಿ ದೊರೆಯದಂತೆ, ಈಗಲೂ ರಾಜಕೀಯ ಮಾಡುತ್ತಿರುವ, ಒಕ್ಕೂಟ ಸರಕಾರ ಬಿಜೆಪಿ ಹಾಗೂ ಆರ್ ಎಸ್ಎಸ್ ನ ಬಡವರ ವಿರೋಧಿ ನಿಲುಮೆಯನ್ನು ಸಿಪಿಐಎಂ ರಾಜ್ಯ ಘಟಕ ಬಲವಾಗಿ ಖಂಡಿಸುತ್ತದೆ. ಇದೊಂದು ನಾಚಿಕೆಗೇಡಿನ ರಾಜಕಾರಣವಾಗಿದೆ ಎಂದು ಬಸವರಾಜ ಆರೋಪಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *