ಗೋಡ್ಸೆ ವೈಭವೀಕರಣ: ಸಾರಿಗೆ ಇಲಾಖೆಯ ಮೆನ್ಷನ್ ಮಾಡಿ ಸುಮ್ಮನಾಯ್ತೆ ಬೆಂಗಳೂರು ನಗರ ಪೊಲೀಸ್‌?

ಇದು ಟ್ರಾಫಿಲ್ ನಿಯಮಗಳ ಉಲ್ಲಂಘನೆಯಲ್ಲ, ಶಿಕ್ಷಾರ್ಹ ಅಪರಾಧ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಹೇಳಿದ್ದಾರೆ ಗೋಡ್ಸೆ

ಬೆಂಗಳೂರು: ರಾಷ್ಟ್ರಪಿತ ಮಹಾತ್ಯ ಗಾಂಧಿಯ ಕೊಲೆಗಾರ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಿ ಕಾರೊಂದಕ್ಕೆ ಸ್ಟಿಕರ್‌ ಅಂಟಿಸಿರುವ ಘಟನೆ ನಗರದಲ್ಲಿ ನಡೆದಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸರಿಗೆ ಮಾಹಿತಿ ನೀಡಿದರೂ, ಅವರು ಟ್ರಾಫಿಕ್ ಪೊಲೀಸರನ್ನು ಟ್ವಿಟರ್‌ನಲ್ಲಿ ಮೆನ್ಸನ್ ಮಾಡಿ ಸುಮ್ಮನಾಗಿದ್ದಾರೆ. ಈ ಬಗ್ಗೆ ಯಾವುದೆ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿಯನ್ನು ಪೊಲೀಸರು ಟ್ವಿಟರ್‌ನಲ್ಲಿ ಹಂಚಿಕೊಂಡಿಲ್ಲ.

ತಾನು ವಕೀಲ ಎಂದು ಹೇಳಿಕೊಂಡಿರುವ ಟ್ವಿಟರ್‌ ಬಳಕೆದಾರ ಝಿಶಾನ್‌ ರಜ್ವಿ ಎಂಬವರು ಈ ಬಗ್ಗೆ ಬೆಂಗಳೂರು ನಗರ ಪೊಲೀಸರಿಗೆ ಚಿತ್ರ ಸಹಿತ ಮಾಹಿತಿಯನ್ನು ಟ್ವಿಟರ್‌(ಎಕ್ಸ್‌)ನಲ್ಲಿ ಹಂಚಿಕೊಂಡಿದ್ದಾರೆ. ಅದು ಟ್ರಾಫಿಲ್ ನಿಯಮಗಳ ಉಲ್ಲಂಘನೆಯಲ್ಲ, ಶಿಕ್ಷಾರ್ಹ ಅಪರಾಧ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಗಾಂಧಿಯನ್ನು ಕೊಂದಂತೆ ನಾನು ಅಂಬೇಡ್ಕರ್‌ರನ್ನು ಕೊಲ್ಲುತ್ತಿದ್ದೆ: ಹಿಂದುತ್ವ ನಾಯಕನ ವಿವಾದಾತ್ಮಕ ಹೇಳಿಕೆ

ಟ್ವಿಟರ್‌ನಲ್ಲಿ ಝೀಶಾನ್ ಅವರು, “ಇತ್ತೀಚೆಗೆ ನನ್ನ ಎದುರಿನ ಕ್ಯಾಬ್‌ನಲ್ಲಿ ಗೋಡ್ಸೆಯನ್ನು ವೈಭವೀಕರಿಸುವ ಈ ಸ್ಟಿಕ್ಕರ್ ಅನ್ನು ನೋಡಿದೆ. ಸ್ಟಿಕರ್‌ನಲ್ಲಿ ಬಂದೂಕಿನ ಚಿತ್ರದೊಂದಿಗೆ ಪಕ್ಕದಲ್ಲಿ ‘ಹೇ ರಾಮ್’ ಎಂಬ ಪದಗಳನ್ನು ಬರೆಯಲಾಗಿದೆ. ಈ ಪದವನ್ನು ಮಹಾತ್ಮಾ ಗಾಂಧೀಜಿಯವರು ಕೊಲೆಯಾದಾಗ ಹೇಳಿದ್ದರು. ಅದರ ಅಡಿಯಲ್ಲಿ ಗೋಡ್ಸೆ ಎಂದು ಬರೆಯಲಾಗಿದೆ” ಎಂದು ಹೇಳಿದ್ದಾರೆ.

ಬೆಂಗಳೂರು ನಗರ ಪೊಲೀಸರನ್ನು ಮೆನ್ಷನ್‌ ಮಾಡಿರುವ ಝೀಶಾನ್ ಅವರು, ”ದಯವಿಟ್ಟು ಆದಷ್ಟು ಬೇಗ ಕ್ರಮ ಕೈಗೊಳ್ಳಿ” ಎಂದು ವಿನಂತಿಸಿದ್ದಾರೆ. ಅಷ್ಟೆ ಅಲ್ಲದೆ, “ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಗೋಡ್ಸೆಯನ್ನು ವೈಭವೀಕರಿಸಿದ್ದಕ್ಕಾಗಿ ಇತ್ತೀಚೆಗೆ ಅಲಿಗಢ, ಯುಪಿ ಮತ್ತು ಛತ್ತೀಸ್‌ಗಢದಲ್ಲಿ ಪ್ರಕರಣಗಳು ದಾಖಲಾಗಿವೆ” ಎಂಬ ಮಾಹಿತಿಯನ್ನು ಕೂಡಾ ಅವರು ಹಂಚಿಕೊಂಡಿದ್ದಾರೆ.

ಝೀಶಾನ್ ಅವರು ಟ್ವೀಟ್‌ಗೆ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದರಾದರೂ, ಕೇವಲ ನಗರದ ಟ್ರಾಫಿಕ್ ಪೊಲೀಸರನ್ನು ತಮ್ಮ ಪ್ರತಿಕ್ರಿಯೆಯನ್ನು ಮೆನ್ಷನ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟರ್‌ ಬಳಕೆದಾರರೊಬ್ಬರು “ಇದು ಟ್ರಾಫಿಕ್ ಉಲ್ಲಂಘನೆ ಅಲ್ಲ ಸರ್. ಇದು ಕ್ರಿಮಿನಲ್ ಆಕ್ಟ್. ಕ್ರಿಮಿನಲ್ ಕಾಯ್ದೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ವಿನಂತಿಸಿದ್ದಾರೆ. ಆದರೆ ಪೊಲೀಸರು ಈ ಬಗ್ಗೆ ಯಾವುದೆ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿಲ್ಲ.

ಕಾರಿನ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಾಡಿದಾಗ, ಕಾರು ಬೆಂಗಳೂರು ಪೂರ್ವ (ಇಂದಿರಾನಗರ) ರಿಜಿಸ್ಟ್ರೇಷನ್ ವಾಹನವಾಗಿದ್ದು, ಅದರ ಇನ್ಸೂರೆನ್ಸ್‌ 2022-01-12ರಂದು ಮುಕ್ತಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಡಿಯೊ ನೋಡಿ: ಸೌಜನ್ಯ ಪ್ರಕರಣ : ಯಾವ ಬಾಯಿಂದ ಮುಗಿದ ಪ್ರಕರಣ ಅಂತ ಹೇಳ್ತೀರಿ? Janashakthi Media

Donate Janashakthi Media

Leave a Reply

Your email address will not be published. Required fields are marked *