ಜಗತ್ತಿನಲ್ಲಿ ಗತಿಸಿದ ಯುದ್ಧಗಳಿಂದ ಸತ್ತವರ ಸಂಖ್ಯೆ ಲೆಕ್ಕಕ್ಕೆ ಸಿಗದು. ಯುದ್ದದಿಂದ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೆ ಹೆಚ್ಚು. ಅನೇಕ ಸಮುದಾಯಗಳು ಇಲ್ಲವಾಗಿದ್ದಲ್ಲದೆ ಕುಟುಂಬಗಳನ್ನೇ ಸರ್ವನಾಶ ಮಾಡಿದೆ. ಹಿರೋಷಿಮಾ-ನಾಗಸಕಿ ಮೇಲೆ ನಡೆದ ಬಾಂಬ್ದಾಳಿಯು ಮಾನವ ಇತಿಹಾಸದಲ್ಲೇ ನಡೆದ ಅತ್ಯಂತ ಘೋರ ಸಂಗತಿ. ಈ ಹೃದಯ ಕಲುಕುವ ಘಟನೆ ನಡೆದು ಏಳು ದಶಕಗಳು ಕಳದಿವೆ. ಪ್ರೀತಿ
-ಗುರುರಾಜ ದೇಸಾಯಿ
1945ರಲ್ಲಿ ನಡೆದ ಎರಡನೆ ಮಹಾಯುದ್ಧದ ಸಮಯದಲ್ಲಿ, ಅಮೇರಿಕಾ ಸಂಯುಕ್ತ ಸಂಸ್ಥಾನವು ಅವಳಿ ನಗರಗಳ ಮೇಲೆ ಪರಮಾಣುಬಾಂಬ್ ಸ್ಪೋಟಿಸಲಾಗಿತ್ತು ಮತ್ತು ಇದು ಆ ನಗರಗಳ ವಿನಾಶಕ್ಕೆ ಕಾರಣವಾಗಿತ್ತು. ಆಗಸ್ಟ್ 6, 1945 ರಂದು ಅಮೆರಿಕವು ʼಲಿಟಲ್ಬಾಯ್ʼ ಹೆಸರಿನ ಪರಮಾಣು ಅಸ್ತ್ರವನ್ನು ಜಪಾನ್ನ ಹಿರೋಷಿಮಾ ಮೇಲೆ ಪ್ರಯೋಗಿಸಿತ್ತು. ಆಗ ಬೆಳಿಗ್ಗೆ ಸುಮಾರು 8.15 ಆಗಿತ್ತು. ಇದಾಗಿ ಮೂರು ದಿನಕ್ಕೆ, ಅಂದರೆ ಆಗಸ್ಟ್ 9ಕ್ಕೆ ನಾಗಸಾಕಿಯ ಮೇಲೆ “ಫ್ಯಾಟ್ ಮ್ಯಾನ್” ಬಾಂಬ್ ದಾಳಿ ನಡೆಯಿತು. ಒಟ್ಟಾರೆ ಈ ದಾಳಿಯಲ್ಲಿ ಅಂದಾಜು ಎರಡು ಲಕ್ಷದ ಮೂವತ್ತು ಸಾವಿರ ಜನರ ದುರ್ಮರಣವಾಯಿತು. ಕೆಲ ದಿನಗಳು ಗತಿಸಿದ ನಂತರ ಅಣುವಿಕಿರಣಗಳಿಂದಾಗಿ ಕ್ಯಾನ್ಸರ್ ನಂಥ ಖಾಯಿಲೆಗಳಿಗೆ ಬಲಿಯಾದವರು ಅಂದಾಜು ಐದು ಲಕ್ಷ ಮಂದಿ. ಈ ಘಟನೆಗಳು ನಡೆದು ಎಷ್ಟೋವರ್ಷಗಳ ಬಳಿಕವೂ ಅದರ ಪರಿಣಾಮವನ್ನು ಅಲ್ಲಿನ ಜನರು ಅನುಭವಿಸುತ್ತಿದ್ದಾರೆ. ಆ ಘಟನೆಯಲ್ಲಿ ಬದುಕಿ ಉಳಿದವರು ಹೀನಾಯವಾಗಿ ಬದುಕು ಕಳೆಯುವಂತಾಗುತ್ತದೆ.
ಹಿರೋಷಿಮಾ-ನಾಗಸಕಿ ಘಟನೆಯ ನಂತರ ಮನುಕುಲ ಇನ್ನೂ ಪಾಠ ಕಲಿತಿಲ್ಲ. ಅದು ಮತ್ತೆ ಮತ್ತೆ ಯುದ್ಧ ಬಯಸುತ್ತಲೇ ಇದೆ. ಯುದ್ಧದ ಸಮಯದಲ್ಲಿ ಲಕ್ಷಾಂತರ ಜನರ ಸಾವನ್ನು ಕಂಡು ತನ್ನ ಗೆಲುವನ್ನು ಸಂಭ್ರಮಿಸಿವುದರ ಬದಲು “ನಾನೇನು ಮಾಡಿ ಬಿಟ್ಟೆ ?”ಎಂದು ಉದ್ಗಾರ ತೆಗೆದು ಕಣ್ಣೀರಿಟ್ಟ ಆಶೋಕನಂಥ ಆರಸ ಮತ್ತೆ ಈ ಜಗತ್ತಿನಲ್ಲಿ ಎಲ್ಲೂ ಹುಟ್ಟಲೇ ಇಲ್ಲ. ಪ್ರೀತಿ
ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆಗೆ ಮೂವರು ನಾಮಪತ್ರ ಸಲ್ಲಿಕೆ
ನಾಗಸಾಕಿಯಲ್ಲಿ ಅಂಚೆವಿತರಣೆ ಮಾಡುತ್ತಿದ್ದ 16 ವರ್ಷ ವಯಸ್ಸಿನ ಸುಮಿತೇರು ತಾನಿಗುಚಿಯವರ ಬೆನ್ನು ಮತ್ತು ಎಡಗೈಗೆ ಭೀಕರ ಸುಟ್ಟಗಾಯಗಳು ಉಂಟಾಗಿದ್ದು, ಅದು ಸರಿಯಾಗಿ ಗುಣವಾಗಲು ವರ್ಷಗಳೇ ಬೇಕಾಯಿತು. “ಪರಮಾಣು ಶಸ್ತ್ರಾಸ್ತ್ರಗಳು ಎಂದಿಗೂ ಮಾನವೀಯತೆಯನ್ನು ಉಳಿಸುವುದಿಲ್ಲ” ಎಂದು ಅವರು ಸಾಯುವವರೆಗೂ ಪ್ರಚಾರ ಮಾಡಿದರು. ಪ್ರೀತಿ
ಇತ್ತೀಚಿನ ವರ್ಷಗಳಲ್ಲಿ ಮಧ್ಯಪ್ರಾಚ್ಯದ 22 ದೇಶಗಳು ಒಂದಲ್ಲ ಒಂದು ರೀತಿಯಲ್ಲಿ ಯುದ್ಧದ ಕೆನ್ನಾಲೆಗೆ ಬಲಿಯಾಗುತ್ತಲೇ ಬಂದಿವೆ. 80ರ ದಶಕದಲ್ಲಿ ನಡೆದ ಇರಾನ್-ಇರಾಕ್ ಯುದ್ಧವೊಂದರಲ್ಲಿಯೇ 8 ಲಕ್ಷ ಜನ ಸಾವೀಗಿಡಾದರು. ಗಾಜಾಪಟ್ಟಿಯ ಮೇಲೆ ಇಸ್ರೇಲ್ 22 ತಿಂಗಳಿಂದ ದಾಳಿ ನಡೆಸುತ್ತಿದೆ. ದಾಳಿಯ ಪರಿಣಾಮ 70 ಸಾವಿರಕ್ಕೂ ಹೆಚ್ಚು ಮಂದಿ ಸಾವೀಗೀಡಾಗಿದ್ದಾರೆ. ಸತ್ತವರಲ್ಲಿ ಶೆ. 72% ರಷ್ಟು ಮಕ್ಕಳು ಮತ್ತು ಮಹಿಳೆಯರು. 90% ಕ್ಕಿಂತ ಹೆಚ್ಚು ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳು ಬಾಂಬ್ ದಾಳಿಗೆ ಒಳಗಾಗಿವೆ ಅಥವಾ ಕಾರ್ಯ ನಿರ್ವಹಿಸುತ್ತಿಲ್ಲ. ಇಂಧನದ ಕೊರತೆಯಿಂದ ನವಜಾತ ಶಿಶುಗಳು ಇನ್ಕ್ಯುಬೇಟರ್ಗಳಲ್ಲಿ ಸಾಯುತ್ತಿವೆ. ವೈದ್ಯರು ಅರಿವಳಿಕೆ ಇಲ್ಲದೆ ಶಸ್ತ್ರ ಚಿಕಿತ್ಸೆಗಳನ್ನು ಮಾಡುತ್ತಿದ್ದಾರೆ. ಪ್ರತಿಯೊಂದು ಮೂಲಭೂತ ಮಾನವ ವ್ಯವಸ್ಥೆ – ಆರೋಗ್ಯ, ಶಿಕ್ಷಣ ಪೋಷಣೆ, ನೈರ್ಮಲ್ಯ ಕುಸಿದಿದೆ. ಜನರ ವ್ಯವಸ್ಥಿತ ವಿನಾಶವಾಗುತ್ತಿದೆ. ಹಸಿವಿನಿಂದ ಸಾವುಗಳು ಹೆಚ್ಚಾಗಲಿವೆ ಎಂದು ಅನೇಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಇತ್ತಿಚೆಗೆ ಇಸ್ರೇಲ್ ಇರಾನ್ ಮೇಲೆ ಜೂನ್ 13 ರಿಂದ ನಡೆಸಿದ 12 ದಿನಗಳ ಯುದ್ಧದಲ್ಲಿ ಇರಾನ್ನಲ್ಲಿ 600ರಿಂದ 1000 ಕ್ಕೂ ಹೆಚ್ಚುನಾಗರಿಕರ ಸಾವು ಸಂಭವಿಸಿದೆ. 4500ಕ್ಕಿಂತ ಹೆಚ್ಚು ಜನ ಗಾಯಗೊಂಡಿದ್ದಾರೆ.ಜಗತ್ತಿನ ವಿವಿಧ ಅಸಹಾಯಕ ರಾಷ್ಟ್ರಗಳ ಮೇಲೆ ಸಾಮ್ರಾಜ್ಯಶಾಹಿ ಶಕ್ತಿಗಳು ಯುದ್ಧ ಹೂಡುವ ಮೂಲಕ ಅಟ್ಟಹಾಸಗೈಯುತ್ತಿವೆ. ಅದರಲ್ಲೂಅಮೇರಿಕಾದಆಕ್ರಮಣಕಾರಿನೀತಿಅಪಾಯದಮುನ್ಸೂಚನೆನೀಡುತ್ತಿದೆ.2003 ರಲ್ಲಿಜಾರ್ಜ್ ಬುಷ್ ಇರಾಕ್ ಮೇಲೆಯುದ್ಧಸಾರಿದ್ದರು.ಹೆಚ್ಚಿನಪ್ರಮಾಣದತೈಲವನ್ನುತರಿಸಿಕೊಂಡುವ್ಯಾಪಾರೀಕರಣನಡೆಸಿತ್ತು.ಈಗ ಟ್ರಪ್ ಹುಚ್ಚಾಟಗಳನ್ನು ಜಗತ್ತನ್ನು ಎಲ್ಲಿಗೆ ತಂದು ನಿಲ್ಲಿಸುತ್ತವೆ ಎಂಬ ಭಯ ಎಲ್ಲರಲ್ಲೂ ಮನೆಮಾಡಿದೆ.
ಜಾಗತಿಕವಾಗಿ ಮೂರನೇ ಮಹಾಯುದ್ಧನಡೆಯುತ್ತದೇನೋ ಎಂಬ ಆತಂಕ ಮೂಡುತ್ತಿದೆ. ಯುದ್ಧಕ್ಕೆ ಪ್ರಮುಖ ಕಾರಣ ಯುದ್ಧವೇ.ಎಂದು ಸಿ. ಸಮಾಜ ಶಾಸ್ತ್ರಜ್ಞ ರೈಟ್ಮಿಲ್ಸ್ ಹೇಳಿದ್ದನ್ನು ಜಗತ್ತು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ. ಯುದ್ಧವು ರಾಜಕಾರಣಿಗಳ ಆಟವಾಗಿದೆ. ಬಾಡಿಗೆ ಹಂತಕರವ್ಯಾಪಾರಕ್ಕೆ ಇಳಿದಂತೆ ಸಾವುಗಳು ನಡೆಯುತ್ತಿವೆ. ಕವಿ ಆರ್.ವಿ. ಭಂಡಾರಿಯವರ ಆಶಯದಂತೆ ಪ್ರೀತಿಯ ಕಾಳನು ಬಿತ್ತ ಬಯಸುವೆವುಜಾಗ ಕೋಡುವಿರೇನು? ಹೃದಯದಿ ಜಾಗ ಕೋಡುವಿರೇನು? ಎಂದು ಸಾರಬೇಕಿದೆ.
ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಅಡಗಿರುವ ಕ್ರೂರ ಸತ್ಯಗಳು ಹೊರ ಬರಲಿ – ಕೆ.ಎಸ್. ವಿಮಲಾ Janashakthi Media
