ಪರೀಕ್ಷೆಗೆ ಹಾಜರಾಗಲು ಚಂಪಾವತಿ ನದಿ ಈಜಿದ ಯುವತಿ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ 21 ವರ್ಷದ ಮಹಿಳೆಯೊಬ್ಬರು ಪರೀಕ್ಷೆಗೆ ಹಾಜರಾಗಲು ಯಾವುದೇ ಸಾರಿಗೆ ಇಲ್ಲದೆ ತುಂಬಿ ಹರಿಯುವ ನದಿಯನ್ನು ಈಜಿಕೊಂಡು ದಾಟಿದ್ದಾರೆ. ತಡ್ಡಿ ಕಲಾವತಿ ಎಂದು ಗುರುತಿಸಲಾದ ಮಹಿಳೆ ವಿಶಾಖಪಟ್ಟಣಂನಲ್ಲಿ ಪರೀಕ್ಷೆ ತೆಗೆದುಕೊಳ್ಳಬೇಕಿತ್ತು. ಉಕ್ಕಿ ಹರಿಯುತ್ತಿದ್ದ ಚಂಪಾವತಿ ನದಿಯನ್ನು ತನ್ನ ಸಹೋದರ ಹಾಗೂ ಮತ್ತೊಬ್ಬ ಕುಟುಂಬದವರ ಸಹಾಯದಿಂದ ದಾಟಿದ್ದಾರೆ. ಮಹಿಳೆ ತನ್ನ ಕುಟುಂಬದ ಸದಸ್ಯರ ಸಹಾಯದಿಂದ ಹರಿಯುವ ನದಿಯನ್ನು ದಾಟಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ. ‌

ತಡ್ಡಿ ಕಲಾವತಿ ಮರ್ರಿವಲಸ ಗ್ರಾಮದ ನಿವಾಸಿಯಾಗಿದ್ದು, ವಿಜಯನಗರಂ ಜಿಲ್ಲೆಯ ಗಜಪತಿನಗರಂ ಮಂಡಲದಲ್ಲಿ ಘಟನೆ ನಡೆದಿದೆ. ಮೂಲಗಳ ಪ್ರಕಾರ, ತಡ್ಡಿ ಕಲಾವತಿ ಎರಡು ದಿನಗಳ ಹಿಂದೆ ತನ್ನ ಸ್ವಗ್ರಾಮಕ್ಕೆ ಬಂದಿದ್ದರು, ಶನಿವಾರ(ಸೆಪ್ಟಂಬರ್‌ 10) ಪರೀಕ್ಷೆ ಇದ್ದ ಕಾರಣ ಶುಕ್ರವಾರ ವಿಶಾಖಪಟ್ಟಣಕ್ಕೆ ಹೋಗಬೇಕಿತ್ತು. ಭಾರೀ ಮಳೆಯಿಂದಾಗಿ ಚಂಪಾವತಿ ನದಿಯು ಉಕ್ಕಿ ಹರಿದಿದ್ದು, ಗ್ರಾಮದಿಂದ ಬೇರೆಯೆಡೆಗೆ ಹೋಗಲು ಸಾರಿಗೆ ಸಂಪರ್ಕ ಕಡಿತಗೊಂಡಿತ್ತು.  ಅವರು ನದಿ ದಾಟಲು ಯಾವುದೇ    ವ್ಯವಸ್ತೆ ಇರದಿದ್ದರಿಂದ ಸಹೋದರರ ಸಹಾಯದಿಂದ ನದಿ ದಾಟಿದ್ದಾರೆ. ಆಕೆಗೆ ಈಜು ಗೊತ್ತಿಲ್ಲದ ಕಾರಣ ಆಕೆಯ ಸಹೋದರ ಮತ್ತು ಕುಟುಂಬದ ಮತ್ತೊಬ್ಬರು ಆಕೆಯನ್ನು ಹೆಗಲ ಮೇಲೆ ಹೊತ್ತು ನದಿ ದಾಟಲು ಸಹಾಯ ಮಾಡಿರುವುದು ಕಂಡು ಬಂದಿದೆ.

 

 

ಭಾರೀ ಮಳೆಯಿಂದಾಗಿ ಚಂಪಾವತಿ ನದಿಯು ಉಕ್ಕಿ ಹರಿಯುತ್ತಿತ್ತು, ಹಾಗೂ ಗ್ರಾಮದ ಸಂಪರ್ಕ ಕಡಿತಗೊಳಿಸಿತು, ಅಲ್ಲದೆ, ಅವಳನ್ನು ನದಿಯ ಇನ್ನೊಂದು ದಡಕ್ಕೆ ಕರೆದೊಯ್ಯಲು ಯಾವುದೇ ದೋಣಿಗಳೂ ಲಭ್ಯವಿರಲಿಲ್ಲ. ಬೇರೆ ದಾರಿಯಿಲ್ಲದೆ, ವಿದ್ಯಾರ್ಥಿನಿ ನದಿಗೆ ಈಳಿದಿದ್ದಾಳೆ. ಆಕೆಗೆ ಈಜು ಗೊತ್ತಿಲ್ಲದ ಕಾರಣ ಆಕೆಯ ಸಹೋದರ ಮತ್ತು ಕುಟುಂಬದ ಮತ್ತೊಬ್ಬರು ಆಕೆಯನ್ನು ಹಿಡಿದುಕೊಂಡು ನದಿ ದಾಟಲು ಸಹಾಯ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *