ಸ್ಯಾನ್ ಫ್ರಾನ್ಸಿಸ್ಕೋ: ಗಾಜಾದಲ್ಲಿ ಫೆಲೆಸ್ತೀನಿಯರ ವಿರುದ್ಧ ಜನಾಂಗೀಯ ಹತ್ಯೆಯ ಅಪರಾಧಗಳನ್ನು ಎಸಗುತ್ತಿದೆ ಎಂದು ಆರೋಪಿಸಿ ದಕ್ಷಿಣ ಆಫ್ರಿಕಾವು ಇಸ್ರೇಲ್ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಔಪಚಾರಿಕವಾಗಿ ಪ್ರಕರಣ ದಾಖಲಿಸಿದೆ. ಸುಮಾರು ಮೂರು ತಿಂಗಳಿನಿಂದ ಗಾಜಾದಲ್ಲಿ ಪಟ್ಟುಬಿಡದ ಬಾಂಬ್ ದಾಳಿ ನಡೆಸುತ್ತಿರುವ ಇಸ್ರೇಲ್ ಈ ವರೆಗೆ ಸುಮಾರು 21,500 ಕ್ಕೂ ಹೆಚ್ಚು ಫ್ಯಾಲೆಸ್ತೀನಿಯನ್ನರನ್ನು ಹತ್ಯೆ ಮಾಡಿದೆ ಮತ್ತು ಪ್ರದೇಶದಾದ್ಯಂತ ವ್ಯಾಪಕ ವಿನಾಶ ಉಂಟುಮಾಡಿದೆ.
ಶುಕ್ರವಾರದಂದು ಐಸಿಜೆಗೆ ಸಲ್ಲಿಸಿದ ಅರ್ಜಿಯಲ್ಲಿ, ಗಾಜಾದಲ್ಲಿ ಇಸ್ರೇಲ್‌ನ ಕ್ರಮಗಳನ್ನು “ನರಹತ್ಯೆಯ” ಎಂದು ದಕ್ಷಿಣ ಆಫ್ರಿಕಾ ಪ್ರತಿಪಾದಿಸಿದೆ. “ಇಸ್ರೇಲ್ ಪ್ಯಾಲೇಸ್ಟಿನಿಯನ್ ರಾಷ್ಟ್ರೀಯ, ಜನಾಂಗೀಯ ಮತ್ತು ಜನಾಂಗೀಯ ಗುಂಪಿನ ಗಣನೀಯ ಭಾಗವನ್ನು ನಾಶಪಡಿಸುವ ಉದ್ದೇಶವನ್ನು ಹೊಂದಿದೆ” ಎಂದು ಪ್ರಕರಣದಲ್ಲಿ ಆರೋಪಿಸಿದೆ. ಇಸ್ರೇಲ್ ಗಾಝಾದಲ್ಲಿ ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದು, ಅವರಿಗೆ ಗಂಭೀರ ದೈಹಿಕ ಮತ್ತು ಮಾನಸಿಕ ಹಾನಿಯನ್ನುಂಟುಮಾಡುತ್ತಿದೆ ಎಂದು ದಕ್ಷಿಣ ಆಫ್ರಿಕಾ ಹೇಳಿದೆ.
ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ 5 ಸಾವಿರ ವೇತನ ಹೆಚ್ಚಳಕ್ಕೆ ಸರ್ಕಾರ ತೀರ್ಮಾನ
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರು ಗಾಜಾ ಮತ್ತು ಆಕ್ರಮಿತ ಪಶ್ಚಿಮ ದಂಡೆಯ ಬಗ್ಗೆಗಿನ ಇಸ್ರೇಲ್‌ನ ನೀತಿಗಳು ತಮ್ಮ ದೇಶದ ಈ ಹಿಂದಿನ ವರ್ಣಭೇದ ನೀತಿಯ ಆಡಳಿತದೊಂದಿಗೆ ಸಮೀಕರಿಸಿದ್ದಾರೆ. ಆ ವೇಳೆ ದಕ್ಷಿಣ ಆಫ್ರಿಕಾದಲ್ಲಿ ಹೇರಲಾಗಿದ್ದ ಜನಾಂಗೀಯ ಪ್ರತ್ಯೇಕತೆಯ ಹೋಲಿಕೆಯನ್ನು ಅವರು ಎತ್ತಿ ತೋರಿಸಿದ್ದಾರೆ. ಈ ಹೋಲಿಕೆ ಮಾಡುವ ಮೂಲಕ ಗಾಜಾ ವಿಚಾರದಲ್ಲಿ ದಕ್ಷಿಣ ಆಫ್ರಿಕಾದ ನಿಲುವಿಗೆ ಐತಿಹಾಸಿಕ ಸಂದರ್ಭವನ್ನು ಸೇರಿದ್ದಾರೆ.
ಹಲವಾರು ಮಾನವ ಹಕ್ಕುಗಳ ಸಂಘಟನೆಗಳು ಈ ಹಿಂದೆ ಪ್ಯಾಲೆಸ್ಟೀನಿಯನ್ನರ ಬಗೆಗಿನ ಇಸ್ರೇಲಿ ನೀತಿಗಳು ವರ್ಣಭೇದ ನೀತಿಗೆ ಸಮಾನವಾಗಿದೆ ಎಂದು ಪ್ರತಿಪಾದಿಸುತ್ತಲೆ ಇದ್ದಾರೆ. ದಕ್ಷಿಣ ಆಫ್ರೀಕಾ ಈಗ ಮಾಡಿರುವ ಆರೋಪಗಳು ಕೂಡಾ ಇದಕ್ಕೆ ಮತ್ತಷ್ಟು ಬಲ ನೀಡಿದೆ. ದಕ್ಷಿಣ ಆಫ್ರಿಕಾದ ಈ ಕ್ರಮವು ಗಾಝಾ ವಿಚಾರದಲ್ಲಿ ಅಂತಾರಾಷ್ಟ್ರೀಯ ಹೊಣೆಗಾರಿಕೆಯನ್ನು ಬಯಸುತ್ತಿದೆ.
ಐಸಿಜೆಯಲ್ಲಿನ ಯಾವುದೇ ಪ್ರಕರಣವು ಇತ್ಯರ್ಥಗೊಳ್ಳಲು ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ಕದನ ವಿರಾಮಕ್ಕೆ ಕರೆ ನೀಡುವ ಉದ್ದೇಶದಿಂದ “ತಾತ್ಕಾಲಿಕ ಕ್ರಮಗಳನ್ನು” ಕೈಗೊಳ್ಳಲು ಮುಂದಿನ ಕೆಲವು ದಿನಗಳಲ್ಲಿ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಬೇಕು ಎಂದು ದಕ್ಷಿಣ ಆಫ್ರಿಕಾ ತುರ್ತು ಕರೆ ನೀಡಿದೆ. ದಕ್ಷಿಣ ಆಫ್ರೀಕಾದ ತಾತ್ಕಾಲಿಕ ಕ್ರಮಗಳ ವಿನಂತಿಯು ಜೆನೊಸೈಡ್ ಕನ್ವೆನ್ಷನ್ ಅಡಿಯಲ್ಲಿ ಪ್ಯಾಲೆಸ್ಟೀನಿ ಜನರ ಹಕ್ಕುಗಳಿಗೆ ಮತ್ತಷ್ಟು ಹಾನಿಯಾಗದಂತೆ ರಕ್ಷಿಸಲು ಕೈಗೊಳ್ಳುವ ಕಾನೂನು ಕ್ರಮವಾಗಿದೆ.
ವಿಡಿಯೊ ನೋಡಿ: ಸಂಸದರನ್ನು ಅಮಾನತು ಮಾಡಿ ಕರಾಳ ಶಾಸನಕ್ಕೆ ಅನುಮೋದನೆ: ನವ ವಸಾಹತೀಕರಣದ ಮತ್ತೊಂದು ರೂಪ!? Janashakthi Media