ಸಿಪಿಐ(ಎಂ) ಮಹಾಧಿವೇಶನ : ಗಾಜಾ ನರಮೇಧವನ್ನು ಖಂಡಿಸಿ ನಿರ್ಣಯ ಅಂಗೀಕಾರ

ಪ್ಯಾಲೆಸ್ಟೈನಿಯರು ಪರಂಪರೆಯಿಂದ ಬಳಸುವ ಕೆಫಿಯೆ (ಶಾಲು) ಧರಿಸಿ ಐಕ್ಯತೆ ಪ್ರದರ್ಶಿಸಿದ ಸಿಪಿಐ(ಎಂ) ಗಾಜಾ

ಮಧುರೈನಲ್ಲಿ ನಡೆಯುತ್ತಿರುವ ಸಿಪಿಐ(ಎಂ) ಪಕ್ಷದ 24ನೇ ಮಹಾಧಿವೇಶನದಲ್ಲಿ ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು.

ಈ ನಿರ್ಣಯದ ಮೂಲಕ, ಸಿಪಿಐ(ಎಂ) ಪಕ್ಷವು ಪ್ಯಾಲೆಸ್ಟೈನಿಯ ಜನರೊಂದಿಗೆ ತನ್ನ ಐಕ್ಯತೆಯನ್ನು ವ್ಯಕ್ತಪಡಿಸಿದೆ.

ಇದನ್ನು ಓದಿ :-ಮೇ 20ರ ಸಾರ್ವತ್ರಿಕ ಮುಷ್ಕರಕ್ಕೆ ಸಂಪೂರ್ಣ ಮತ್ತು ಸಕ್ರಿಯ ಬೆಂಬಲ -ಸಿಪಿಐ(ಎಂ) 24ನೇ ಮಹಾಧಿವೇಶನದ ನಿರ್ಣಯ

ಸಮ್ಮೇಳನದಲ್ಲಿ ಪಾಲ್ಗೊಂಡ ಪ್ರತಿನಿಧಿಗಳು ಪ್ಯಾಲೆಸ್ಟೈನಿಯರು ಪರಂಪರೆಯಿಂದ ಬಳಸುವ ಕೆಫಿಯೆ (ಶಾಲು) ಧರಿಸಿ, ಪ್ಯಾಲೆಸ್ಟೈನ್ ಜನರೊಂದಿಗೆ ತಮ್ಮ ಐಕ್ಯತೆಯನ್ನು ಪ್ರದರ್ಶಿಸಿದರು. ಈ ಕಾರ್ಯವು ಪ್ಯಾಲೆಸ್ಟೈನಿಯ ಜನರ ಹೋರಾಟಕ್ಕೆ ಬೆಂಬಲ ಸೂಚಿಸುವ ಸಂಕೇತವಾಗಿದೆ.

ಈ ವೇಳೆ ಕೇರಳ ಸಿಎಂ ಪಿಣರಾಯ್ ವಿಜಯನ್, ಸಿಪಿಐಎಂ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾಕಾರಟ್ ಸೇರಿದಂತೆ ಸಿಪಿಎಂ ನಾಯಕರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *