‘ಗಾಜಾದ ಅನ್ಯಾಯದ ಯುದ್ಧ ನಿಲ್ಲಿಸಿ’ | ಅಲಿಪ್ತ ಚಳವಳಿಯ ಸಮ್ಮೇಳನದಲ್ಲಿ ಆಫ್ರಿಕಾ ನಾಯಕರ ಒತ್ತಾಯ

ಕಂಪಾಲಾ: ಗಾಜಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವಂತೆ  ಉಗಾಂಡಾದಲ್ಲಿ ನಡೆದ ಅಲಿಪ್ತ ಚಳವಳಿಯ (NAM) ಸಮ್ಮೇಳನದಲ್ಲಿ ಆಫ್ರಿಕಾದ ನಾಯಕರು ಒತ್ತಾಯಿಸಿದ್ದಾರೆ. ಈ ಯುದ್ಧವು ನಾಗರಿಕರನ್ನು ಕೊಲ್ಲುತ್ತಿದ್ದು, ನಡೆಯುತ್ತಿರುವ ಯುದ್ಧವು ಅನೈತಿಕ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಸಂಘರ್ಷ ಪ್ರಾರಂಭವಾದ ನಂತರ 24,400 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ. ಅಲ್ಲದೆ, ಗಾಜಾದಲ್ಲಿರುವ 23 ಲಕ್ಷ ಜನರಲ್ಲಿ ಕಾಲು ಭಾಗದಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಉಗಾಂಡಾದ ಕಂಪಾಲಾದಲ್ಲಿ ನಡೆದ ಅಲಿಪ್ತ ಚಳವಳಿಯ ಮಾತನಾಡಿದ ಆಫ್ರಿಕನ್ ಯೂನಿಯನ್ ಕಮಿಷನ್ ಅಧ್ಯಕ್ಷ ಮೌಸಾ ಫಕಿ ಮಹಮತ್ ಅವರು, ಪ್ಯಾಲೆಸ್ತೀನಿಯನ್ನರ ವಿರುದ್ಧದ “ಅನ್ಯಾಯ ಯುದ್ಧ” ವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಒತ್ತಾಯಿಸಿದ್ದು, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಸಂಘರ್ಷ ಕೊನೆಯಾಗಲು ಎರಡು ರಾಷ್ಟ್ರಗಳ ರಚನೆಯೆ ಪರಿಹಾರ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತ್ ಜೋಡೋ ನ್ಯಾಯ್ ಯಾತ್ರೆ | ಮಾರ್ಗ ಬದಲಿಸಿದ ಕಾರಣ ನೀಡಿ ಎಫ್‌ಐಆರ್‌ ದಾಖಲಿಸಿದ ಅಸ್ಸಾಂನ ಬಿಜೆಪಿ ಸರ್ಕಾರ!

ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ಪ್ಯಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್‌ ನಡೆಸಿದ ದಾಳಿಯ ಸಮಯದಲ್ಲಿ ಸುಮಾರು 1,200 ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಹಮಾಸ್ ಸುಮಾರು 250 ಜನರನ್ನು ಒತ್ತೆಯಾಳಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯ ನಂತರ ಇಸ್ರೇಲ್ ಪ್ಯಾಲೆಸ್ತೀನಿನ ನಾಗರಿಕೆ ಮೇಲೆ ದಾಳಿ ಮಾಡುತ್ತಿದ್ದು, ಆಸ್ಪತ್ರೆ, ಶಾಲೆ ಮತ್ತು ನಿರಾಶ್ರಿತರ ಶಿಬಿರದ ಮೇಲೆ ಕೂಡಾ ದಾಳಿ ನಾಗರಿಕೆ ಹತ್ಯಾಕಾಂಡ ನಡೆಸುತ್ತಿದೆ.

ಎರಡನೇ ಮಹಾಯುದ್ಧದ ನಂತರ ಪ್ರಾರಂಭವಾದ ರಷ್ಯಾ ಮತ್ತು ಅಮೇರಿಕಾ ನಡುವಿನ ಶೀತಲ ಸಮರದಲ್ಲಿ ಯಾವುದೆ ದೇಶದ ಪರವಾಗಿ ಇರದ 120 ದೇಶಗಳ ಒಕ್ಕೂಟವಾದ ಅಲಿಪ್ತ ಚಳವಳಿಯ ಸಮ್ಮೇಳನದಲ್ಲಿ ಮಾತನಾಡಿದ ಮಹಾಮತ್ ಅವರು, ಪ್ಯಾಲೆಸ್ತೀನಿಯನ್ನರಿಗೆ ಅಂತರರಾಷ್ಟ್ರೀಯ ನ್ಯಾಯಕ್ಕಾಗಿ ಒತ್ತಾಯಿಸಲು 120 ಸದಸ್ಯ ರಾಷ್ಟ್ರಗಳನ್ನು ಕೇಳಿಕೊಂಡಿದ್ದಾರೆ. ಅವರು ಒಂದು ವಾರದ ನಡೆದ ಸಮ್ಮೇಳನದಲ್ಲಿ ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡುತ್ತಿದ್ದರು.

ಮಹಾಮತ್ ಅವರ ಹೇಳಿಕೆಯನ್ನೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಕೂಡಾ ಪುನರುಚ್ಛರಿಸಿ, ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಪ್ಯಾಲೆಸ್ತೀನ್ ಜನರ ಮೇಲೆ ನಡೆಸುತ್ತಿರುವ ದಾಳಿಗೆ ನ್ಯಾಯಯುತ ಪರಿಹಾರದ ಕುರಿತು ಮಾತುಕತೆಗಳನ್ನು ಪುನರಾರಂಭಿಸಲು ಕರೆ ನೀಡಿದ್ದಾರೆ. ಗಾಜಾದಲ್ಲಿ ವಾಸಿಸುವ ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸಲು ನೆರವು ನೀಡಲು ಮತ್ತು ಅವರಿಗೆ ಮೂಲಭೂತ ಸೇವೆಗಳನ್ನು ಒದಗಿಸಲು ಯಾವುದೆ ಅಡೆತಡೆಯಿಲ್ಲದ ಪ್ರವೇಶಕ್ಕೆ ಅನುಮತಿ ನೀಡುವಂತೆ ಅವರು ಕರೆ ನೀಡಿದ್ದಾರೆ.

ಇದನ್ನೂ ಓದಿ: ಬಾಬರಿ ಮಸೀದಿ ಪ್ರಕರಣದ ತೀರ್ಪು ನೀಡಿದ್ದ 5 ನ್ಯಾಯಮೂರ್ತಿಗಳಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ!

ಈ ನಡುವೆ, ದಕ್ಷಿಣ ಆಫ್ರಿಕಾವು ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡದ ವಿರುದ್ಧ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ಗಾಜಾದಲ್ಲಿ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸುವಂತೆ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯವನ್ನು ಕೇಳಿದೆ. “ಪ್ಯಾಲೆಸ್ತೀನ್ ಜನರ ಹಕ್ಕುಗಳಿಗೆ ಮತ್ತಷ್ಟು ತೀವ್ರ ಮತ್ತು ಸರಿಪಡಿಸಲಾಗದ ಹಾನಿಯಿಂದ ರಕ್ಷಿಸಲು ಇದು ಅವಶ್ಯಕವಾಗಿದೆ” ಎಂದು ರಮಾಫೋಸಾ ಹೇಳಿದ್ದಾರೆ.

ಹಮಾಸ್‌ನೊಂದಿಗೆ 100 ದಿನಗಳ ಯುದ್ಧದ ನಂತರ ಗಾಜಾದಲ್ಲಿ ಕದನ ವಿರಾಮವನ್ನು ಜಾರಿಗೊಳಿಸಲು ಇಸ್ರೇಲ್ ಮೇಲೆ ಒತ್ತಡ ಹೇರಲು ಪ್ಯಾಲೆಸ್ತೀನ್ ರಾಯಭಾರಿ ರೈದ್ ಮನ್ಸೂರ್ ಅಲಿಪ್ತ ಚಳವಳಿಯ ಸದಸ್ಯರಿಗೆ ಸೋಮವಾರದಂದು ಸಮ್ಮೇಳನದ ಪ್ರಾರಂಭದಲ್ಲಿ ಕರೆ ನೀಡಿದ್ದರೆ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಮತ್ತು ಭದ್ರತಾ ಮಂಡಳಿಯ ನಿರ್ಣಯಗಳ ಹೊರತಾಗಿಯೂ ಕದನ ವಿರಾಮದ ತೀರ್ಮಾನ ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ ಎಂದು ತಮ್ಮ ಆರಂಭಿಕ ಭಾಷಣದಲ್ಲಿ ರೈದ್ ಮನ್ಸೂರ್ ಹೇಳಿದ್ದಾರೆ. ಗಾಜಾದ ಮೇಲಿನ ಇಸ್ರೇಲ್‌ನ ಮಿಲಿಟರಿ ದಾಳಿಯನ್ನು ವರ್ಣಭೇದ ನೀತಿಗೆ ಅವರು ಹೋಲಿಸಿದ್ದಾರೆ.

ವಿಡಿಯೊ ನೋಡಿ: ಸಂಕ್ರಾಂತಿ, ಸಂಕ್ರಮಣ ಎಂದರೇನು? ಉತ್ತರಾಯಣ ಪುಣ್ಯಕಾಲ ನಿಜವೇ? – ಚಿಂತಕ ಜಿ.ಎನ್. ನಾಗರಾಜ ರವರ ವಿಶ್ಲೇಷಣೆ

Donate Janashakthi Media

Leave a Reply

Your email address will not be published. Required fields are marked *