ಗವಿಮಠ ಜಾತ್ರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳು ರದ್ದು

ಕೊಪ್ಪಳ: ಇಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿದ್ದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ 2022ರ ಸಾಲಿನ ಜಾತ್ರೆಯನ್ನು ರದ್ದುಪಡಿಸಲಾಗಿದೆ. ಕೋವಿಡ್‌ ಸಾಂಕ್ರಾಮಿಕತೆ ಹರಡುವಿಕೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಶ್ರೀ ಗವಿಸಿದ್ದೇಶ್ವರ ಸಂಸ್ಥಾನ ಶ್ರೀ ಗವಿಮಠ ಪ್ರಕಟಣೆಯನ್ನು ನೀಡಿದೆ.

ಸಂಪ್ರದಾಯ ಮುರಿಯದಂತೆ ಸರಳವಾಗಿ ಕೇವಲ ಶ್ರೀಮಠದ ಧಾರ್ಮಿಕ ವಿಧಿ ವಿಧಾನಗಳನ್ನು ಮಾತ್ರ ಆಚರಿಸಿ ಹಾಗೂ ಕೃರ್ತು ಗದ್ದುಗೆಯ ದರ್ಶನಕ್ಕೆ ಆವಕಾಶ ಕಲ್ಪಿಸಿ ಉಳಿದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಪೂಜ್ಯರು, ಶ್ರೀಮಠದ ಸದ್ಬಕ್ತರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ಶ್ರೀಮಠದ ಈ ಅಧಿಕೃತ ಪ್ರಕಟಣೆಗೆ ಸದ್ಬಕ್ತರೆಲ್ಲರೂ ಸಹರಿಸಬೇಕೆಂದು ಸಂಸ್ಥಾನ ಶ್ರೀಗವಿಮಠದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Donate Janashakthi Media

One thought on “ಗವಿಮಠ ಜಾತ್ರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳು ರದ್ದು

  1. ಅತ್ಯುತ್ತಮ ವಿಷಯ ತಿಳಿಸಿ ಓದುಗರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ನನ್ನ ಅಚ್ಚುಮೆಚ್ಚಿನ ಜನಶಕ್ತಿ ಮೀಡಿಯಾ.

Leave a Reply

Your email address will not be published. Required fields are marked *