ರಾಮದುರ್ಗ : ಚರಂಡಿಯಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿದ್ದರು ಅದನ್ನು ಕಂಡು ಕಾಣದಂತೆ ಇರುವ ಸುರೇಬಾನ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಜನ ಬುದ್ದಿ ಹೇಳುವಂತೆ ಬುದ್ಧಿಮಾಂದ್ಯ ವ್ಯಕ್ತಿ ಕಟ್ಟಿಗೆ ಹಾಗೂ ಕೈಗಳಿಂದ ಚರಂಡಿಯಲ್ಲಿ ಸಿಲುಕಿದ ಕಸವನ್ನು ತಗೆದು ಮಾನವೀಯತೆ ಮೆರೆದಿದ್ದಾನೆ.
ರಾಮದುರ್ಗ ತಾಲ್ಲೂಕಿನ ಸುರೇಬಾನ ಗ್ರಾಮ ಪಂಚಾಯತಿ ವ್ಯಾಪ್ತಿಯ ಶುಕ್ರವಾರ ಪೇಟೆಯಲ್ಲಿ ಈ ಘಟನೆ ನಡೆದಿದೆ. ಚರಂಡಿಯಲ್ಲಿ ಸಿಲುಕಿದ ಕಸದಿಂದ ರಸ್ತೆಯ ತುಂಬಾ ಕೊಳಚೆ ನೀರು ಹರಿಯುತ್ತಿದ್ದದನ್ನು ಕಂಡು ಸುರೇಬಾನ ಗ್ರಾಮದ ದಾರಿಹೋಕ ಬುದ್ಧಿಮಾಂದ್ಯ ವ್ಯಕ್ತಿ ಅದನ್ನು ಸ್ವಚ್ಛ ಗೊಳಿಸಿ ಸಾರ್ವಜನಿಕರಿಗೆ ಸಂಚಾರಕ್ಕೆ ಸುಗಮಗೊಳಿಸಿ ಮಾನವೀಯತೆ ಮೆರೆದಿದ್ದಾನೆ.
ಇದರಿಂದ ಗೊತ್ತಾಗುತ್ತಿದೆ ಬುದ್ಧಿಮಾಂದ್ಯರು ಯಾರು? ಸುರೇಬಾನ ಗ್ರಾಮ ಪಂಚಾಯತಿ ಅಧಿಕಾರಿಗಳೊ ಅಥವಾ ಸ್ವಚ್ಛ ಗೊಳಿಸಿದ ಆ ವ್ಯಕ್ತಿಯೋ? ಅಥವಾ ಅದನ್ನು ನೋಡಿಯೂ ಸುಮ್ಮನೆ ಮೂಗು ಮುಚ್ಚಿಕೊಂಡು ಓಡಾಡುವ ಸಾರ್ವಜನಿಕರಾ? ಇನ್ನಾದರೂ ಇಂತಹ ಘಟನೆಯಿಂದ ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ನಾಗರಿಕರಿಗೆ ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೆಲಸ ನಿರ್ವಹಿಸಬೇಕಾಗಿದೆ.
ವರದಿ: ಶ್ರೀಕಾಂತ್ ಪೂಜಾರ್ ರಾಮದುರ್ಗ