ಒಡಿಶಾ|ಯುವತಿ ಮೇಲೆ ಗ್ಯಾಂಗ್ ರೇಪ್: 8 ಆರೋಪಿ ಬಂಧನ

ಒಡಿಶಾ: ರಾಜ್ಯದಲ್ಲಿ 20 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.

ಯುವತಿ ತನ್ನ ಗೆಳೆಯನ ಜೊತೆ ರಾಜಾ ಫೆಸ್ಟಿವಲ್ ಆಚರಣೆಗಾಗಿ ಒಡಿಶಾದ ಗೋಪಾಲಪುರ ಸೀ ಬೀಚ್ ಗೆ ತೆರಳಿದ್ದಳು. ಈ ವೇಳೆ ಮೂವರು ಬೈಕ್ ಗಳಲ್ಲಿ ಬಂದ ಹತ್ತು ಜನರ ಗುಂಪು, ಯುವತಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಆತನನನ್ನು ಕಟ್ಟಿಹಾಕಿ, ಯುವತಿಯನ್ನು ಹೊತ್ತೊಯ್ದು, ಮನೆಯೊಂದರಲ್ಲಿ ಗ್ಯಾಂಗ್ ರೇಪ್ ನಡೆಸಿದ್ದರು.

ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಪತನ: 18 ಜನರ ಗುರುತು ಇನ್ನೂ ಪತ್ತೆಯಾಗಿಲ್ಲ!

ಕೃತ್ಯದ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕಿದ್ದರು.

ಯುವತಿಯ ಗೆಳೆಯ ಅಲ್ಲಿಂದ ತಪ್ಪಿಸಿಕೊಂಡು ಗೋಪಾಲಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ. ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಸದ್ಯ 8 ಆರೋಪಿಗಳನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಇದನ್ನೂ ನೋಡಿ: ಜನ ಸಂಖ್ಯೆಗೆ ಸಂಬಂಧಿಸಿದಂತೆ ಮಾತ್ರ ಮರು ಸಮೀಕ್ಷೆ : ಸಿದ್ದರಾಮಯ್ಯ | Janashakthi Media

Donate Janashakthi Media

Leave a Reply

Your email address will not be published. Required fields are marked *