ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ ರಕ್ಷಣೆಗೆ ನಿಂತ ಅಧಿಕಾರಿಗಳು
ಯಲಬುರ್ಗಾ : ತಾಲೂಕಿನ ಗೆದಗೇರಿ ಗ್ರಾಮದಲ್ಲಿ ನಡೆಯುತ್ತಿರುವ “ಮನೆ ಮನೆಗೆ ಗಂಗೆ ಶುದ್ಧ ನೀರು’ ಪೂರೈಕೆ ಕಾಮಗಾರಿಯನ್ನು ಸಂಪೂರ್ಣ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿದ್ದಾರೆ. ಮೇಲಾಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಗೆದಗೇರಿ ಗ್ರಾಮಸ್ಥರ ಆರೋಪವಾಗಿದೆ.
ಪ್ರತಿಯೊಂದು ಮನೆಗಳಿಗೆ ಶುದ್ಧ ನೀರು ಪೂರೈಸಲು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಕೋಟಿಗಟ್ಟಲೆ ಅನುದಾನ ಮಂಜೂರು ಮಾಡಿಸಿದ್ದು, ತಾಲೂಕು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಕಳೆದ ಆರು ತಿಂಗಳಿಂದ ಕಾಮಗಾರಿ ನಡೆಯುತ್ತಿದೆ.
ಮನೆ ಮನೆಗೆ ಸರಬರಾಜು ಮಾಡುವ ಪೈಪ್ ಲೈನ್ ಕಾಮಗಾರಿ ಅಂದಾಜು ಪತ್ರಿಕೆ ಪ್ರಕಾರ ಮಾಡದೆ. ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಿದ್ದಾರೆ. ಸಿಸಿ ರಸ್ತೆ ಒಡೆದು, ಅದಕ್ಕೆ ಮಣ್ಣು ತುಂಬಿ ಮರಳಿ ಸಿಸಿ ಹಾಕಬೇಕು. ಸರಿಯಾದ ಸಿಮೆಂಟ್ ಕಡಿ ಬಳಸದೆ ಕಳಪೆ ಮಟ್ಟದ ಸಿಸಿ ಮಾಡಿದ್ದಾರೆ. ಕೆಲವು ಕಡೆ ಈಗಾಗಲೇ ಕಾಲಿನಿಂದ ರಸ್ತೆ ತಿಕ್ಕಿದರೆ ಸಿಮೆಂಟ್ ಕಡಿ ಕಿತ್ತುಬರುತ್ತದೆ. ಗ್ರಾಮದಲ್ಲಿ ಸಂಪೂರ್ಣ ಕಾಮಗಾರಿ ಕಳಪೆ ಮಾಡಿದರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗುತ್ತಿಲ್ಲ. ಈ ಕಾಮಗಾರಿಯಲ್ಲಿ ಅಧಿಕಾರಿಗಳು ಗುತ್ತಿಗೆದಾರರ ಜೋಡಿ ಶಾಮೀಲಾಗಿದ್ದು ಅನುಮಾನ ಮೂಡಿಸುತ್ತಿದೆ ಎಂದು ಗ್ರಾಮಸ್ಥರು ಆರೋಪ. ಗ್ರಾಮದ ಪ್ರಜ್ಞಾವಂತರು ಕಾಮಕಾರಿಯನ್ನು ಸಂಪೂರ್ಣ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ನಮ್ಮ ಗ್ರಾಮದಲ್ಲಿ ಜಲ ಜೀವನ ಮಿಷನ್ ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿ ಮಾಡಿದ್ದು. ಗ್ರಾಮಸ್ಥರು ಮೇಲಾಧಿಕಾರಿಗಳ ಗಮನಕ್ಕೆ ತಂದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವಲ್ಲಿ ವಿಫಲರಾಗಿದ್ದಾರೆ ರಸ್ತೆಗೆ ಸರಿಯಾಗಿ ಸಿಸಿ ಹಾಕದೆ . ಬೇಕಾಬಿಟ್ಟಿಯಾಗಿ. ಹಾಕಲಾಗಿದೆ. ಕೆಲವು ಕಡೆ ಈಗಾಗಲೇ ಕಿತ್ತು ಹೋಗಿದೆ ಕೂಡಲೇ ಗುಣಮಟ್ಟದ ಕಾಮಗಾರಿ ಕೈಗೊಂಡು, ಸಮರ್ಪಕ ರಸ್ತೆ ನಿರ್ಮಿಸಿಕೊಡಬೇಕು ಗ್ರಾಮಸ್ಥ ಶರಣಪ್ಪ ಗೆದಗೇರಿ ಆಗ್ರಹಿಸಿದ್ದಾರೆ.
ವರದಿ: ದೇವರಾಜ ದೊಡ್ಮನಿ