ಸ್ನೇಹಿತನ ವಿವಾಹಕ್ಕೆ ತೆರಳಿದ್ದ ಯುವಕ: ಮದುವೆ ಸಮಾರಂಭದ ವೇದಿಕೆಯಲ್ಲೇ ಕುಸಿದು ಬಿದ್ದು ಮೃತ

ಆಂಧ್ರಪ್ರದೇಶ:  ತನ್ನ ಸ್ನೇಹಿತನ ವಿವಾಹಕ್ಕೆ ತೆರಳಿದ್ದ ಗೆಳೆಯನೋರ್ವ ಮದುವೆ ಸಮಾರಂಭದ ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ನಿದರ್ಶನ ಎಂಬಂತೆ ತನ್ನ ಸ್ನೇಹಿತನ ಮದುವೆ ಸಮಾರಂಭಕ್ಕೆ ತೆರಳಿದ್ದ ಗೆಳೆಯನೋರ್ವ ಮದುವೆ ಸಮಾರಂಭದ ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ನಡೆದಿದೆ.

ಇದನ್ನೂ ಓದಿ : ಆಸ್ತಿ ವಿಚಾರದಲ್ಲಿ ಅಕ್ಕ ತಮ್ಮನ ನಡುವೆ ಕಲಹ: ಅಕ್ಕನನ್ನು ಮನೆಯಿಂದ ಹೊರಗಟ್ಟಿದ ತಮ್ಮ

ಬೆಂಗಳೂರಿನ ಅಮೆಜಾನ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ವಂಶಿಕುಮಾರ್ ಮೃತ ದುರ್ದೈವಿ. ಇತ್ತೀಚಿಗೆ ವಂಶಿ ಆಂದ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೃಷ್ಣಗಿರಿ ಮಂಡಲದ ಪೆನುಮಾಡದಲ್ಲಿ ತನ್ನ ಸ್ನೇಹಿತನ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಈ ವೇಳೆ ತನ್ನ ಸಹ ಸ್ನೇಹಿತರ ಜೊತೆ ವೇದಿಕೆಗೆ ತರಳಿ ನವ ದಂಪತಿಗಳಿಗೆ ಉಡುಗೊರೆ ನೀಡಿದ್ದಾರೆ. ನವದಂಪತಿಗಳು ಸಂಭ್ರಮದಿಂದ ಉಡುಗೊರೆಯ ಕವರ್ ತೆರೆಯುತ್ತಿದ್ದ ವೇಳೆ ವೇದಿಕೆ ಮೇಲಿದ್ದ ವಂಶಿಕುಮಾರ್ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾನೆ ಇದನ್ನು ಗಮನಿಸಿದ ಸ್ನೇಹಿತರು ತಕ್ಷಣ ಆತನನ್ನು ಹಿಡಿದಿದ್ದಾರ ಬಳಿಕ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ದುರಾದೃಷ್ಟವಶಾತ್ ತಪಾಸಣೆ ನಡೆಸಿದ ವೈದ್ಯರು ವಂಶಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ನೋಡಿ : ದಲತರಿಂದ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು Janashakthi Media

Donate Janashakthi Media

Leave a Reply

Your email address will not be published. Required fields are marked *