ಬಳ್ಳಾರಿ: ಲಕ್ಕಿ ಡಿಪ್ ಹೆಸರಲ್ಲಿ ಸಾರ್ವಜನಿಕರಿಂದ ಹಣ ಪಡೆದು, ಚಂದಾದರರಿಗೆ ವಂಚಿಸಿರುವ ಘಟನೆ ಬಳ್ಳಾರಿಯ ಸಿರುಗುಪ್ಪದಲ್ಲಿ ನಡೆದಿದೆ.
ಗಣಿ ಜಿಲ್ಲೆಯ ಭತ್ತದ ನಾಡು ಎಂದು ಹೆಸರಾಗಿರುವ ಸಿರುಗುಪ್ಪದಲ್ಲಿ ಲಕ್ಕಿ ಡೀಪ್ ಹೆಸರಿನಲ್ಲಿ ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ. ಶ್ರೀ ದಿವ್ಯಜ್ಯೋತಿ ಲಕ್ಕಿ ಸ್ಟೀಮ್ ಹೆಸರಿನ ಮೂಲಕ ಗ್ರಾಹಕರನ್ನು ನಂಬಿಸಿದ ವಿನೋದ್ ಎನ್ನುವ ವ್ಯಕ್ತಿಯು, ನಾಲ್ಕು ಜನರ ತಂಡವನ್ನು ಕಟ್ಟಿಕೊಂಡು ಈ ಸ್ಟೀಮ್ ಪ್ರಾರಂಭಿಸಿದ್ದಾನೆ. ನಂತರ ಈ ಲಕ್ಕಿ ಡಿಪ್ ಚೀಟಿಯ ಸದಸ್ಯತ್ವ ನೊಂದಾಣಿ ಮಾಡಿಸಲು ಮತ್ತು ಸಾರ್ವಜನಿಕರನ್ನು ಸೆಳೆಯಲು ಸುಮಾರು 38 ಜನ ಏಜಂಟರ್ಗಳನ್ನು ನೇಮಿಸಿಕೊಂಡಿದ್ದಾರೆ. ಅವರಿಗೆ ಪ್ರತಿ ಕಾರ್ಡ್‌ಗೆ ಇಂತಿಷ್ಟು ಕಮೀಷನ್ ಎಂದು ಹೇಳಿ ವಂಚನೆಗೆ ಇಳಿದಿದ್ದಾನೆ.
ಈ ಲಕ್ಕಿ ಸ್ಕಿಮ್ ನಿಂದಾಗಿ ನಮಗೂ ಅಷ್ಟೋ ಇಷ್ಟೋ ದುಡಿಮೆ ಆಗುತ್ತೆ ಎಂದು ನಂಬಿದ ಏಜೆಂಟರ್ಗಳು, ಹಗಲು ರಾತ್ರಿ ಎನ್ನದೇ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸಂಚರಿಸಿದ್ದಾರೆ. ಸಾರ್ವಜನಿಕರಿಗೆ ಸೀಮ್ ಬಗ್ಗೆ ಪ್ರತಿ ಹಂತದಲ್ಲಿ ಡಿಪ್ನಲ್ಲಿ ಬಂದಿರುವ ಹೆಸರಿನವರಿಗೆ ಗಿಫ್ಟ್ ಸಿಗುತ್ತೆ. ಪ್ರತಿ ಕಾರ್ಡ್ನವರು 18 ತಿಂಗಳ ಅವಧಿಯಲ್ಲಿ 16800 ರೂ. ಕಟ್ಟಬೇಕು. 12 ತಿಂಗಳು 900 ರೂ ಹಾಗೇ ಇನ್ನುಳಿದ 6 ತಿಂಗಳು 1000 ರೂ ಅಂತೆ ಹಣ ಪಾವತಿಸಬೇಕು. ಒಂದು ವೇಳೆ ಏನು ಬರದೇ ಇದ್ದರೆ ಗಿಫ್ಟ್ ಕೊಡುತ್ತೆವೆ ಎಂದು ನಂಬಿಸಿದ್ದಾರೆ.
ಇದನ್ನೂ ಓದಿ : ಆನ್‌ಲೈನ್ ಗೇಮ್ ಚಟ: ಲಕ್ಷಾಂತರ ರೂಪಾಯಿ ಸಾಲ ಮಡಿಕೊಂಡ ಯುವಕ ಆತ್ಮಹತ್ಯೆಗೆ ಯತ್ನ
ಇವರ ನಯವಂಚನೆಯ ಮಾತುಗಳನ್ನು ನಂಬಿಸಿ ಸಾರ್ವಜನಿಕರು ಹಣ ಪಡೆದು, ಸುಮಾರು 700 ರಿಂದ 800 ಜನರಿಂದ ಚಂದಾದರಿಕೆಯನ್ನು ಮಾಡಿಸಿದ್ದಾರೆ. ಇದರ ಒಟ್ಟು ಮೊತ್ತ ಸರಿಸುಮಾರು 2 ಕೋಟಿ ಎಂದು ಅಂದಾಜಿಸಲಾಗಿದೆ. ಇದನ್ನೆಲ್ಲ ಗ್ರಹಿಸಿದ ಮೇನ್ ಕಿಂಗ್ ಪಿನ್ ವಿನೋದ್ ಮತ್ತು ಸಂಗಡಿಗರು ಚಂದಾದರರಿಗೆ ಡೀಪ್ ಎತ್ತಿದ ಪ್ರಕಾರ ಗಿಫ್ಟ್ ರೂಪದಲ್ಲಿ ಸಾಮಾಗ್ರಿಗಳನ್ನು ನೀಡದೇ ರಾತ್ರೋರಾತ್ರಿ ಆಫೀಸ್ ಕ್ಲೋಸ್ ಮಾಡಿಕೊಂಡು, ಮೊಬೈಲ್ ಫೋನ್ ಸ್ಪೀಚ್ ಆಫ್ ಮಾಡಿ ಎಸ್ಕೆಪ್ ಆಗಿದ್ದಾರೆ.
ಮೇನ್ ಕಿಂಗ್ ಪೀನ್ ವಿನೋದ್ ಮತ್ತು ಶಿವರಾಜ್ ಅವರ ಆಟವೂ ಕೇಲ್ ಕತಮ್- ದುಖನ್ ಬಂದ್ ಎನ್ನುವ ಪರಿಸ್ಥಿತಿಗೆ ಬಂದಿರುವುದು ಈ ಸ್ಟೀಮ್ ಗೆ ಗ್ರಾಹಕರನ್ನು ಸೆಳೆದ ಸುಮಾರು 38 ಏಜಂಟರ್ಗಳಿಗೆ ತಿಳಿದಿದೆ. ಇದ್ರಿಂದ ಭಯಭೀತರಾಗಿದ್ದಾರೆ.ಇನ್ನು ಹೊರಗೆ ವಿಷಯ ಬಂದಂತೆ ಗ್ರಾಹಕರು ಮತ್ತು ಏಜಂಟರ್ಗಳ ನಡುವೇ ಪ್ರತಿ ದಿನವು ಜಗಳ ಗಲಾಟೆಯಾಗುತ್ತಿತ್ತು.ಕೊನೆಗೆ ಎಲ್ಲರೂ ಸೇರಿ ಸಿರುಗುಪ್ಪ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹೇಗಾದ್ರೂ ಮಾಡಿ ಈ ವಂಚಕರನ್ನು ಹಿಡಿದು ತನ್ನಿ ನಮ್ಮ ಹಣವನ್ನು ವಾಪಸ್ ಮಾಡಿಸಿ ಎಂದು ಏಜಂಟರ್ಗಳು ಮತ್ತು ಚಂದಾದಾರರು ಪೋಲೀಸರ ಬಳಿ ಅಂಗಲಾಚುತ್ತಿದ್ದಾರೆ. ಜಿಎಸ್ಸಿ ನಂಬರ್ ಇಲ್ಲ. ಟ್ರೇಡ್ ಮಾರ್ಕ್ ಲೈಸನ್ಸ್ ಇಲ್ಲ. ಆದೇ ಜನರು ಇಂತವರನ್ನು ಹೇಗೆ ನಂಬುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಇದನ್ನೂ ನೋಡಿ : ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ! -ಸಂತೋಷ್ ಲಾಡ್ Janashakthi Media