ಫ್ರಾನ್ಸ್ : ಮ್ಯಾಕ್ರಾನ್  ಇಸ್ಲಾಂ-ಭೀತಿಯ ಭೂತ ಬಳಸುತ್ತಿದ್ದಾರೆಯೆ?

ಯುರೋಪಿನಲ್ಲಿ ಯಾಕೆ ಜಗತ್ತಿನಲ್ಲೇ ಧರ್ಮ ಮತ್ತು ಪ್ರಭುತ್ವವನ್ನು ಪ್ರತ್ಯೇಕಿಸುವುದರಲ್ಲಿ ಅತ್ಯಂತ ಯಶಸ್ವಿ ಎಂದು ಪರಿಗಣಿತವಾಗಿದ್ದ, ಫ್ರಾನ್ಸ್ ನ ಪ್ರಭುತ್ವ ಮತ್ತು ಆಳುವ ವಲಯಗಳು ಇಸ್ಲಾಮಿಕ ಭೀತಿ-ದ್ವೇಷಕ್ಕೆ  ಆಹಾರ ಒದಗಿಸಿ ಪ್ರೋತ್ಸಾಹ ನೀಡುವ ವ್ಯಾಮೋಹಕ್ಕೆ ಒಳಗಾಗಿವೆ.  ಚರ್ಚುಗಳು, ಪತ್ರಿಕೆಗಳು ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳಿಗೆ ಸಾಮಾಜಿಕ ಒಗ್ಗಟ್ಟು ಬೆಳೆಸಲು ಮತ್ತು ನಾಗರಿಕ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಪೌರತ್ವದ ಜವಾಬ್ದಾರಿಗಳ ಪ್ರಜ್ಞೆಯನ್ನು ಕಾಪಾಡಲು ಸಹಾಯ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವದ ವಿಶೇಷ ಜವಾಬ್ದಾರಿಯಾಗಿದೆ, ಆದರೆ, ಪ್ರಾನ್ಸ್ ನಲ್ಲಿ  ಈ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಫ್ರೆಂಚ್ ಪ್ರಭುತ್ವ ವಿಫಲವಾಗಿದೆ.  ತಮ್ಮ ರಾಜಕೀಯ ವೈಫಲ್ಯಗಳಿಂದ ತಮ್ಮ ರಾಜಕೀಯ ಅಸ್ತಿತ್ವದ ಸವಾಲು ಎದುರಿಸುತ್ತಿರುವ ರಾಜಕಾರಣಿಗಳು ಜಗತ್ತಿನ ಎಲ್ಲೆಡೆ ಮಾಡುವಂತೆ ಅಧ್ಯಕ್ಷ ಮ್ಯಾಕ್ರಾನ್ ಸಹ ಜನರ ಗಮನ ಬೇರಡೆಗೆ ಸೆಳೆಯುವ ಉಗ್ರ ಬಲಪಂಥದ ಆಟದ ಪಟ್ಟುಗಳ ಮೊರೆ ಹೋಗಿದ್ದಾರೆ. ಆದರೆ ಮೂಲ ಸಮಸ್ಯೆ ಬೇರೆಯೇ ಆಗಿದೆ.

***********************

ಅಕ್ಟೋಬರ್ 29ರಂದು ಫ್ರಾನ್ಸ್ ನ ನೈಸ್ ನಗರದಲ್ಲಿ ಒಂದು ಚರ್ಚ್ ಬಳಿ ಚಾಕುವಿನಿಂದ ತಿವಿದು ಮೂರು ಜನರನ್ನು ಕೊಲ್ಲಲಾಯಿತು. ಇದಕ್ಕಿಂತ ಎರಡು ವಾರಗಳ ಮೊದಲು ‘ಚಾಲ್ರ್ಸ್ ಹೆಬೆಡೊ’ಪತ್ರಿಕೆ ಸೆಪ್ಟೆಂಬರ್ ನಲ್ಲಿ ಮತ್ತೆ ಪ್ರಕಟಿಸಿದ ಪ್ರವಾದಿ ಮಹಮ್ಮದ್ ಕಾರ್ಟೂನುಗಳನ್ನು ಕ್ಲಾಸಿನಲ್ಲಿ ತೋರಿಸಿದ ಶಿಕ್ಷಕನ ತಲೆ ಕಡಿದು ಹತ್ಯೆ ಮಾಡಲಾಗಿತ್ತು. ಸೆಪ್ಟೆಂಬರ್ 25ರಂದು ಆ ಪತ್ರಿಕೆಯ ಹಿಂದಿನ ಕಚೇರಿಯ ಬಳಿ ಇಬ್ಬರ ಮೇಲೆ ದಾಳಿ ನಡೆದಿತ್ತು. ಅಕ್ಟೋಬರ್ 2ರಂದು ಫ್ರಾನ್ಸ್ ಅಧ್ಯಕ್ಷ ಮಾಕ್ರಾನ್ ದೇಶವನ್ನುದ್ದೇಶಿಸಿ ಮಾತನಾಡಿ  “ಇಸ್ಲಾಂ ಜಗತ್ತಿನಾದ್ಯಂತ ಬಿಕ್ಕಟ್ಟಿನಲ್ಲಿದ್ದು” ಬೆಳೆಯುತ್ತಿರುವ “ಇಸ್ಲಾಮಿಕ್ ಉಗ್ರವಾದ”ದ ವಿರುದ್ಧ “ಫ್ರೆಂಚ್ ಧರ್ಮ ನಿರಪೇಕ್ಷತೆಯ ಮೌಲ್ಯಗಳನ್ನು” ಕಾಪಾಡಲು ತಾವು ಕಟು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದರು.

ಉಗ್ರವಾದಿ ದಾಳಿಗೆ ಪ್ರಚೋದನೆ ನೀಡಿದ ಕಾರ್ಟೂನುಗಳು

2005ರಲ್ಲಿ ಮೊದಲ ಬಾರಿಗೆ ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನ ಮಾಡುತ್ತವೆ ಎಂದು ಹೇಳಲಾದ ಕಾರ್ಟೂನುಗಳು ಡೆನ್ಮಾರ್ಕಿನ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಅದನ್ನು ಚಾಲ್ರ್ಸ್ ಹೆಬೆಡೊ’ ಎಂಬ ಫ್ರೆಂಚ್ ಪತ್ರಿಕೆ ಸೇರಿದಂತೆ ಹಲವು ಯುರೋಪಿನ ಪತ್ರಿಕೆಗಳು ಪ್ರಕಟಿಸಿದ್ದವು. ಕೆಲವು ಪತ್ರಿಕೆಗಳು ತಮ್ಮದೇ ಆದ ಪ್ರವಾದಿ ಮಹಮ್ಮದ್ ಕಾರ್ಟೂನುಗಳನ್ನು ಪ್ರಕಟಿಸಿದ್ದವು. ಇವು ಫ್ರಾನ್ಸ್ ಸೇರಿದಂತೆ ಯುರೋಪಿನಲ್ಲಿ ಮಾತ್ರವಲ್ಲ ಜಗತ್ತಿನ ಹಲವು ಕಡೆ ವ್ಯಾಪಕ ವಿವಾದ ಮತ್ತು ಮುಸ್ಲಿಂ ದೇಶಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

2011ರಲ್ಲಿ ಮೊದಲ ಬಾರಿಗೆ ‘ಚಾಲ್ರ್ಸ್ ಹೆಬೆಡೊ’ಪತ್ರಿಕೆಯ ಕಚೇರಿಯ ಮೇಲೆ ಮತ್ತು ಮುಂದೆಯೂ ಹಲವು ಇಸ್ಲಾಮಿಕ್ ಮೂಲಭೂತವಾದಿ ಗುಂಪುಗಳಿಂದ ಹಲವು ಹಿಂಸಾತ್ಮಕ ದಾಳಿಗಳಿಗೆ ನೆಪವಾಗಿತ್ತು. ಇದನ್ನು ಆಗಿನಿಂದ ಯುರೋಪಿನಲ್ಲಿ ಬೆಳೆಯುತ್ತಿರುವ ಇಸ್ಲಾಂ-ಭೀತಿ-ದ್ವೇಷಗಳ ಭೂತ ಬೆಳೆದಿತ್ತು ಮತ್ತು ಅದರ ಫಲವಾಗಿ ಬಿಳಿಯ ಪಾರಮ್ಯವಾದಿ ಜನಾಂಗವಾದಿ ಉಗ್ರ ಗುಂಪುಗಳಿಂದ ಮುಸ್ಲಿಮರ ಮೇಲೆ ಹಿಂಸಾತ್ಮಕ ದಾಳಿಗಳೂ ನಡೆದಿವೆ. ಆದರೂ ಈ ಸೆಪ್ಟೆಂಬರ್ ನಲ್ಲಿ ‘ಚಾಲ್ರ್ಸ್ ಹೆಬೆಡೊ’ಪತ್ರಿಕೆ ಈ ಕಾರ್ಟೂನುಗಳನ್ನು ಪುನಃ ಪ್ರಕಟಿಸಿತ್ತು. ಅಕ್ಟೋಬರ್ 29ರ ದಾಳಿ ಸೇರಿದಂತೆ ಇತ್ತೀಚಿನ ಮೂರು ದಾಳಿಗಳನ್ನು ಭಯೋತ್ಪಾದಕ ದಾಳಿಯೆಂದು ಪ್ರೆಂಚ್ ಪೋಲಿಸ್ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದನ್ನು ವಿಶ್ವದಾದ್ಯಂತ ಅನೇಕ ದೇಶಗಳ ಆಡಳಿತಗಳು ಉಗ್ರವಾಗಿ ಖಂಡಿಸಿವೆ. ಆದರೆ, ಈ ತಿಂಗಳಲ್ಲೇ  “ಐಫೆಲ್ ಟವರ್” ಬಳಿ ಮುಸುಕು ಧರಿಸಿದ ಇಬ್ಬರು ಮುಸ್ಲಿಂ ಮಹಿಳೆಯರನ್ನು ಹಲ್ಲೆಕೋರರು ಇರಿದರೆ, ಅದು ಪ್ರಾನ್ಸ್ ನಲ್ಲಿ ಸುದ್ದಿಯಾಗಲಿಲ್ಲ. ಅದನ್ನು ಭಯೋತ್ಪಾದಕ ದಾಳಿಯೆಂದು ಖಂಡಿಸಲಾಗಲಿಲ್ಲ.

ಈ ಹಿನ್ನೆಲೆಯಲ್ಲಿ ಇತ್ತೀಚಿನ ದಾಳಿಯ ನಂತರ ಪ್ರಾನ್ಸ್ ನ ಅಧ್ಯಕ್ಷ ಮ್ಯಾಕ್ರಾನ್ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣವು ಗಮನ ಸೆಳೆದಿದೆ. ಪ್ರಾನ್ಸ್ ನಲ್ಲಿ ಚರ್ಚ್ ಗಳನ್ನು ಪ್ರಭುತ್ವದಿಂದ, ಅಧಿಕೃತವಾಗಿ ಬೇರ್ಪಡಿಸುವ 1905 ರ ಕಾನೂನನ್ನು ಬಲಪಡಿಸಲು ಸರ್ಕಾರವು ಡಿಸೆಂಬರ್ನಲ್ಲಿ ಮಸೂದೆಯನ್ನು ಮಂಡಿಸುವುದಾಗಿ ಅವರು ಘೋಷಿಸಿದರು.  ಹೊಸ ಕ್ರಮಗಳ ಮೂಲ ಉದ್ದೇಶಗಳು,  ಫ್ರಾನ್ಸ್ನಲ್ಲಿ ಬೆಳೆಯುತ್ತಿರುವ ‘ಇಸ್ಲಾಮಿಕ್ ಉಗ್ರವಾದದ’ ಸಮಸ್ಯೆಯನ್ನು ಪರಿಹರಿಸುವ ಮತ್ತು “ಒಟ್ಟಿಗೆ ಬದುಕುವ ನಮ್ಮ ಸಾಮಥ್ರ್ಯವನ್ನು ಸಜ್ಜುಗೊಳಿಸುವ ” ಗುರಿಯನ್ನು ಹೊಂದಿವೆ ಎಂದು ತಿಳಿಸಿದರು. ಅವರು ಮಾತನಾಡುತ್ತಾ ಈ ಸೆಪ್ಟೆಂಬರ್ ನಲ್ಲಿ ‘ಚಾಲ್ರ್ಸ್ ಹೆಬೆಡೊ’ಪತ್ರಿಕೆ ಈ ಕಾರ್ಟೂನುಗಳನ್ನು ಪುನಃ ಪ್ರಕಟಿಸಿದ್ದನ್ನು ಬೆಂಬಲಿಸಿದರು.

‘ಇಸ್ಲಾಮಿಕ್ ಉಗ್ರವಾದದ’ದ ವಿರುದ್ಧ ಮ್ಯಾಕ್ರಾನ್ ಕ್ರಮಗಳು

ಮ್ಯಾಕ್ರಾನ್ ರ ಹೊಸ ಕಾನೂನು ಜನರು ತಮ್ಮ ಆಯ್ಕೆಯ ಯಾವುದೇ ನಂಬಿಕೆಯನ್ನು ಆಚರಿಸಲು ಸೇರಲು ಅವಕಾಶ ನೀಡುತ್ತದೆ. ಆದರೆ ಧಾರ್ಮಿಕ ಗುರುತುಗಳ ಬಾಹ್ಯ ಪ್ರದರ್ಶನಗಳನ್ನು ಶಾಲೆಗಳಲ್ಲಿ ಮತ್ತು ಸಾರ್ವಜನಿಕ ಸೇವೆಯಲ್ಲಿ ನಿಷೇಧಿಸುತ್ತದೆ. ಅಂದ ಹಾಗೆ, ಫ್ರೆಂಚ್ ಶಾಲೆಗಳಲ್ಲಿ ಮತ್ತು ಸಾರ್ವಜನಿಕ ಸೇವೆಗಳಲ್ಲ, ಕೆಲಸದ ಸ್ಥಳದಲ್ಲಿ ಹಿಜಾಬ್ ಧರಿಸುವುದನ್ನು ಈಗಾಗಲೇ ನಿಷೇಧಿಸಲಾಗಿದೆ ಎಂಬ ಅಂಶವನ್ನು ಗಮನಿಸಬೇಕು.

ಮಸೀದಿ ಹಣಕಾಸಿನ ಮೇಲ್ವಿಚಾರಣೆಯಲ್ಲಿ ‘ಸುಧಾರಿಸುವ’(ಸರಕಾರದ ಮಧ್ಯಪ್ರವೇಶಕ್ಕೆ ಹಲವು ಬದಲಾವಣೆಗಳನ್ನು ತರುವ)  ಮೂಲಕ ಫ್ರಾನ್ಸ್ನಲ್ಲಿ ಇಸ್ಲಾಂ ಧರ್ಮವನ್ನು ವಿದೇಶಿ ಪ್ರಭಾವಗಳಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಮ್ಯಾಕ್ರಾನ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.  ತಮ್ಮ ಧಾರ್ಮಿಕ ಸಮುದಾಯಗಳಿಗೆ ಪ್ರತ್ಯೇಕವಾಗಿ ಸೇವೆ ಸಲ್ಲಿಸುತ್ತಿರುವ ಶಾಲೆಗಳು ಮತ್ತು ಸಂಘಗಳ ಬಗ್ಗೆ ಸೂಕ್ಷ್ಮ ಪರಿಶೀಲನೆ ನಡೆಸಲಾಗುವುದು. ಮನೆ ಶಿಕ್ಷಣದ ಮೇಲೆ ತೀವ್ರ ಮಿತಿಗಳನ್ನು ಹೇರಲಾಗುವುದು ಎಂದು ಘೋಷಿಸಿದರು. ಇದರ ಅರ್ಥ, ಫ್ರಾನ್ಸ್ ತನ್ನ ಮುಸ್ಲಿಂ ಅಲ್ಪಸಂಖ್ಯಾತರೊಂದಿಗಿನ ಸಂಬಂಧವನ್ನು ಪುನರ್ನಿ‍ರ್ವಚಿಸಿ ಆಮೂಲಾಗ್ರವಾಗಿ ಬದಲಾಯಿಸುತ್ತಿದೆ ಎಂಬುದಾಗಿದೆ. ಯುರೋಪಿನಲ್ಲಿಯೇ ಮುಸ್ಲಿಮರ ಸಂಖ್ಯೆ ಫ್ರಾನ್ಸ್ ನಲ್ಲಿ ಹೆಚ್ಚಾಗಿದೆ ಎಂಬುದನ್ಮು ಇಲ್ಲಿ ಗಮನಿಸಬೇಕು.

ಮ್ಯಾಕ್ರಾನ್ ರ ಹೇಳಿಕೆಗಳು ಮುಸ್ಲಿಂ ಸಮುದಾಯದಲ್ಲಿ ಆಕ್ರೋಶವನ್ನು ಉಂಟು ಮಾಡಿವೆ. ಪ್ರಮುಖ ಫ್ರೆಂಚ್ ಮುಸ್ಲಿಂ ಕಾರ್ಯಕರ್ತರೊಬ್ಬರು ಮ್ಯಾಕ್ರಾನ್ ರು ತಮ್ಮ ಒಂದು ಗಂಟೆಯ ಭಾಷಣದಲ್ಲಿ “ಮುಸ್ಲಿಮರನ್ನು ಪರೋಕ್ಷವಾಗಿ ಬೆದರಿಸಿದರು”ಎಂದು  ಟ್ವೀಟ್ ಮಾಡಿದ್ದಾರೆ. ಮ್ಯಾಕ್ರಾನ್ ಬಲಪಂಥೀಯ ಮತ್ತು  ಎಡಪಂಥೀಯ ಮುಸ್ಲಿಂ ವಿರೋಧಿಗಳಿಗೆ ಧೈರ್ಯ ತುಂಬಿದರು ಮತ್ತು ಜಾಗತಿಕ ಸಾಂಕ್ರಾಮಿಕ ರೋಗದ ಹೊರತಾಗಿಯೂ ಮನೆ ಶಿಕ್ಷಣದ ಮೇಲೆ ತೀವ್ರ ಮಿತಿಗಳನ್ನು ಹೇರುವ ಮೂಲಕ ಮುಸ್ಲಿಂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆದರಿಕೆ ಹಾಕಿದರು ಎಂದು ಅವರು ಹೇಳಿದ್ದಾರೆ.

ಮ್ಯಾಕ್ರಾನ್ ಅವರ ಈ ಘೋಷಣೆ ಜಾಗತಿಕವಾಗಿ ತೀವ್ರ ಆಕ್ರೋಶ ಉಂಟು ಮಾಡಿವೆ. ಟುನಿಶಿಯಾ ದಿಂದ ಮಲೇಷಿಯದ ವರೆಗೆ ಮುಸ್ಲಿಂ ಜನ ಅವರ ಹೇಳಿಕೆ ಮತ್ತು ಕ್ರಮಗಳ ವಿರುದ್ಧ ಪ್ರತಿಭಟಿಸಿದ್ದಾರೆ. ಫ್ರೆಂಚ್ ವಸ್ತುಗಳನ್ನು ಬಹಿಷ್ಕರಿಸುವ ಬೆದರಿಕೆ ಹಾಕಲಾಗಿದೆ. ಟರ್ಕಿ, ಮಲೇಷಿಯ ಮುಂತಾದ ದೇಶಗಳ ಸರಕಾರಗಳು ಮುಖ್ಯಸ್ಥರು ಇದನ್ನು ಕಟುವಾಗಿ ಟೀಕಿಸಿದ್ದಾರೆ. ಮುಸ್ಲಿಂ ಜನಸಾಮಾನ್ಯರ ಆಕ್ರೋಶ ನೈಜವಾಗಿದ್ದರೂ, ಈ ನಾಯಕರು, ಮ್ಯಾಕ್ರಾನ್ ಮತ್ತು ಇಸ್ಲಾಮಿಕ್ ಉಗ್ರಗಾಮಿಗಳಿಗೆ ಇದು ಅವರ ರಾಜಕೀಯದಾಟದ ದಾಳವಾಗಿದೆ.

ಫ್ರೆಂಚ್ ಸಮಾಜದಲ್ಲಿ ಇಸ್ಲಾಮ್-ಭೀತಿ ಮತ್ತು ದ್ವೇಷಗಳ ಭೂತ ತೀವ್ರವಾಗಿ ಬೆಳೆಯುತ್ತಿದೆ.  ಭಯೋತ್ಪಾದಕ ಕೃತ್ಯಗಳೂ ಹೆಚ್ಚುತ್ತಿವೆ. ನಾಗರಿಕ ಸಮಾಜದಲ್ಲೂ ತೆಳ್ಳನೆಯ ಮುಸುಕು ಮುಚ್ಚಿದ ಮುಸ್ಲಿಂ ವಿರೋಧಿ ಹೇಳಿಕೆಗಳು, ಆಪಾದನೆಗಳು, ಕುಟುಕುವ ಮಾತುಗಳು ಹೆಚ್ಚುತ್ತಿವೆ. ಈಗ ಫ್ರೆಂಚ್ ಪ್ರಧಾನಿ ಮತ್ತು  ಹಿರಿಯ ಫ್ರೆಂಚ್ ಮಂತ್ರಿಗಳೂ ಇದರಲ್ಲಿ ಭಾಗಿಯಾಗುತ್ತಿದ್ದಾರೆ.  ಇದರ ಫಲವಾಗಿಯೋ ಏನೋ ಎಂಬಂತೆ ಹಿಂಸಾತ್ಮಕ ದಾಳಿಗಳೂ ಹೆಚ್ಚುತ್ತಿವೆ.

‘2017 ರಲ್ಲಿ, ‘ಪ್ಯೂ ರಿಸರ್ಚ್ ಸೆಂಟರ್’ನ  ಗ್ಲೋಬಲ್ ಆಟಿಟ್ಯೂಡ್ಸ್ ಸಮೀಕ್ಷೆ’ ಯ ಪ್ರಕಾರ ಇಸ್ಲಾಂ ಧರ್ಮವು ಫ್ರಾನ್ಸ್ನ ಎರಡನೇ ಅತಿ ದೊಡ್ಡ ಧರ್ಮವಾಗಿದೆ. ಕ್ರಿಶ್ಚಿಯನ್ನರು ಸರಿ ಸುಮಾರು 38 ಮಿಲಿಯನ್ ಮತ್ತು ಮುಸ್ಲಿಮರು 5.5 ಮಿಲಿಯನ್ ಇದ್ದಾರೆ.  ಸುಮರು 21 ಮಿಲಿಯನ್ ಫ್ರೆಂಚ್ ಜನರಿಗೆ ಯಾವುದೇ ಧರ್ಮದೊಂದಿಗೆ ಸಂಬಂಧವಿಲ್ಲ ಎಂದು ಈ ಸಮೀಕ್ಷೆ ಪ್ರಕಟಿಸಿದೆ.

ಯುರೋಪಿನಲ್ಲಿ ಯಾಕೆ ಜಗತ್ತಿನಲ್ಲೇ ಧರ್ಮ ಮತ್ತು ಪ್ರಭುತ್ವವನ್ನು ಪ್ರತ್ಯೇಕಿಸುವುದರಲ್ಲಿ ಅತ್ಯಂತ ಯಶಸ್ವಿ ಎಂದು ಪರಿಗಣಿತವಾಗಿದ್ದ, ಫ್ರಾನ್ಸ್ ನ ಪ್ರಭುತ್ವ ಮತ್ತು ಆಳುವ ವಲಯಗಳು ಇಸ್ಲಾಮಿಕ ಭೀತಿ-ದ್ವೇ಼ಷಕ್ಕೆ  ಆಹಾರ ಒದಗಿಸಿ ಪ್ರೋತ್ಸಾಹ ನೀಡುವ ವ್ಯಾಮೋಹಕ್ಕೆ ಒಳಗಾಗಿವೆ. ಚರ್ಚುಗಳು, ಸ್ಥಳೀಯ ಪತ್ರಿಕೆಗಳು ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳಿಗೆ ಸಾಮಾಜಿಕ ಒಗ್ಗಟ್ಟು ಬೆಳೆಸಲು ಮತ್ತು ನಾಗರಿಕ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಪೌರತ್ವದ ಜವಾಬ್ದಾರಿಗಳ ಪ್ರಜ್ಞೆಯನ್ನು ಕಾಪಾಡಲು ಸಹಾಯ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವದ ವಿಶೇಷ ಜವಾಬ್ದಾರಿಯಾಗಿದೆ, ಆದರೆ, ಪ್ರಾನ್ಸ್ ನಲ್ಲಿ  ಈ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಫ್ರೆಂಚ್ ಪ್ರಭುತ್ವ ವಿಫಲವಾಗಿದೆ.

ಅಸಮಾನ ಬೆಳವಣಿಗೆ ಮತ್ತು ಸಾಮಾಜಿಕ ಅಸಮಾನತೆಯಿಂದಾಗಿ ಸಾಮಾಜಿಕ ಉದ್ವಿಗ್ನತೆಗಳು ಉಲ್ಬಣಗೊಳ್ಳುತ್ತಿವೆ.  ಉಗ್ರ ಆಲೋಚನೆಗಳಿಗೆ ಸಂಘಟನೆಗಳಿಗೆ ಕಾರ್ಯಾಚರಣೆಗಳಿಗೆ ಇಂಟರ್ನೆಟ್ ಗಮನಾರ್ಹವಾಗಿ ಕೊಡುಗೆ ನೀಡುತ್ತಿದೆ.  ಬಹುಮುಖ್ಯವಾಗಿ, ಇತ್ತೀಚಿನ ದಶಕಗಳಲ್ಲಿ, ‘ಜಾತ್ಯತೀತತೆಯ ರಾಷ್ಟ್ರೀಯ ಸಿದ್ಧಾಂತ’ ವನ್ನು ಒಟ್ಟಾರೆಯಾಗಿ ದುರ್ಬಲಗೊಳಿಸಲಾಗುತ್ತಿದೆ.  ಈ ನಿಟ್ಟಿನಲ್ಲಿ ಫ್ರಾನ್ಸ್ನ ರಾಜಕೀಯ ಮತ್ತು ಬೌದ್ಧಿಕ ಸಂಪ್ರದಾಯಗಳು ದುರ್ಬಲಗೊಂಡಿರುವುದು ಎದ್ದು ಕಾಣುತ್ತಿದೆ. ಮ್ಯಾಕ್ರಾನ್ ಇದನ್ನು ಬಲಪಡಿಸುವ ಬದಲು ಅದರ ರಾಜಕೀಯ ಪ್ರಯೋಜನ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರ ಇತ್ತೀಚಿನ ವರ್ತನೆಯಿಂದ ಕಂಡು ಬರುತ್ತದೆ.

ಮ್ಯಾಕ್ರಾನ್ ಯಾಕೆ ಹೀಗೆ ವರ್ತಿಸುತ್ತಿದ್ದಾರೆ?

ಮ್ಯಾಕ್ರಾನ್ ಯಾಕೆ ಹೀಗೆ ವರ್ತಿಸುತ್ತಿದ್ದಾರೆ ಎಂದು ವಿಶ್ಲೇಷಿಸಿದರೆ  ಕಂಡು ಬರುವುದು ಇದು, ಮ್ಯಾಕ್ರಾನ್ ಇಂದು ಹಲವು ಜನವಿಭಾಗಗಳ ಪ್ರತಿಭಟನೆಗಳ ಮುತ್ತಿಗೆಯಲ್ಲಿ ಸಿಕ್ಕಿಕೊಂಡಿರುವ  ಒಬ್ಬ ರಾಜಕಾರಣಿ.  ಅವರ ಮತದಾರರು ಅವರನ್ನು ತ್ಯಜಿಸುತ್ತಿದ್ದಾರೆ. ಮ್ಯಾಕ್ರಾನ್ 2017 ರಲ್ಲಿ,  ತಾನು ವಿಶೇಷವಾಗಿ ನೀಡಿದ್ದ ಆರ್ಥಿಕತೆ ಸುಧಾರಿಸುವ ಭರವಸೆಯನ್ನು ಈಡೇರಿಸಲು ವಿಫಲರಾಗಿದ್ದಾರೆ. ಇದರಿಂದಾಗಿಯೇ ಅತಿರೇಕದ ಬೀದಿ ಪ್ರತಿಭಟನೆಗಳು ಮತ್ತು ಸಾರ್ವಜನಿಕ ವಲಯದ ಪ್ರಮುಖ ಮುಷ್ಕರ ಗಳ ಮೂಲಕ ಪ್ರೆಂಚ್ ಕಾರ್ಮಿಕರು ಮತ್ತು ಸಾಮಾನ್ಯ ಜನರು  ತಮ್ಮ ಅಸಮಾಧಾನ ವನ್ನು ತೀವ್ರವಾಗಿ ವ್ಯಕ್ತಪಡಿಸುತ್ತಾ ಬಂದಿದ್ದಾರೆ.   ಗಿಲೆಟ್ಸ್ ಜೌನೆಸ್ (ಅಥವಾ ಹಳದಿ ನಡುವಂಗಿಗಳ) ಪ್ರತಿಭಟನೆಗಳು ದುಡಿಯುವ ಜನರಲ್ಲಿ ಮೂಡಿರುವ ಪರಕೀಯತೆಯ ಆಳವನ್ನು ಎತ್ತಿ ತೋರಿಸುತ್ತವೆ.  ಈ ಪ್ರತಿಭಟನೆಗಳನ್ನು ಹತ್ತಿಕ್ಕಲು ಮ್ಯಾಕ್ರಾನ್ ಆಡಳಿತ ಕಡು ಬಲಪ್ರಯೋಗ ಮಾಡಿತು. ಅದು ಇವರ ಜನಪ್ರಿಯತೆಯನ್ಮು ಕುಗ್ಗಿಸಿತು.

ಇದರೊಂದಿಗೆ, ಪಿಂಚಣಿ ಸುಧಾರಣೆಗಳು, ಇಂಧನ ಬೆಲೆ ಏರಿಕೆ, ಪೆÇಲೀಸ್ ಹಿಂಸೆ ಮತ್ತು ನಿರುದ್ಯೋಗದ ವಿರುದ್ಧ ಕಳೆದ ವರ್ಷದಲ್ಲಿ ಪ್ರತಿಭಟನೆಗಳ ಪ್ರದರ್ಶನಗಳು  ಪ್ರಮುಖವಾಗಿ ಭುಗಿಲೆದ್ದವು.  ಪ್ರಾನ್ಸ್ ನ ಬೀದಿ ಬೀದಿಗಳಲ್ಲಿ ಮತ್ತು ಬಹುತೇಕ ಎಲ್ಲಾ ನಗರಗಳಲ್ಲೂ ಪ್ರತಿಭಟನೆಗಳು ನಡೆದವು.  ಪ್ರೆಂಚ್ ಇತಿಹಾಸದಲ್ಲೇ ಸುದೀರ್ಘವಾದ ಸಾರ್ವಜನಿಕ ಸಾರಿಗೆ ಮುಷ್ಕರಗಳು ವರ್ಷವಿಡೀ ನಡೆದಿವೆ. ಇದು ದೇಶವನ್ನು ಆರ್ಥಿಕವಾಗಿ ದುರ್ಬಲಗೊಳಿಸಿದೆ..

ಈ ಚಳುವಳಿಗಳು, ಮ್ಯಾಕ್ರಾನ್ ರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದಾಗ 2017 ರಲ್ಲಿ ಇದ್ದ ಸುಮಾರು 60 ಪ್ರತಿಶತದಷ್ಟು ಜನ ಬೆಂಬಲದ  ರೇಟಿಂಗ್ಗಳನ್ನು ಅರ್ಧಕ್ಕೆ ಇಳಿಸಿದೆ.  ಕಳೆದ ಜೂನ್ನಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಇವರ ಪಕ್ಷವು ಹೀನಾಯ ಸೋಲನ್ನು ಅನುಭವಿಸಿತು.  ಇದರಿಂದಾಗಿ, ಮುಂಬರುವ ಏಪ್ರಿಲ್ 2022 ರಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮ್ಯಾಕ್ರನ್ ಉದ್ವಿಗ್ನರಾಗುತ್ತಿದ್ದಾರೆ.

ಒಂದು ಕಡೆ ಎಡಪಂಥ ಮತ್ತು ಇನ್ನೊಂದು ಕಡೆ ಉಗ್ರ ಬಲಪಂಥೀಯರ ಬೆಂಬಲ ಹೆಚ್ಚುತ್ತಿರುವುದನ್ನು ತಡೆಯಲು ಇಸ್ಲಾಮಿಕ್-ಭೀತಿ ದ್ವೇಷಗಳ ಭೂತವನ್ನು ಬಳಸಲು ಅವರು ಮುಂದಾಗಿದ್ದಾರೆ. ಇದು ಮ್ಯಾಕ್ರಾನ್ ತಮ್ಮ ರಾಜಕೀಯ ನೆಲೆಯನ್ನು ಮತ್ತೆ ಗಳಿಸುವ ಹತಾಶ ಪ್ರಯತ್ನವಾಗಿದೆ. ಇದರಲ್ಲಿ ಅವರಿಗೆ ಫ್ರೆಂಚ್ ಆಳುವ ವಲಯಗಳಿಂದ ಮತ್ತು ನಡುಪಂಥೀಯರಿಂದ ಬೆಂಬಲ ವ್ಯಕ್ತವಾಗುತ್ತಿದೆ.  ಪ್ರಮುಖ ಮಾಧ್ಯಮ ಪಂಡಿತರು ಮತ್ತು ರಾಜಕಾರಣಿಗಳು ಇತ್ತೀಚೆಗೆ “ಫ್ರೆಂಚ್ ಮೌಲ್ಯಗಳು” ಅಪಾಯದಲ್ಲಿವೆ.  ಇದಕ್ಕಾಗಿ ಸಾಮಾನ್ಯ ಜನರನ್ನು ಹೋರಾಟಕ್ಕಾಗಿ ಸಜ್ಜುಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮ್ಯಾಕ್ರಾನ್ ಹೊಸ ಪ್ರಸ್ತಾವನೆಗಳನ್ನು ಬೆಂಬಲಿಸಬೇಕು ಎನ್ನುತ್ತಿದ್ದಾರೆ. ಒಬ್ಬ ರಾಜಕಾರಣಿ “ಮುಸ್ಲಿಂ ವಲಸಿಗರಿಗೆ ಪೌರತ್ವ ವನ್ನು ರದ್ದುಪಡಿಸುವುದು, ಕಡ್ಡಾಯವಾಗಿ ಫ್ರೆಂಚ್ ಮೊದಲ ಹೆಸರುಗಳನ್ನು ಅಳವಡಿಸಿಕೊಳ್ಳಲು ಒತ್ತಾಯಪಡಿಸುವುದು, ಮತ್ತು ಮರಣದಂಡನೆಯನ್ನು ‘ಪುನಃ ಸ್ಥಾಪಿಸುವುದು” ಇತ್ಯಾದಿ ಕ್ರಮಗಳನ್ನೂ ಸೂಚಿಸಿದ್ದಾರೆ.

‘ಪ್ರೆಂಚ್ ಸಮಾಜದಲ್ಲಿ ಮುಸ್ಲಿಮರನ್ನು ಕಳಂಕಿತರನ್ನಾಗಿ ಮಾಡಲಾಗುತ್ತಿದೆ’ ಎಂದಿರುವ ಮ್ಯಾಕ್ರಾನ್ ರ ಪ್ರಮುಖ ರಾಜಕೀಯ ಎದುರಾಳಿ, ಸಮಾಜವಾದಿ ನಾಯಕ ಜೀನ್-ಲುಕ್ ಅವರ ಮೇಲೆ ‘ಇಸ್ಲಾಮಿಕ್ ಉಗ್ರವಾದಕ್ಕೆ ಬೆಂಬಲ ಕೊಡುತ್ತಿದ್ದಾರೆ’ಎಂಬ ಆಪಾದನೆ ಹೊರಿಸಲು ಅಭಿಯಾನ ಪ್ರಾರಂಭವಾಗಿದೆ. ಫ್ರೆಂಚ್ ಆಳುವ ವಲಯಗಳು ತಮ್ಮ ರಕ್ಷಣೆಗೆ ಸೃಷ್ಟಿಸಿರುವ ಇಸ್ಲಾಮಿಕ-ಭೀತಿ ದ್ವೇಷಗಳ ಅಲೆಯ ಮೇಲೆ ಮ್ಯಾಕ್ರಾನ್ ಚಲಿಸುತ್ತಿದ್ದಾರೆ. ತಮ್ಮ ರಾಜಕೀಯ ವೈಫಲ್ಯಗಳಿಂದ ತಮ್ಮ ರಾಜಕೀಯ ಅಸ್ತಿತ್ವದ ಸವಾಲು ಎದುರಿಸುತ್ತಿರುವ ರಾಜಕಾರಣಿಗಳು ಜಗತ್ತಿನ ಎಲ್ಲೆಡೆ ಮಾಡುವಂತೆ ಮ್ಯಾಕ್ರಾನ್ ಸಹ ಜನರ ಗಮನ ಬೇರಡೆಗೆ ಸೆಳೆಯುವ ಉಗ್ರ ಬಲಪಂಥದ ಆಟದ ಪಟ್ಟುಗಳ ಮೊರೆ ಹೋಗಿದ್ದಾರೆ. ಆದರೆ ಮೂಲ ಸಮಸ್ಯೆ ಬೇರೆಯೇ ಆಗಿದೆ.

“ಹಿಂಸಾತ್ಮಕ ಉಗ್ರವಾದಕ್ಕೆ ಧರ್ಮವು ಒಂದು ಪ್ರಾಥಮಿಕ ಪ್ರೇರಕ” ವಾಗಿದೆ ಎಂದು ಸೂಚಿಸಲು ಯಾವುದೇ ಪ್ರಾಯೋಗಿಕ ಪುರಾವೆಗಳು ಪ್ರಾನ್ಸ್ ನಲ್ಲಿ ಸಿಕ್ಕಿಲ್ಲ. ಉದ್ಯೋಗ ಮತ್ತು ವಸತಿ ತಾರತಮ್ಯ, ಪೆÇಲೀಸ್ ದೌರ್ಜನ್ಯ ಮತ್ತು  ಬಡತನ, ದೈನಂದಿನ ವರ್ಣಭೇದ ನೀತಿ  ಇವುಗಳು ಸೃಷ್ಟಿಸಿರುವ ಪರಕೀಯತೆ ಮತ್ತು ತೀವ್ರ ಸಾಮಾಜಿಕ ಸಮಸ್ಯೆಗಳ ಫಲ ಇದು. ಮುಸ್ಲಿಂ ಸಮುದಾಯವು ಫ್ರೆಂಚ್ ಸಮಾಜದೊಂದಿಗೆ “ಸಂಯೋಜನೆ” ಹೊಂದಲು ವಿಫಲವಾಗಿದೆ ಎಂದು ಆರೋಪ ಸಹ ನಿಜವಲ್ಲ. ಈ ಮೂಲಕ ಮುಸ್ಲಿಮರ ಜೀವನದ ವಿಧಾನಕ್ಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳಿಗೆ ಬೆದರಿಕೆಯೊಡ್ಡುವುದು ಪರಿಹಾರವಲ್ಲ. ಎಂದು ಸಮಾಜಶಾಸ್ತ್ರಜ್ಞರು ಹೇಳುತ್ತಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಬಹು-ಧರ್ಮೀಯ ಬಹು-ಸಾಂಸ್ಕøತಿಕ ಸಮಾಜವಾಗಿರುವ ಫ್ರಾನ್ಸ್ ಸೆಕ್ಯುಲರ್ ಪ್ರಜಾಪ್ರಭುತ್ವವಾಗಿ ಮುಂದುವರೆಯಲು ಹರಸಾಹಸ ಪಡುತ್ತಿದೆ. ಆದರೆ ಫ್ರೆಂಚ್ ಪ್ರಭುತ್ವವು ಸುಲಭದ ಅಡ್ಡದಾರಿ ಹುಡುಕಿಕೊಳ್ಳಲು ಪ್ರಯತ್ನಿಸುತ್ತಿದೆ. ದೇಶದ ಬಹು-ಸಂಖ್ಯಾತ ಜನರನ್ನು, ಮುಸ್ಲಿಂ ವಿಭಾಗದಿಂದ ಪ್ರತ್ಯೇಕಿಸಿ ಅವರನ್ನು ಹೊರಗಿನವರು ಎಂದು ಪರಿಗಣಿಸಲು ಪ್ರಯತ್ನಿಸುತ್ತಿದೆ. ಫ್ರೆಂಚ್ ಪ್ರಭುತ್ವವನ್ನು ನಡೆಸುತ್ತಿರುವ ಬೂಜ್ರ್ವಾ ವರ್ಗದ ಪ್ರತಿನಿಧಿಯಾಗಿ ಮ್ಯಾಕ್ರಾನ್ ತಮ್ಮ ರಾಜಕೀಯ ಅಸ್ತಿತ್ವಕ್ಕೂ ಅಗತ್ಯವಾಗಿರುವ ಈ ಧೋರಣೆಯನ್ನು ಅನುಸರಿಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *