ಬೆಂಗಳೂರು| ಸೇವಾ ವಾಹನದ ಅಪಘಾತ – ಕರ್ನಾಟಕದ ಮತ್ತೋರ್ವ ಯೋಧ ನಿಧನ

ಬೆಂಗಳೂರು: ಡಿಸೆಂಬರ್ 24ರಂದು ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸಂಭವಿಸಿದ್ದ ಸೇವಾ ವಾಹನದ ಅಪಘಾತದಲ್ಲಿ ರಾಜ್ಯದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಉಧಂಪುರ ಸೇವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 28 ವರ್ಷದ ಯೋಧ ದಿವಿವ್ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ನಿಧನರಾಗಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಆಲೂರು ನಿವಾಸಿ ದಿವಿನ್, ನಿಧನರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ 160 ಅಡಿ ಆಳದ ಕಂದಕಕ್ಕೆ ವಾಹನ ಉರುಳಿ ಬಿದ್ದಿತ್ತು. ರಾಜ್ಯದ ಮೂವರು ಯೋಧರು ಡಿಸೆಂಬರ್ 24ರಂದು ಹುತಾತ್ಮರಾಗಿದ್ದರು.

ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ: ಕಾರಿನ ಮೇಲೆ ಮೊಟ್ಟೆ ಎಸೆದು ದರೋಡೆ

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಿಜಾಡಿ ನಿವಾಸಿ ಅನೂಪ್ ಪೂಜಾರಿ, ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ನಿವಾಸಿ ದಯಾನಂದ ತಿರಕಣ್ಣನವರ, ಬಾಗಲಕೋಟೆ ಜಿಲ್ಲೆ ರಬಕವಿ -ಬನಹಟ್ಟಿ, ತಾಲೂಕಿನ ಮಹಾಲಿಂಗಪುರ ಗ್ರಾಮದ ಮಹೇಶ ನಾಗಪ್ಪ ಮಾಡಿಗೊಂಡ ಹುತಾತ್ಮರಾಗಿದ್ದರು. ಭಾನುವಾರ ವಿವಿನ್‌ ಅವರೂ ಹುತಾತ್ಮರಾಗಿದ್ದಾರೆ.

ಇದನ್ನೂ ನೋಡಿ: ನಿರಂಜನ -100| ಬುದ್ಧಿ ಭಾವ ಬದುಕು – ಬಂಜಗೆರೆ ಜಯಪ್ರಕಾಶ Janashakthi Media

Donate Janashakthi Media

Leave a Reply

Your email address will not be published. Required fields are marked *