ಬೆಂಗಳೂರು | ಎಲ್ಲಾ ಆಹಾರ ಉದ್ಯಮಿಗಳು FOSTAC ತರಬೇತಿ ಪಡೆಯುವುದು ಕಡ್ಡಾಯ – ರಾಘವೇಂದ್ರ ಶೆಟ್ಟಿ

ಬೆಂಗಳೂರು: ಭಾರತ ಸರ್ಕಾರ 2006ರಲ್ಲಿ ಆಹಾರ ಸುರಕ್ಷತಾ ಕಾಯ್ದೆ ಜಾರಿ ಮಾಡಿದೆ, ಇದರ ಅಡಿಯಲ್ಲಿ ಪ್ರತಿಯೊಬ್ಬ ಆಹಾರ ಉದ್ಯಮಿ ಕಡ್ಡಾಯವಾಗಿ ಫುಡ್ ಲೈಸೆನ್ಸ್ ಅಥವಾ ರಿಜಿಸ್ಟ್ರೇಷನ್ ಪಡೆದು ಆಹಾರ ಉದ್ಯಮವನ್ನು ನಡೆಸಬೇಕು. 2017ರಲ್ಲಿ ಕೇಂದ್ರ ಸರ್ಕಾರ ಆಹಾರ ಸುರಕ್ಷತಾ ತರಬೇತಿ ಮತ್ತು ಪಮಾಣ ಪತ್ರ ಕಾರ್ಯಕ್ರಮ (FOSTAC) ಜಾರಿ ಮಾಡಿದ್ದು, 2020 ರಲ್ಲಿ ಈ ತರಬೇತಿಯನ್ನ ಕಡ್ಡಾಯಗೊಳಿಸಿದೆ ಎಂದು ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣಪತ್ರ ಕೇಂದ್ರ ಕರ್ನಾಟಕ ರಾಜ್ಯ ಮುಖ್ಯಸ್ಥರಾದ ರಾಘವೇಂದ್ರ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದರು.

ನಗರದ ಪ್ರೇಸ್‌ ಕ್ಲಬ್‌ನಲ್ಲಿ ಮಾತನಾಡಿದ ಅವರು ಎಲ್ಲಾ ಆಹಾರ ಉದ್ಯಮಿಗಳು ತರಬೇತಿ ಪಡೆಯುವುದು ಕಡ್ಡಾಯ ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರ ತಿಳಿಸಿದಂತೆ ಎಲ್ಲಾ ರೀತಿಯ ಆಹಾರ ಉದ್ಯಮಿದಾರರು ಕಡ್ಡಾಯವಾಗಿ ಈ ತರಬೇತಿಯನ್ನು ಪಡೆಯಬೇಕಾಗಿದೆ. ತರಬೇತಿಯಲ್ಲಿ ಮೂರು ಹಂತ ನಿಗದಿಪಡಿಸಲಾಗಿದ್ದು ಪ್ರತಿ ಹಂತಕ್ಕೂ ನಿಗದಿತ ಶುಲ್ಕವನ್ನು ಆಹಾರ ಉದ್ದಿಮೆಗಳು ಬರಿಸಬೇಕಾಗುತ್ತದೆ ಎಂದು ಹೆಳಿದರು.

ಇದನ್ನೂ ಓದಿ : ಡಿ.21 ಬೆಂಗಳೂರಿನಲ್ಲಿ “ಪರ್ಯಾಯ ರಾಜಕಾರಣಕ್ಕಾಗಿ ಸಿಪಿಐ(ಎಂ) ಜನದನಿ ರ‍್ಯಾಲಿ”

ಕರ್ನಾಟಕ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಸಹ ಈ ರೀತಿ ನೊಂದಣಿ ಮಾಡಿಕೊಂಡು ತರಬೇತಿ ನೀಡುವ ಕಾರ್ಯ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣಪತ್ರ ಕೇಂದ್ರ  ನಡೆಸುತ್ತಾ ಬಂದಿದೆ ಎಂದು ತಿಳಿಸಿದರು.  ಬೆಂಗಳೂರು ನಗರದಲ್ಲಿ ಎಲ್ಲಾ ವಾರ್ಡ್‌ ಗಳಲ್ಲಿ ಪ್ರತಿವಾರ ಒಂದೊಂದು ವಾರ್ಡ್ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮ ಮಾಡುತ್ತೆವೆ ಎಂದರು.

ಯೂಟ್ಯೂಬ್ ಮಾಧ್ಯಮಗಳಲ್ಲಿ ಈ ಕಾರ್ಯಕ್ರಮದ ಬಗ್ಗೆ ತಪ್ಪು ಸಂದೇಶ ಹರಡುತ್ತಿದ್ದಾರೆ  ಕೆಲವೊಂದು ಯೂಟ್ಯೂಬ್ ಮಾಧ್ಯಮಗಳಲ್ಲಿ ನಕಲಿ ಫುಡ್ ಆಫೀಸರ್ ಹೆಸರಿನ ಕಾರ್ಯಕ್ರಮವನ್ನ ನಡೆಸಿ FOSTAC ತರಬೇತಿ ಬಗ್ಗೆ ತಪ್ಪು ಸಂದೇಶವನ್ನು ಹರಡುತ್ತಿದ್ದಾರೆ. ದಯವಿಟ್ಟು ಆರೀತಿ ಸುಳ್ಳು ಮಾಹಿತಿ ನೀಡಬೇಡಿ ನೀಡಬಾರದು ಎಂದರು.

ಮಾದ್ಯಮಗಳು  ದಾಖಲಾತಿಯನ್ನು ಪರಿಶೀಲಿಸಿ ಕಾರ್ಯಕ್ರಮವನ್ನು ವರದಿ ಮಾಡುವುದು ಉತ್ತಮ. ಯಾಕೆಂದರೆ ಇದು ಫುಡ್ ಲೈಸೆನ್ಸ್ ಮಾಡುವ ಕೆಲಸವಲ್ಲ, ಫುಡ್ ಲೈಸೆನ್ಸ್ ಬೇರೆ ಮತ್ತು FOSTAC ತರಬೇತಿ ಬೇರೆ ಆಗಿರುತ್ತದೆ, ಫುಡ್ ಲೈಸೆನ್ಸ್ ಮಾಡಲು ತಾಲೂಕು ಮಟ್ಟದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು,, ಜಿಲ್ಲಾ ಮಟ್ಟದಲ್ಲಿ ಅಂಕಿತ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿರುತ್ತಾರೆ ಎಂದು ಸ್ಪಷ್ಟನೆ ನೀಡಿದರು.

ನಮ್ಮ ಸಂಸ್ಥೆ ಯಾವುದೇ ರೀತಿಯ ಫುಡ್ ಲೈಸೆನ್ಸ್ ಅಥವಾ ರಿಜಿಸ್ಟ್ರೇಷನ್ ನೊಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ನಮ್ಮದು FOSTAC ತರಬೇತಿ ನೊಂದಣಿ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವಾಗಿರುತ್ತದೆ. FOSTAC ನೋಂದಣಿ ಮಾಡಲು ಅಗತ್ಯ ದಾಖಲೆಗಳಾಗಿ ಫುಡ್ ಲೈಸೆನ್ಸ್ ಅಥವಾ ರಿಜಿಸ್ಟ್ರೇಷನ್ ಮತ್ತು ಆಧಾರ್ ಕಾರ್ಡ್ ಕಡ್ಡಾಯವಾಗಿ ಪಡೆಯಬೇಕಾಗಿದೆ ಎಂದು ವಿವರಿಸಿದರು.

ಇದನ್ನೂ ನೋಡಿ : ಬೆಂಗಳೂರು ಸುರಂಗ ಮಾರ್ಗ ಶ್ರೀಮಂತರಿಗೆ ಮಾತ್ರ ಪ್ರಯೋಜನವೆಂಬ ವಾದದ ಸುತ್ತ… Janashakthi Media

 

 

Donate Janashakthi Media

Leave a Reply

Your email address will not be published. Required fields are marked *