ಶಿವಕಾಶಿ: ಪಟಾಕಿ ನಿಷೇಧದಿಂದ ಕೆಲಸ ಕಳೆದುಕೊಂಡ ಒಂದೂವರೆ ಲಕ್ಷ ಕಾರ್ಮಿಕರು

ಶಿವಕಾಶಿ: ದೀಪಾವಳಿ ಪ್ರಯುಕ್ತ  ಆಚರಿಸಲಾಗುವ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸುವ ಆಚರಣೆಯೂ ಒಂದಾಗಿದೆ. ಇದು ಒಂದು, ಹಬ್ಬದ ಆಚರಣೆಯಾದರೂ, ಕೆಲವಡೆ ವಾತಾವರಣ, ಪರಿಸರ ಮಾಲಿನ್ಯ, ಜನರ ಆರೋಗ್ಯದ ದೃಷ್ಟಿಯಿಂದ ಕೆಲವಡೆ ನಿಷೇಧಿಸಲಾಗುತ್ತದೆ. ಮತ್ತೊಂದೆಡೆ, ಪಟಾಕಿ ತಯಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡು, ಜೀವನ ಪರ್ಯಾಂತ ದುಡಿಮೆ ಮಾಡುವವರು ಬದುಕು ನಡೆಸುತ್ತಿದೆ.

ವಿಶೇಷವಾಗಿ ತಮಿಳುನಾಡಿನಲ್ಲಿ ಇದನ್ನೇ ವೃತ್ತಿ ಮಾಡಿಕೊಂಡು ಲಕ್ಷಾಂತರ ಕಾರ್ಮಿಕರಿದ್ದಾರೆ. ಪಟಾಕಿ ನಿಷೇಧ ಹಾಗೂ ಆಚರಣೆ ನಡುವಿನ ಸಂಕೀರ್ಣತೆಯಲ್ಲಿ ಅಂತಿಮವಾಗಿ ಬಲಿಪಶುವಾಗುವುದು ಕಾರ್ಮಿಕ ಬದುಕು ಮಾತ್ರ. ಈ ಬಾರಿ ವಿವಿಧ ರಾಜ್ಯಗಳಲ್ಲಿ ಪಟಾಕಿಗಳ ಮೇಲೆ ನಿರ್ಬಂಧ ವಿಧಿಸಿರುವ ಕಾರಣದಿಂದಾಗಿ ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಕನಿಷ್ಠ ಒಂದೂವರೆ ಲಕ್ಷ ಜನ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

ಪಟಾಕಿ ವಲಯವು 7 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದು, ಪ್ರಸ್ತುತ 1,000 ಕ್ಕೂ ಹೆಚ್ಚು ನೋಂದಾಯಿತ ಪಟಾಕಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂಬುದು ಗಮನಾರ್ಹ. 6.5 ಲಕ್ಷಕ್ಕೂ ಹೆಚ್ಚು ಶಿವಕಾಶಿ ಕುಟುಂಬಗಳಿಗೆ ಪಟಾಕಿ ಉದ್ಯಮ ಕಾರ್ಮಿಕ ಕುಟುಂಬಗಳ ಏಕೈಕ ಆದಾಯದ ಮೂಲವಾಗಿದೆ.

ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕತೆಯಿಂದಾಗಿ ಪಟಾಕಿ ಮಾರಾಟವಿಲ್ಲದೆ, ಇಡೀ ಉದ್ಯಮ ಸಾಕಷ್ಟು ಸಂಕಷ್ಟಕ್ಕೆ ಈಡಾಗಿತ್ತು. ಈ ಬಾರಿ, ಪಟಾಕಿ ಉದ್ಯಮದಲ್ಲಿ ಒಂದಷ್ಟು ಚೇತರಿಕೆಯ ಲಕ್ಷಣಗಳು ಕಾಣಲಾರಂಭಿಸಿದ್ದು, ದೇಶದ ಕೆಲವು ರಾಜ್ಯಗಳು ಪಟಾಕಿ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಉತ್ತಮ ವ್ಯಾಪಾರವಾಗುವೆಂದು ನಿರೀಕ್ಷೆಯಲ್ಲಿದ್ದ ಪಟಾಕಿ ಉದ್ಯಮದ ತಯಾರಕರಿಗೆ ನಷ್ಟದ ಭೀತಿ ಎದುರಾಗಿದೆ.

ಬೇರಿಯಂ ನಿಷೇಧ ಸೇರಿದಂತೆ ಇತ್ತೀಚಿನ ನಿಷೇಧದ ಕ್ರಮಗಳ ನಂತರ 1.5 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಗಾರ್ಲ್ಯಾಂಡ್ ಕ್ರ್ಯಾಕರ್ ಅಥವಾ ಪಟಾಕಿ ಸರ ಅತಿ ಹೆಚ್ಚು ಮಾರಾಟವಾಗುವ ವಸ್ತುವಾಗಿದ್ದು, ಅದನ್ನೇ ಈಗ ನಿಷೇಧಿಸಲಾಗಿದೆ. ಸಂಪೂರ್ಣವಾಗಿ ಕೈಯಿಂದಲೇ ತಯಾರುವ ಸರ ಪಟಾಕಿ ನಿಷೇಧಗೊಂಡಿದೆ. ಇದರಿಂದಾಗಿ ಕಾರ್ಮಿಕರು ಕೆಲಸ ಕಳೆದುಕೊಳ್ಳಲಿದ್ದಾರೆ.

ಸುಮಾರು 40 ಪ್ರತಿಶತದಷ್ಟು ಪಟಾಕಿ ಕಾರ್ಖಾನೆ ನೌಕರರು ಪಟಾಕಿ ಸರ ತಯಾರಿಸುವ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. ನಾನು ಕಳೆದ 20 ವರ್ಷಗಳಿಂದ ಪಟಾಕಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಶಿವಕಾಶಿ ಭಾಗದಲ್ಲಿ ಪಟಾಕಿ ಉದ್ಯಮ ಮಾತ್ರ ಉದ್ಯಮವಾಗಿದೆ. ಇಲ್ಲಿ ವಾಸಿಸುವ 5 ಲಕ್ಷ ಜನರ ಏಕೈಕ ಆದಾಯ ಪಟಾಕಿ ಉದ್ಯಮ. ಇಂಥ ಪರಿಸ್ಥಿತಿಯಲ್ಲಿ ನಾವು ಕೃಷಿ ಮಾಡಲು ಸಾಧ್ಯವಿಲ್ಲ. ಪಟಾಕಿ ವ್ಯಾಪಾರದಿಂದ ಮಾತ್ರ ನಾವು ಬದುಕಲು ಸಾಧ್ಯ ಎನ್ನುತ್ತಾರೆ ಪಟಾಕಿ ಕಾರ್ಮಿಕ ನಾಗೇಂದ್ರ ಅವರು.

ಹಲವು ವರ್ಷಗಳಿಂದ ಕೆಲವು ರಾಸಾಯನಿಕಗಳ ಬಳಕೆಗೆ ನಿರ್ಬಂಧ, ಕೆಲ ಸ್ಫೋಟಕಗಳ ತಯಾರಿಕೆಗೆ ನಿಷೇಧದಂತಹ ಸಮಸ್ಯೆಗಳಿಂದ ಪಟಾಕಿ ಉದ್ಯಮವು ನಲುಗುತ್ತಿದೆ. ಜೊತೆಗೆ ಮಳೆಯಿಂದಾಗಿ ಈ ಬಾರಿ ಪಟಾಕಿ ತಯಾರಿಕೆಯು ಕುಂಟಿತವಾಗಿದೆ. ಇದರಿಂದಲೂ ಸಾಕಷ್ಟು ಉದ್ಯೋಗ ನಷ್ಟವಾಗಿದೆ. ಅನೇಕ ರಾಜ್ಯಗಳು ದೀಪಾವಳಿಯ ಆಸುಪಾಸಿ ಸಂದರ್ಭದಲ್ಲಿಯೇ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಿವೆ. ಇದರಿಂದ ನಮ್ಮ ಜೀವನ ಸಂಕಷ್ಟಕ್ಕೀಡಾಗಿದೆ ಎನ್ನುತ್ತಾರೆ ಶಿವಕಾಶಿ ಕಾರ್ಮಿಕರು.

Donate Janashakthi Media

Leave a Reply

Your email address will not be published. Required fields are marked *