ಚಿಕ್ಕೋಡಿ | ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹಿಸಿ ಟ್ರ್ಯಾಕ್ಟರ್ ತಡೆದು ರೈತರ ಪ್ರತಿಭಟನೆ

ಚಿಕ್ಕೋಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಸ್ವಾಭಿಮಾನಿ ಶೇತ್ಕರಿ ಸಂಘಟನೆಗಳ ಸಹಯೋಗದಲ್ಲಿ ಪ್ರತಿ ಟನ್ ಕಬ್ಬಿಗೆ ₹3,500 ದರವನ್ನು ಸಕ್ಕರೆ ಕಾರ್ಖಾನೆಗಳು ನಿಗದಿ ಮಾಡಿ ಕಾರ್ಖಾನೆಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಭಾನುವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.  ಚಿಕ್ಕೋಡಿ

ಇದನ್ನೂ ಓದಿ : ತಿರುವನಂತಪುರ | ಪ್ರಜಾಪ್ರಭುತ್ವಕ್ಕೆ ಎಸ್‌ಐಆರ್ ಜಾರಿ ಅಪಾಯ – ಕೇರಳ ಸಿಎಂ ಪಿಣರಾಯಿ ವಿಜಯನ್

ನೆರೆಯ ಮಹಾರಾಷ್ಟ್ರದ ಕಡೆಗೆ ಭಾನುವಾರ ಬೆಳಿಗ್ಗೆ ತಾಲ್ಲೂಕು ವ್ಯಾಪ್ತಿಯ ವಿವಿಧ  ಭಾಗಗಳಿಂದ ಕಬ್ಬು ತುಂಬಿದ ಟ್ರ್ಯಾಕ್ಟರ್ ಹೋಗುತ್ತಿರುವ ವಿಷಯ ತಿಳಿದ ರೈತ ಮುಖಂಡರು ಬಸವೇಶ್ವರ ವೃತ್ತದ ಬಳಿಯಲ್ಲಿ ಟ್ರ್ಯಾಕ್ಟರ್ ತಡೆದು ಪ್ರತಿಭಟನೆ ಪ್ರಾರಂಭಿಸಿದರು.  ಚಿಕ್ಕೋಡಿ

ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ ₹3,700 ದರ ಘೋಷಣೆ ಮಾಡುವಂತೆ ಅಲ್ಲಿನ ಸ್ವಾಭಿಮಾನಿ ಶೇತ್ಕರಿ ಸಂಘಟನೆಯು ಪ್ರತಿಭಟನೆ ಮಾಡುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿ ಮಾಡುವ ಬೇಡಿಕೆಯು ಇಲ್ಲಿನ ರೈತರದಾಗಿದೆ. ಮುಧೋಳ-ನಿಪ್ಪಾಣಿ ಹಾಗೂ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿಗಳು ಸಂಧಿಸುವ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ರೈತರು ಪ್ರತಿಭಟನೆ ಮಾಡುತ್ತಿದ್ದರಿಂದ ವಾಹನ ಸವಾರರು ಪರದಾಡಿದರು. ಚಿಕ್ಕೋಡಿ

ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸತ್ಯಪ್ಪ ವಲ್ಯಾಪೂರೆ, ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ನಿಪ್ಪಾಣಿ ತಾಲ್ಲೂಕು ಅಧ್ಯಕ್ಷ ರಮೇಶ ಪಾಟೀಲ, ರಾಜು ಖಿಚಡೆ, ಜೆಡಿಎಸ್ ಮುಖಂಡ ಕಾಡಗೌಡ ಪಾಟೀಲ ಮುಂತಾದವರು ಮಾತನಾಡಿದರು.

ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದ ರೈತರು ರಸ್ತೆ ಮೇಲೆಯೇ ಅಡುಗೆ ಮಾಡಿ ಊಟ ಮಾಡಿ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.

ಪೊಲೀಸರು ಬಂದೋಬಸ್ತ್ ಮಾಡಿದ್ದರು. ಪಟ್ಟಣಕ್ಕೆ ಬರುವ ಬಸ್‌ ಹಾಗೂ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗದಲ್ಲಿ ತೆರಳುವ ವ್ಯವಸ್ಥೆ  ಮಾಡಲಾಗಿದೆ.

ಮಾರುತಿ ದೊಡಮನಿ, ಆನಂದ ಪಾಶ್ಚಾಪೂರೆ, ಕುಮಾರ ವಿಜಯ ಪೂಜೇರಿ, ರಾಜೇಂದ್ರ ಪಾಶ್ಚಾಪೂರೆ, ಬಸವಣ್ಣಿ ಕವಣಿ, ಮನೋಜ ಮನಗೂಳಿ, ಶಂಕರ ಪಡೇದ ಇದ್ದರು.

ಇದನ್ನೂ ನೋಡಿ : ವಚನಾನುಭವ 33 | ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ Janashakthi Media

Donate Janashakthi Media

Leave a Reply

Your email address will not be published. Required fields are marked *