ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರು ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದು 21 ಬೈಕ್‌ಗಳನ್ನ ಜಪ್ತಿ ಮಾಡಿ, ಐವರು ಬೈಕ್ ಕಳ್ಳರನ್ನ ಬಂಧಿಸಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಬೇಕಿದ್ದ ಐವರು ಬೈಕ್ ಕಳ್ಳರು ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಸಿಂಧನೂರು ತಾಲೂಕಿನ ಯಾಪಲಪರ್ವಿ ಕ್ರಾಸ್ ಬಳಿ ಕಳ್ಳತನವಾಗಿದ್ದ ಬೈಕ್ ಪ್ರಕರಣ ಭೇದಿಸಿದ ಪೊಲೀಸರು ತನಿಖೆ ವೇಳೆ 21 ಬೈಕ್ ಜಪ್ತಿ ಮಾಡಿದ್ದಾರೆ. ಪುನೀತ್ , ಉದಯ್, ಗಣೇಶ, ನಜೀರ್, ಮುಕ್ಕಣ್ಣ ಬಂಧಿತ ಆರೋಪಿಗಳು.
ಇದನ್ನೂ ಓದಿ:-ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ AIMPLB ರಾಷ್ಟ್ರವ್ಯಾಪಿ ಆಂದೋಲನ ಘೋಷಣೆ
ಕಳ್ಳರಿಂದ 10,25,000 ರೂ. ಬೆಲೆ ಬಾಳುವ 21 ಬೈಕ್ ಗಳ ಜಪ್ತಿಯಾಗಿವೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.